ಕಾಫಿ ತುಂಬಾ ಜನ ಇಷ್ಟಪಟ್ಟು ಕುಡಿಯುವ ಪೇಯ. ಆದರೂ ಅದನ್ನು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ ಎಂದು ಹೇಳುತ್ತಾರೆ. ಆದರೆ ಅದೇ ಬೆಲ್ಲ ಹಾಕಿ ಮಾಡಿದ ಬ್ಲ್ಯಾಕ್ ಕಾಫಿಯಲ್ಲಿ ಬಹಳಷ್ಟು ಆರೋಗ್ಯ ಲಾಭಗಳಿವೆಯಂತೆ. ಹಾಲು, ಸಕ್ಕರೆ ಹಾಕಿದ ಕಾಫಿ ಕುಡಿಯುವವರು ಬ್ಲ್ಯಾಕ್ ಕಾಫಿಗೆ ಬದಲಾಯಿಸಿಕೊಂಡರೆ ಕಾಫಿ ಕುಡಿದ ತೃಪ್ತಿನೂ ಸಿಗುತ್ತದೆ ಆರೋಗ್ಯಕ್ಕೂ ಲಾಭವಾಗುತ್ತದೆ.

ಜ್ಞಾಪಕ ಶಕ್ತಿ ಹೆಚ್ಚುವುದು:
ಕಾಫಿ ಕುಡಿಯುವುದರಿಂದ ಮೆದುಳು ಚುರುಕಾಗಿ ಇರುತ್ತದೆ. ಇದರಿಂದ ನೆನಪಿನ ಶಕ್ತಿ ಹೆಚ್ಚುವುದು. ಬ್ಲ್ಯಾಕ್‌ ಕಾಫಿ ಕುಡಿಯುವುದರಿಂದ ‘ಅಲ್ಜೈಮರ್ಸ್‌’ ಖಾಯಿಲೆ ಬರುವ ಸಾಧ್ಯತೆ ತುಂಬಾ ಕಡಿಮೆ ಎಂದು ಅಧ್ಯಯನವೂ ಹೇಳಿದೆ. ‘ಅಲ್ಜೈಮರ್ಸ್‌’ ಎಂದರೆ ನೆನಪಿನ ಶಕ್ತಿ ಕುಂದಿ ಮರೆಗುಳಿತನ ಕಾಡುವುದು.

ವ್ಯಾಯಾಮ ಮಾಡುವಾಗ ದೇಹಕ್ಕೆ ಶಕ್ತಿ ತುಂಬುವುದು:
ಕಾಫಿ ಕುಡಿದಾಗ ರಕ್ತದಲ್ಲಿ ‘ಎಪಿನ್ಫ್ರಿನ್ (Epinephrine)’ ಎಂಬ ಹಾರ್ಮೋನ್ ಬಿಡುಗಡೆ ಮಾಡುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದು. ಆದ್ದರಿಂದಲೇ ಜಿಮ್‌ ಟ್ರೈನರ್‌ ಬ್ಲ್ಯಾಕ್ ಕಾಫಿ ಕುಡಿಯಿರಿ ಎಂದು ಸಲಹೆ ನೀಡುತ್ತಾರೆ.
ಲಿವರ್‌ಗೆ ಒಳ್ಳೆಯದು:

ಬ್ಲ್ಯಾಕ್‌ ಕಾಫಿ ಕುಡಿಯುವವರಲ್ಲಿ ಲಿವರ್‌ ಕ್ಯಾನ್ಸರ್‌, ಹೆಪಟೈಟಿಸ್, ಫ್ಯಾಟಿ ಲಿವರ್‌ ಸಮಸ್ಯೆ ಇವುಗಳೆಲ್ಲಾ ಶೇ.80ರಷ್ಟು ಜನರಿಗೆ ಬರುವುದಿಲ್ಲ.ಹೊಟ್ಟೆಯನ್ನು ಶುದ್ಧೀಕರಿಸುತ್ತದೆ:
ಬೆಲ್ಲದ ಕಾಫಿ ಕುಡಿಯುವುದರಿಂದ ದೇಹದಲ್ಲಿರುವ ಬೇಡದ ಬ್ಯಾಕ್ಟೀರಿಯಾ ಹಾಗೂ ಕಶ್ಮಲವನ್ನು ಹೊರಹಾಕುವಲ್ಲಿ ಸಹಕಾರಿ.

ತೂಕ ಕಡಿಮೆಯಾಗುವುದು:
ಬ್ಲ್ಯಾಕ್ ಕಾಫಿ ಚಯಾಪಚಯ ಕ್ರಿಯೆಗೆ ಸಹಕಾರಿ. ತೂಕ ಕಡಿಮೆಯಾಗಲು ಚಯಾಪಚಯ ಕ್ರಿಯೆ ಸರಿಯಾಗಿ ಕಾರ್ಯನಿರ್ವಹಿಸುವುದು ಅವಶ್ಯಕ.

ಹೀಗೂ ಸಹಾಯಕಾರಿ:
ಮಧುಮೇಹವನ್ನು ನಿಯಂತ್ರಿಸಿ, ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

ನಿಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ ಹ್ಯಾಪಿ ಹಾರ್ಮೋನ್‌ ಬಿಡುಗಡೆ ಮಾಡುತ್ತದೆ.