ಸಿದ್ದಾಪುರ:ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠದಲ್ಲಿ ಏ.18 ರಿಂದ 22ರ ವರೆಗೆ ಜರುಗಲಿರುವ ಶಂಕರಪಂಚಮೀ ಉತ್ಸವದ ಹಿನ್ನೆಲೆಯಲ್ಲಿ ಸುವಸ್ತು ಸಂಗ್ರಹಣೆಗಾಗಿ ತೆರಳುತ್ತಿರುವ ಶಂಕರ ರಥಕ್ಕೆ ಗುರುವಾರ ಭಾನ್ಕುಳಿಮಠದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ನಂತರ ರಥವು ಪಟ್ಟಣದ ಹಾಲದಕಟ್ಟಾ ಗಣಪತಿ ದೇವಾಲಯಕ್ಕೆ ಆಗಮಿಸಿದಾಗ ಅಲ್ಲಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಕೊಳಗಿ, ಶಿರಳಗಿ ಮಾರ್ಗವಾಗಿ ರಥದ ಸಂಚಾರ ನಡೆದು ಸುವಸ್ತು ಸಂಗ್ರಹ ನಡೆಯಿತು.

RELATED ARTICLES  ಭೀಕರ ಅಪಘಾತ : ಇಬ್ಬರ ದುರ್ಮರಣ : ಕಾರು ಹಾಗೂ ಬೈಕ್ ನಡುವೆ ಅಪಘಾತ.

ಈ ಸಂದರ್ಭದಲ್ಲಿ ಮಂಡಲ ಕಾರ್ಯದರ್ಶಿ ಸತೀಶ ಹೆಗಡೆ ಆಲ್ಮನೆ, ಶಂಕರರಥದ ರೂವಾರಿಗಳಾದ ಮಧು ಭಟ್ಟ ಹಿರೇಕೈ, ಶ್ರೀಕಾಂತ ಭಟ್ಟ ತರಳಿ, ಗೋಪಾಲ ಹೆಗಡೆ ಸೂಳಗಾರ, ಸಿದ್ದಾಪುರ ವಲಯ ದಿಗ್ದರ್ಶಕ ನಾಗರಾಜ ಭಟ್ಟ, ವಲಯ ಅಧ್ಯಕ್ಷ ಶ್ರೀಕಾಂತ ಭಟ್ಟ ಕೊಳಗಿ, ಕಾರ್ಯದರ್ಶಿ ಎಂ.ವಿ.ಹೆಗಡೆ ಇತರರಿದ್ದರು.

RELATED ARTICLES  ಉತ್ತರಕನ್ನಡದಲ್ಲಿ ಒಂದು 525 ಕೋವಿಡ್ ಕೇಸ್..!