ಕುಮಟಾ; ತಾಲೂಕಾ ಮಟ್ಟದ ದೈಹಿಕ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾದಲ್ಲಿ ಗುರುವಾರ ಸಂಪನ್ನಗೊಂಡಿತು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್ ಎಸ್.ಭಟ್ಟ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೈಹಿಕ ಶಿಕ್ಷಕರು ದೈಹಿಕ ಶಿಕ್ಷಣದ ಕುರಿತು ಸಂಪೂರ್ಣ ಅರಿವನ್ನು ಪಡೆದು ಕಾರ್ಯನಿರ್ವಹಿಸಿದಲ್ಲಿ ವೃತ್ತಿಗೆ ಸಿಗಬಹುದಾದ ಗೌರವವನ್ನು ಪಡೆಯಲು ಸಾಧ್ಯ. ಕರ್ತವ್ಯ ನಿರ್ವಹಣೆಯ ಕುರಿತಾದ ದಾಖಲೆಗಳ ಬಗ್ಗೆ ಕಾರ್ಯಾಗಾರದಲ್ಲಿ ಸಮಗ್ರ ಚರ್ಚೆಯಾಗಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ದೈಹಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಕುಮಟಾ ತಾಲೂಕಾ ಸರಕಾರಿ ನೌರರ ಸಂಘದ ತಾಲೂಕಾಧ್ಯಕ್ಷ ರವೀಂದ್ರ ಭಟ್ಟ ಸೂರಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇವಲ ಕಾನೂನಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಪ್ರೀತಿಯಿಂದ ಅದು ಸಾಧ್ಯವಿದೆ. ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಹೇಗೆ ಬೆರೆತು ಕಾರ್ಯ ನಿರ್ವಹಿಸುತ್ತಾರೋ ಅದೇ ರೀತಿ ಅಧಿಕಾರಿ ವರ್ಗದವರು ಶಿಕ್ಷಕರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದರೆ ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಬಹುದು. ಅಂತಹ
ಒಂದು ಸಂಬಂದ ಬೆಳೆಸುವ ಕಾರ್ಯಕ್ರಮ ಪೂರಕವಾಗಲಿ ಎಂದರುು.
ತಾಲೂಕಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ದೀಪಕ ನಾಯಕ, ಸಂಯೋಜಕರಾದ ರೂಪಾ ಭಟ್ಟ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಶ್ರೀಮತಿ ನಾಯ್ಕ,ಕೃಷ್ಣಮೂರ್ತಿ, ಶಿವರಾಯ ನಾಯಕ ಉಪಸ್ಥಿತರಿದ್ದರು. ಸುನೀಲ ಅಂಬಿಗ ಸ್ವಾಗತಿಸಿದರು. ವಸಂತ ಶಾನಭಾಗ ಕಾರ್ಯಕ್ರಮ ನಿರೂಪಿಸಿದರು.

RELATED ARTICLES  ಸ್ಕೌಟ್ಸ್ ಸಂಸ್ಥಾಪಕ: ಬೇಡನ್ ಪೊವೆಲ್ ದಿನಾಚರಣೆ