ಶ್ರೀ ಇಡಗುಂಜಿ ಮಹಾಗಣಪತಿ ಮಂಡಳಿಯು ಕಳೆದ 32 ವರುಷಗಳಿಂದ ನಡೆಸುತ್ತಿರುವ ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ, ಕೆರೆಮನೆ ಬರುವ ಎಪ್ರಿಲ್ ತಿಂಗಳಿನಲ್ಲಿ ದಿನಾಂಕ 21 ರಿಂದ 30ರವರೆಗೆ ಯಕ್ಷಗಾನದ ತರಬೇತಿ ಕಾರ್ಯಾಗಾರವನ್ನು ಗುಣವಂತೆಯ ಯಕ್ಷಾಂಗಣದಲ್ಲಿ ಹಮ್ಮಿಕೊಂಡಿದೆ.

RELATED ARTICLES  ಕುಮಟಾದಲ್ಲಿ ಭಂಡಾರಿ ಸಾಮಾಜದ ಸಾಮೂಹಿಕ ಸತ್ಯನಾರಾಯಣ ಪೂಜೆ

ಈ 10 ದಿನಗಳ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಯಕ್ಷಗಾನದ ತರಬೇತಿಗಾಗಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ನೀಡಲಾಗುವುದು. ಯಕ್ಷಗಾನದ ಹೆಜ್ಜೆ ಮತ್ತು ಅಂಗೋಪಾಂಗಗಳ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ.

RELATED ARTICLES  ೨೦೨೧ ನೇ ಸಾಲಿನ “ವಿಶ್ವನಾಥ ಸಂಸ್ಕೃತಿ ಪುರಸ್ಕಾರಂ”

ಆಸಕ್ತರು ಸಂಪರ್ಕಿಸಿ:
ಕೆರೆಮನೆ ಶಿವಾನಂದ ಹೆಗಡೆ
ನಿರ್ದೇಶಕರು, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ
ಪೋ: ಗುಣವಂತೆ, ತಾ: ಹೊನ್ನಾವರ, ಉತ್ತರಕನ್ನಡ-581348
ದೂ: 9480516300

Keremane Yaksha Shibira 2018