ಹೊನ್ನಾವರ : ರಾಜಕೀಯ ವಿರೋಧಿಗಳು ವಿನಾಕಾರಣ ಶಾರದಾ ಶೆಟ್ಟಿಯವರ ಕಾಂಗ್ರೆಸ್ ಟಿಕೇಟ್ ಕುರಿತು ಅಪಪ್ರಚಾರ ನಡೆಸುತ್ತಿದ್ದು ಮಾದ್ಯಮಗಳಲ್ಲಿ ಬರುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಹೇಳಿದ್ದಾರೆ. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಾಸಕಿ ಶಾರದಾ ಎಂ. ಶೆಟ್ಟಿಯವರು ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಾದ್ಯಂತ ಜನಪರ, ಅಭಿವೃದ್ಧಿಪರ ಕೆಲಸದಲ್ಲಿ ತಮ್ಮನ್ನು ಹಗಲು-ರಾತ್ರಿ ತೊಡಗಿಸಿಕೊಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಯನ್ನು ತಂದು ಕ್ಷೇತ್ರದ ಜನತೆಯಿಂದ ಸೈ ಎನಿಸಿಕೊಂಡಿರುವ ಸಂಪೂರ್ಣ ಮಾಹಿತಿ ಕಾಂಗ್ರೆಸ್ ಪಕ್ಷದ ವರಿಷ್ಟ ಮಂಡಳಿಗೆ ಇದೆ. ಈಗಾಗಲೇ ಪಕ್ಷದ ಹೈಕಮಾಂಡ ಪ್ರಚಾರದಲ್ಲಿ ತೊಡಗುವಂತೆ ಶಾರದಾ ಶೆಟ್ಟಿಯವರಿಗೆ ಆದೇಶಿಸಿದ್ದಾರೆ. ಈ ಬಾರಿಯೂ ಕೂಡ ಶಾರದಾ ಶೆಟ್ಟಿಯವರು ಸಹಸ್ರಾರು ಮತಗಳ ಅಂತರದಿಂದ ಗೆಲುವು ಸಾಧಿಸುವುದು ಶತಃಸಿದ್ದ ಎಂದು ಜಗದೀಪ ತೆಂಗೇರಿ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಬರುವ ಸೋಮವಾರದಿಂದ ಪ್ರತಿ ಪಂಚಾಯತ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕರ್ತರನ್ನು ಚುನಾವಣೆಗೆ ಸನ್ನದ್ದಗೊಳಿಸುವ ನೀರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಮೊದಲನೇ ಸುತ್ತಿನಲ್ಲಿ ಒಂದು ವಾರಗಳ ಕಾಲ ಪ್ರತಿ ಪಂಚಾಯತ ಮಟ್ಟದಲ್ಲಿ ಪಕ್ಷ ಸಂಘಟಿಸಲಾಗುವುದು ಎಂದರು.

RELATED ARTICLES  ಯುವ ಜನತೆ ಹೆಚ್ಚು ಸಂಘಟಿತರಾಗಿ ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು- ನಾಗರಾಜ ನಾಯಕ ತೊರ್ಕೆ

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ ಮಾತನಾಡಿ ಈಗಾಗಲೇ ಪ್ರತಿ ಬೂತ್ ಮಟ್ಟದಲ್ಲಿ ಮನೆಮನೆಗೆ ಕಾಂಗ್ರೆಸ್ ಪುಸ್ತಿಕೆಯನ್ನು ಪ್ರತಿ ಮನೆಗೆ ತಲುಪಿಸಲಾಗಿದೆ. ಪಂಚಾಯತ ಕಾಂಗ್ರೆಸ್ ಘಟಕಗಳ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಮುಖಂಡರ ಸಲಹೆ, ಸೂಚನೆ ಪಡೆದು ಆ ನಂತರ ಬೂತ್ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. -2-ಕೆ.ಪಿ.ಸಿ.ಸಿ. ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಮಾತನಾಡಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಶ್ರೀಮತಿ ಶಾರದಾ ಶೆಟ್ಟಿಯವರ ಅವಧಿಯಲ್ಲಿ ನಡೆದಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಆರ್.ವಿ. ದೇಶಪಾಂಡೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ಆಸಕ್ತಿಯೇ ಕಾರಣವಾಗಿದೆ ಎಂದರು.

ಈಗಾಗಲೇ ವಿಧಾನಸಭಾ ಚುನಾವಣೆ ಎದುರಿಸಲು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಂಪೂರ್ಣ ಸಜ್ಜಾಗಿದ್ದು ನಾಳೆ ಕುಮಟಾದ ವೈಭವ ಹೊಟೆಲ್ ಸಭಾಭವನದಲ್ಲಿ ಕುಮಟಾ ಕ್ಷೇತ್ರದ ಬೂತ್ ಅಧ್ಯಕ್ಷರು-ಉಪಾಧ್ಯಕ್ಷರಿಗೆ ಒಂದು ದಿನದ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಎನ್. ಮೂರ್ತಿ ಶಿಭಿರವನ್ನು ನಡೆಸಿಕೊಡಲಿದ್ದಾರೆ ಎಂದುರು.
ಸಭೆಯಲ್ಲಿ ತಾಲೂಕಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಸೋಮಯ ಮುಕ್ರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಇಂಟಕ್ ಅಧ್ಯಕ್ಷ ಆಗ್ನೇಲ್ ಡಾಯಸ್, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಕಾಂಗ್ರೆಸ್ ಮೀನುಗಾರ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ತಾಂಡೇಲ್, ಪ. ಪಂ., ಸದ್ಯರಾದ ಸುರೇಶ ಮೇಸ್ತ, ಮಂಜುನಾಥ ಖಾರ್ವಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟ್ ಇನ್ನೂ ಮುಂತಾದವರು ಸಂಘಟನೆಯ ಕುರಿತು ಮಾತನಾಡಿದರು.

RELATED ARTICLES  ಶಬರೀಮಲೆಗೆ ಮಹಿಳೆಯರ ಪ್ರವೇಶ ತೀರ್ಪು:ಅಯ್ಯಪ್ಪ ಭಕ್ತರಿಂದ ಕುಮಟಾದಲ್ಲಿ ಪ್ರತಿಭಟನೆ.

ಸಭೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ 10 ಘಟಕಗಳ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಪಾಧಿಕಾರಿಗಳೂ, ವಿವಿಧ ಕಾಂಗ್ರೆಸ್ ಸೆಲ್‍ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹುಸೇನ್ ಖಾದ್ರಿಯವರು ಕೊನೆಯಲ್ಲಿ ವಂದಿಸಿದರು.