ಕಾರವಾರ: ಕುಮಟಾ-ಹೊನ್ನಾವರದ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೋನಿ ಅವರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣದಲ್ಲಿ ಸೋನಿಯವರಿಗೆ ಕಾರವಾರ ನ್ಯಾಯಲಯ ನಿನ್ನೆ ಜಾಮೀನು ನೀಡಿದ್ದು,ಇಂದು ಅವರು ಬಿಡುಗಡೆಗೊಂಡು ಕಾರವಾರದಿಂದ ಕುಮಟಾಕ್ಕೆ ಆಗಮಿಸಿದರು.
ಅಪಾರ ಅಭಿಮಾನಿಗಳು ಅವರನ್ನು ಕಾರವಾರದಲ್ಲಿಯೇ ಸ್ವಾಗತಿಸಿದರು. ಅವರಿಗೆ ಹಾರ ಹಾಕಿ ಸ್ವಾಗತಿಸಿದರು. ಕಾರವಾರದಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೋನಿಯವರಿಗೆ ಪೇಟ ತೊಡಿಸಿ ಅವರನ್ನು ಕುಮಟಾಕ್ಕೆ ಕರೆತಂದರು.
ಕುಮಟಾ ನಗರಕ್ಕಾಗಮಿಸಿದ ಸೋನಿಯವರನ್ನು ಅಭಿಮಾನಿಗಳು ಪ್ರೀತಿಯಿಂದ ಬರಮಾಡಿಕೊಂಡರು.
ನಡೆದದ್ದೇನು?
ಗೋ ಕಳ್ಳ ಸಾಗಾಣಿಕೆ ದಾರರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಿಜೆಪಿ ಮುಖಂಡ ಸುರಜ್ ನಾಯ್ಕ ಸೋನಿ ಯವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.
ಮಾರ್ಚ ೭ ರಂದು ಹೊನ್ನಾವರದ ಮೂಲಕ ಅನ್ಯ ಕೋಮಿನ ಮೂರು ಜನರು ಜಾನುವಾರುವನ್ನು ಭಟ್ಕಳಕ್ಕೆ ಸಾಗಿಸುತಿದ್ದರು ಈ ವೇಳೆ ಅವರನ್ನು ಹಿಡಿದು ಥಳಿಸಿ ಪೊಲೀಸರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.ನಂತರ ಈ ಘಟನೆಯಲ್ಲಿ ಸೂರಜ್ ನಾಯ್ಕ ಸೋನಿ ಸೇರಿದಂತೆ ೭ ಜನರ ಮೇಲೆ ಹೊನ್ನಾವರ ಪೊಲೀಸರು ಕಲಂ ೩೦೭ ರಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಮೊದಲ ಬಾರಿ ಆರು ಜನರನ್ನು ಬಂಧಿಸಿದ್ದ ಪೊಲೀಸರು ಬಿಜೆಪಿ ಮುಖಂಡ ಸೂರಜ್ ಸೋನಿ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ ವೇಳೆ ನಿಜಾಮುದ್ದಿನ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯಾರ್ಥಿ ಯಾಗಿದ್ದ ಸೂರಜ್ ಸೋನಿ ಈ ಬಾರಿ ಕೂಡ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಪ್ರಭಲ ಬಿಜೆಪಿ ಟಿಕೆಟ್ ಆಕಾಂಕ್ಷಿಯರಲ್ಲಿ ಒಬ್ಬರಾಗಿದ್ದಾರೆ.