ಶಿರಸಿ : ಶ್ರೀ ಶಂಕರ ಜಯಂತಿಯನ್ನು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಏ.20 ಹಾಗೂ 21 ರಂದು ಕ್ರಮವಾಗಿ ಸ್ವರ್ಣವಲ್ಲೀ ಹಾಗೂ ಯೋಗ ಮಂದಿರದಲ್ಲಿ ನಡೆಯಲಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸ್ವರ್ಣವಲ್ಲೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕ ಡಾ.ಶಂಕರ ಭಟ್ ಉಂಚಳ್ಳಿ, ಏ.20 ರಂದು ಸ್ವರ್ಣವಲ್ಲೀ ಯಲ್ಲಿ ಬೆಳಿಗ್ಗೆ 9 ರಿಂದ ಧಾರ್ಮಿಕ ಪೂಜೆ ನಡೆಯಲಿದ್ದು, ಗಣಪತಿ ಪೂಜಾ, ಸಂಕಲ್ಪ, ಋತ್ವಿಕ್ ವರಣ, ವೇದ ಪಾರಾಯಣ, ಶ್ರೀ ಶಂಕರ ದಿಗ್ವಿಜಯ ಮತ್ತು ಭಾಷ್ಯತ್ರಯ ಪಾರಾಯಣ, ಗಾಯತ್ರಿ ಜಪ, ಪುರುಷಸೂಕ್ತ ಜಪ ಹಾಗೂ ಶ್ರೀ ಶಂಕರಾಚಾರ್ಯ ಕಲ್ಪೋಕ್ತ ಮಹಾಪೂಜೆ, ಮಾತೆಯರಿಂದ ಶ್ರೀ ಶಂಕರರ ಸಮಗ್ರ ಸ್ತೋತ್ರಗಳ ಪಾರಾಯಣ ನಡೆಯಲಿದೆ. ನಂತರ ಮಧ್ಯಾಹ್ನ 4.30 ರಿಂದ ಸುಧರ್ಮಾ ಸಭಾಂಗಣದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಹಾಗೂ ಆರ್ಷ ಪೀಠದ ಶ್ರೀ ಚಿದ್ರೂಪಾನಂದ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಇರಲಿದೆ ಎಂದರು.

RELATED ARTICLES  ಅಜಾಗರೂಕತೆಯಿಂದಾಗಿ ಹಾರಿಗೋಗುತ್ತಿದೆ ಅಮಾಯಕರ ಪ್ರಾಣ: ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸರ್ವಜ್ಞೆಂದ್ರ ಸರಸ್ವತೀ ಪ್ರತಿಷ್ಠಾನ ಹಾಗೂ ಯೋಗ ಮಂದಿರದ ವತಿಯಿಂದ ಶ್ರೀ ಶಂಕರ ಜಯಂತಿ ಏ.21 ರಂದು ನಗರದ ಯೋಗ ಮಂದಿರದಲ್ಲಿ ನಡೆಯಲಿದೆ. ಮಧ್ಯಾಹ್ನ 4.30 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಹಾಗೂ ಆರ್ಷ ಪೀಠದ ಶ್ರೀ ಚಿದ್ರೂಪಾನಂದ ಸ್ವಾಮಿಗಳ ದಿವ್ಯ ಸಾನ್ನಿಧ್ಯ ಇರಲಿದ್ದು,
ಅಭ್ಯಾಗತರಾಗಿ ರಾಮಕೃಷ್ಣಶ್ರಮದ ಶ್ರೀ ಸ್ವಾಮಿ ನಿತ್ಯಾನಂದ ಜೀ ಮಹಾರಾಜ್ ಆಗಮಿಸಲಿದ್ದಾರೆ.

ಈ ಮೊದಲು ಏ.16 ರಿಂದ 19 ರ ತನಕ ಜಯಂತಿಯ ಅಂಗವಾಗಿ ಆಧ್ಯಾತ್ಮ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಪ್ರವಚನಕಾರರಾಗಿ ಆರ್ಷ ಪೀಠದ ಶ್ರೀ ಚಿದ್ರೂಪಾನಂದ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಅದೇ ರೀತಿ ಏ.15 ರ ಬೆಳಿಗ್ಗೆ 9.30 ರಿಂದ ಮಾತೆಯರ ಹಾಗೂ ಕುಮಾರಿಯರ ವಿಭಾಗದಲ್ಲಿ ಶ್ರೀ ಶಂಕರ ಸ್ತೋತ್ರ ಕಂಠಪಾಠ ಸ್ಪರ್ಧೆ ಯೋಗ ಮಂದಿರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

RELATED ARTICLES  ಜಿ.ಪಂ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರೀ ಇನ್ನಿಲ್ಲ.

ಜಯಂತಿಯ ಅಂಗವಾಗಿ ವಿದ್ವತ್ ಸಮ್ಮಾನ ಮಾಡಲಾಗುತ್ತಿದ್ದು, ಸಂಸ್ಕೃತ, ಸಾಹಿತ್ಯ, ಶಿಕ್ಷಣ, ಯಕ್ಷಗಾನ, ಪ್ರವಚನ, ಲೇಖನ ಹೀಗೆ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಅವರಿಗೆ ಸಾಧನಾ ಶಂಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಲ್ಲದೇ ಗೋಪಾಲಕೃಷ್ಣ ಘನಪಾಠಿ ಬೀಸಗೋಡ ಗೋಳಿಗದ್ದೆ ಹಾಗೂ ವೇದ ವಿದ್ವಾಂಸ ಪುಟ್ಟಯ್ಯ ಭಟ್ಟ ಮತ್ತೀಘಟ್ಟ ಇವರುಗಳನ್ನು ಸ್ವರ್ಣವಲ್ಲೀ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಗುತ್ತಿದೆ. ಇದರೊಂದಿಗೆ ಯೋಗ ಮಂದಿರದಲ್ಲಿ ಆಚಾರ್ಯಶಂಕರಶ್ರೀ ಪ್ರಶಸ್ತಿಯನ್ನು ಪ್ರೊ.ವಿಶ್ವನಾಥ ಹಂಪಿಹೊಳಿ ಇವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಎನ್.ಹೆಗಡೆ ಬೊಮ್ನಳ್ಳಿ, ಕೆ.ವಿ.ಭಟ್, ಎಸ್.ಎನ್.ಭಟ್, ದಾಮೋದರ ಭಟ್, ಸಿ.ಎಸ್. ಹೆಗಡೆ ಇದ್ದರು.