ಭಟ್ಕಳ: ಚುನಾವಣೆ ಸಂದರ್ಭದಲ್ಲಿ ನಡೆಯುವ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಲು ಗಡಿಭಾಗಗಳಲ್ಲಿ ಪ್ರತ್ಯೇಕ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸುವುದಾಗಿ ಭಟ್ಕಳದಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಸಹಾಯಕ ಆಯುಕ್ತ ಎನ್.ಸಿದ್ದೇಶ್ವರ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ತಾಲೂಕಿನ ಗಡಿಭಾಗದ ಗೋರ್ಟೆ, ಪುರವರ್ಗ, ಕುಂಟವಾಣಿಗಳಲ್ಲಿ ಪ್ರತ್ಯೇಕವಾಗಿ ಚೆಕ್ ಪೋಸ್ಟ್ ನಿರ್ಮಾಣ ಮಾಡುತ್ತಿದ್ದು ಈ ಮೂಲಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಲಾಗುತ್ತಿದ್ದು ಹೆಂಡ ಹಾಗೂ ಹಣದ ಚಲಾವಣೆಯಾಗದಂತೆ ಅಧಿಕಾರಿಗಳು ಸೂಕ್ತ ಕ್ರಮಜರಗಿಸುತ್ತಾರೆ, ಕ್ಷೇತ್ರದಲ್ಲ ವಿಶೇಷ ತಂಡಗಳನ್ನು ರಚಿಸುವುದರ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದರು.

RELATED ARTICLES  ಸ್ವಿಮ್ಮಿಂಗ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ಪಿಯು ವಿದ್ಯಾರ್ಥಿಗಳು

ಮತದಾರರ ಪಟ್ಟಿಯಲ್ಲಿ ನೂತನವಾಗಿ ಹೆಸರು ಸೇರ್ಪಡೆಯಾಗುವ ಮತದಾರರ ಹೆಸರು ಸೇರ್ಪಡೆಗೊಳಿಸುವುದು, ಬಿಟ್ಟುಹೋಗಿರುವವರ ಹೆಸರನ್ನು ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಬಾರಿ ವಿದ್ಯುನ್ಮಾನ ಮತಯಂತ್ರದೊಂದಿಗೆ ವಿವಿಪ್ಯಾಟ್ ಬಳಕೆಯಾಗುತ್ತಿದೆ. ಮತದಾರರಿಗೆ ಮುಕ್ತವಾತರಣ ಕಲ್ಪಿಸಲಾಗುವುದು ಎಂದರು.

RELATED ARTICLES  ಬರ್ಗಿ ಪ್ರೌಢಶಾಲೆಯ ಗರಿಗೆದರಿದ ಗಿರಿ...!