ನವದೆಹಲಿ: ಸಿಬಿಎಸ್‌ಇ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ದೆಹಲಿ ಪೊಲೀಸರು ಶನಿವಾರ ಹಿಮಾಚಲ ಪ್ರದೇಶದ ಮೂವರನ್ನು ಬಂಧಿಸಿದ್ದಾರೆ.

ಹಿಮಾಚಲ ಪ್ರದೇಶದ ಊನಾ ಜಿಲ್ಲೆಯ ಡಿಎವಿ ಶಾಲೆಯ ಅರ್ಥಶಾಸ್ತ್ರ ಶಿಕ್ಷಕ ರಾಕೇಶ್ ಕುಮಾರ್, ಗುಮಾಸ್ತ ಅಮಿತ್ ಹಾಗೂ ಪರಿಚಾರಕ ಅಶೋಕ್ ಬಂಧಿತ ಆರೋಪಿಗಳು.

RELATED ARTICLES  ಭ್ರಷ್ಟಾಚಾರ : ಐದು ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳ ದಾಳಿ.

ಊನಾದಿಂದ ಇವರನ್ನು ದೆಹಲಿಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಯಿತು ಎಂದು ದೆಹಲಿ ವಿಶೇಷ ಆಯುಕ್ತ (ಅಪರಾಧ) ಆರ್‌.‍ಪಿ. ಉ‍ಪಾಧ್ಯಾಯ ತಿಳಿಸಿದ್ದಾರೆ. ಸಿಬಿಎಸ್‌ಇ ಪರೀಕ್ಷಾ ಕೇಂದ್ರವಾಗಿದ್ದ ಊನಾದ ಜವಾಹರ ನವೋದರ ಶಾಲೆಯಲ್ಲಿ ರಾಕೇಶ್ ಕುಮಾರ್ ಮೇಲ್ವಿಚಾರಕರಾಗಿದ್ದರು.

RELATED ARTICLES  ಕುಮಟಾ ಶಿರಸಿ ರಸ್ತೆಯಲ್ಲಿ ಲಾರಿಗೆ ಬೆಂಕಿ; ಕೆಲಕಾಲ ಭಯದ ವಾತಾವರಣ.(ವಿಡಿಯೋ)