ನವದೆಹಲಿ: ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯಲು ಮತ್ತು ಬೇಸಿಗೆಯಲ್ಲಿ ಆರೋಗ್ಯವಾಗಿ ದೇಹದ ಸೌಂದರ್ಯವನ್ನು ಕಾಪಾಡಲು ಸೌತೆಕಾಯಿ ಸಹಾಯವಾಗಬಹುದು ಎನ್ನುತ್ತಾರೆ ತಜ್ಞರು.

ಒರಿಫ್ಲೇಮ್ ಇಂಡಿಯಾದ ಆರೋಗ್ಯ ತಜ್ಞೆ ಸೋನಿಯಾ ನಾರಂಗ್ ಮತ್ತು ಸೋನಿಯಾ ಮಾತುರ್ ಅವರು ಬೇಸಿಗೆಯಲ್ಲಿ ಸೌತೆಕಾಯಿಯ ಉಪಯೋಗಗಳನ್ನು ಹಂಚಿಕೊಂಡಿದ್ದಾರೆ:

ಸೌತೆಕಾಯಿಯಲ್ಲಿ ಶೇಕಡಾ 95ರಷ್ಟು ನೀರಿರುತ್ತದೆ. ದೇಹ ಒಣಗಿಹೋಗದಂತೆ ತಡೆಯುತ್ತದೆ ಮತ್ತು ಅಲ್ಲದೆ ದೇಹದಿಂದ ಬೇಡದ ವಸ್ತುಗಳನ್ನು ತೆಗೆದುಹಾಕುತ್ತದೆ.
ನಾರಿನ ಅಂಶಗಳು, ಪೊಟಾಷಿಯಂ ಮತ್ತು ಮೆಗ್ನೇಷಿಯಂ ಸತ್ವಗಳು ಸೌತೆಕಾಯಿಯಲ್ಲಿ ಹೆಚ್ಚಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸೌತೆಕಾಯಿ ರಸವನ್ನು ಚರ್ಮಕ್ಕೆ ಹಾಕುತ್ತಿದ್ದರೆ ಮುಖ ಹೊಳೆಯುತ್ತಿರುತ್ತದೆ. ಸೌತೆಕಾಯಿಯಲ್ಲಿರುವ ಪೊಟಾಷಿಯಂ ಒಣಗಿದ ಚರ್ಮಕ್ಕೆ ಉತ್ತಮ.

RELATED ARTICLES  ರಾತ್ರಿ ಕೆಟ್ಟ ಕನಸು ಬೀಳಬಾರದು ಎಂದರೆ ಏನು ಮಾಡಬೇಕು ಗೊತ್ತಾ..?

ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ಸೌತೆಕಾಯಿಯಿಂದ ನಿವಾರಿಸಬಹುದು.ಸೌತೆಕಾಯಿಯ ತುಂಡುಗಳನ್ನು ಕಣ್ಣಿನ ಸುತ್ತ ಸುಮಾರು 8ರಿಂದ 10 ನಿಮಿಷಗಳ ಕಾಲ ಇಟ್ಟರೆ ಕಣ್ಣಿನ ಸುತ್ತ ಕಪ್ಪು ಕಲೆಗಳು ಮಾಯವಾಗುತ್ತವೆ. ಮುಖಕ್ಕೆ ಕೂಡ ಆಗಾಗ ಹಚ್ಚುತ್ತಿರಬಹುದು.

ಹೆಚ್ಚಿನ ನೀರಿನ ಅಂಶಗಳಿರುವುದರಿಂದ ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಡೆಯುತ್ತದೆ. ಸೌತೆಕಾಯಿ ಜ್ಯೂಸ್ ನ್ನು ಮೊಸರು ಅಥವಾ ನಿಂಬೆಹಣ್ಣಿನ ಜ್ಯೂಸ್ ನೊಂದಿಗೆ ಮಿಶ್ರಣ ಮಾಡಿ 10-15 ನಿಮಿಷ ಚರ್ಮಕ್ಕೆ ಹಚ್ಚಿ ಬಿಡಬೇಕು.
ಹೊಟ್ಟೆಯಲ್ಲಿನ ಉರಿಯನ್ನು ಕಡಿಮೆ ಮಾಡುವಲ್ಲಿ ಸೌತೆಕಾಯಿ ಸಹಾಯ ಮಾಡುತ್ತದೆ. ಉಸಿರು ವಾಸನೆ ಬರುವುದನ್ನು ಕೂಡ ಸೌತೆಕಾಯಿ ತಿನ್ನುವುದರಿಂದ ತಡೆಯಬಹುದು.
ಸೌತೆಕಾಯಿ ಬೀಜದಲ್ಲಿ ಪೊಟಾಷಿಯಂ ಮತ್ತು ವಿಟಮಿನ್ ಇಗಳಿರುತ್ತವೆ. ಈ ಎರಡೂ ಅಂಶಗಳು ದೇಹಕ್ಕೆ ಒಳ್ಳೆಯದು.ಪ್ರತಿದಿನ ಸಾಕಷ್ಟು ನೀರಿನೊಂದಿಗೆ ಸೌತೆಕಾಯಿ ಸೇವಿಸುವುದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ.
ಸಿಲಿಕಾ ಅಂಶ ಸಾಕಷ್ಟು ಇರುವ ಸೌತೆಕಾಯಿ ಉಗುರು ಮತ್ತು ಕೂದಲಿನ ಬೆಳವಣಿಗೆಗೆ ಉತ್ತಮ. ಸಾಕಷ್ಟು ಸೌತೆಕಾಯಿ ತಿನ್ನುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

RELATED ARTICLES  ಒತ್ತಡ, ಖಿನ್ನತೆಗೆ ಕೆಲವೊಮ್ಮೆ ಏಕಾಂತವೇ ಮದ್ದು: ಸಂಶೋಧಕರು