ಸಿದ್ದಾಪುರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ಭೀಮಣ್ಣ ಟಿ.ನಾಯ್ಕ ಅವರಿಗೇ ಟಿಕೇಟ್ ನೀಡಬೇಕು ಎಂದು ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಆಗ್ರಹಿಸಿದರು.

ಶನಿವಾರ ಪಟ್ಟಣದಲ್ಲಿ ಆರ್.ವಿ.ದೇಶಪಾಂಡೆ ಅವರು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಪಕ್ಷದಿಂದ ಭೀಮಣ್ಣ ನಾಯ್ಕ ಅವರಿಗೇ ಟಿಕೇಟ ನೀಡಬೇಕು. ಅವರು ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷದ ಸಂಘಟನೆ ಮಾಡಿದ್ದಾರೆ. ಕಾರ್ಯಕರ್ತರಿಗೂ ಉತ್ಸಾಹ ಮೂಡಿಸುತ್ತಿದ್ದಾರೆ. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಬಾರದ, ಎಲ್ಲಿಯೂ ಗುರುತಿಸಿಕೊಳ್ಳದವರಿಗೆ, ಕಾರ್ಯಕರ್ತರೊಂದಿಗೆ ಹಾಗೂ ಮುಖಂಡರೊಂದಿಗೆ ಗುರುತಿಸಿಕೊಳ್ಳದವರಿಗೆ ಟಿಕೇಟ್ ನೀಡಿದರೆ ಪಕ್ಷ ಹಾನಿ ಉಂಟಾಗುತ್ತದೆ ಎಂದು ಕಾರ್ಯಕರ್ತರು ತಿಳಿಸಿದಾಗ ನಾನು ಟಿಕೇಟ್ ನೀಡುವವನಲ್ಲ. ಈಗಾಗಲೇ ಪಕ್ಷದ ವೀಕ್ಷಕರು ಬಂದು ಯಾರು ಅಭ್ಯರ್ಥಿ ಆಗಬಹುದೆಂದು ಕಾರ್ಯಕರ್ತರ,ಮುಖಂಡರ ಹೇಳಿಕೆ ಪಡೆದುಕೊಂಡು ಹೋಗಿದ್ದಾರೆ. ಪಕ್ಷದ ಹೈಕಮಾಂಡ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೆಯೋ ಅವರ ಪರವಾಗಿ ಕೆಲಸಮಾಡಬೇಕೆಂದು ಆರ್.ವಿ.ದೇಶಪಾಂಡೆ ಹೇಳಿದರು.
ಇದಕ್ಕೆ ಅಸಮಾದಾನಗೊಂಡ ನೂರಾರು ಕಾರ್ಯಕರ್ತರು ಭೀಮಣ್ಣ ಅವರಿಗೆ ಟಿಕೇಟ್ ನೀಡಬೇಕೆಂಂದು ಘೋಷಣೆ ಕೂಗಿದರು.

RELATED ARTICLES  ಮಿರ್ಜಾನ್ ಸಮೀಪ ಅಪಘಾತ : ಓರ್ವ ಸಾವು.

ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ನಾಗರಾಜ, ಭೀಮಣ್ಣ ಟಿ.ನಾಯ್ಕ, ತಾಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್, ಎಸ್.ಬಿ.ಗೌಡರ್,ಈಶ್ವರ ನಾಯ್ಕ, ಎನ್.ಡಿ.ನಾಯ್ಕ ಇತರಿದ್ದರು.

RELATED ARTICLES  ಕುಮಟಾ ಪಟ್ಟಣಕ್ಕೆ ನಿತ್ಯ ನೀರು ಪೂರೈಕೆ