ತರಕಾರಿ ಮತ್ತು ಸೊಪ್ಪುಗಳ ಸಲಾಡ್ ತಿನ್ನುವುದು ಎಷ್ಚೊಂದು ಒಳ್ಳೆಯದು ನಿಮಗೆ ಗೊತ್ತೇ? ಇಂಥ ಸಲಾಡ್‌ಗಳಲ್ಲಿ ಅತ್ಯಗತ್ಯ ಪೋಷಕಾಂಶಗಳು, ನಾರಿನ ಅಂಶ ಮತ್ತು ಪ್ರೋಟೀನ್ ಗಳಿರುತ್ತವೆ ಅನ್ನುವುದನ್ನು ನೀವು ಕೇಳಿದ್ದೀರಿ. ಆದರೆ, ನಿಮಗೆ ಗೊತ್ತೇ? ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಬಸಳೆ, ಪಾಲಕ್ ಇತ್ಯಾದಿಗಳನ್ನು ಹೊಂದಿರುವ ಹಸಿರು ಸಲಾಡ್‌ಗಳನ್ನು ತಿನ್ನುವುದರಿಂದ ನಿಮ್ಮ ಮೆದುಳು ಇತರ ವಯಸ್ಕರಿಗೆ ಹೋಲಿಸಿದಲ್ಲಿ ಕನಿಷ್ಟ 11 ವರ್ಷಗಳಷ್ಟು ಯಂಗ್ ಅಂದರೆ ತಾರುಣ್ಯದಿಂದ ಕೂಡಿರುತ್ತದೆ ಎಂದು ಹೇಳಲಾಗಿದೆ.

RELATED ARTICLES  ಇಷ್ಟೆಲ್ಲಾ ಅನುಕೂಲಗಳಿರುವಾಗ ಲೆಟ್ಸ್‌ ಎಂಜಾಯ್ ಬ್ಲ್ಯಾಕ್‌ ಕಾಫಿ…!!!

ಸಲಾಡ್‌ಗಳನ್ನು ತಿನ್ನುವುದು ನಿಮ್ಮ ನೆನಪಿನ ಶಕ್ತಿ ಮತ್ತು ಬುದ್ಧಿಶಕ್ತಿಯನ್ನೂ ವೃದ್ಧಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಿದ್ದರೆ, ಯಾವುದೇ ಕಾರಣಕ್ಕೂ ಪಾಲಕ್, ಪುದೀನ, ಬಸಳೆ, ಕೊತ್ತಂಬರಿ, ಸೌತೆಕಾಯಿ, ಕ್ಯಾರೆಟ್, ಮೂಲಂಗಿ ಇತ್ಯಾದಿಗಳನ್ನು ಹೊಂದಿರುವ ಸಲಾಡ್ ತಿನ್ನುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

RELATED ARTICLES  ಆರೋಗ್ಯಕರ ಜೀವನ ಮತ್ತು ಆರೋಗ್ಯಕರ ಹೃದಯಕ್ಕಾಗಿ ಪಂಚ ಸೂತ್ರಗಳು!