ಐಪಿಎಲ್ ಮೂಲಕ ಕೋಟಿ-ಕೋಟಿ ಹಣ ಜೇಬಿಗಿಳಿಸಿಕೊಳ್ಳುತ್ತಿರುವ ಕ್ರಿಕೆಟರ್ಸ್ಗೆ ಈಗ ಬಿಸಿಸಿಐ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಐಪಿಎಲ್ ಆಡುತ್ತಿರುವ ಆಟಗಾರರ ದೈನಂದಿನ ಭತ್ಯೆಯಲ್ಲಿ ಬಿಸಿಸಿಐ ಬದಲಾವಣೆ ಮಾಡಿದೆ.
ಭತ್ಯೆಯಲ್ಲಿ ಬಂಪರ್..!
ಈ ಹಿಂದೆ ಆಟಗಾರರ ಟಿಎ, ಡಿಎಯನ್ನು ನಗದು ರೂಪದಲ್ಲಿ ಪ್ರತಿದಿನ ನೀಡಲಾಗುತಿತ್ತು. ಆದರೆ ಇದು ತಂಡದ ವ್ಯವಸ್ಥಾಪಕರಿಗೆ ದೊಡ್ಡ ತಲೆನೋವಾಗಿತ್ತು. ಇದನ್ನ ತಪ್ಪಿಸಲು ಬಿಸಿಸಿಐ ಹೊಸ ಮಾರ್ಗ ಕಂಡುಕೊಂಡಿದೆ. ಅಲ್ಲದೇ 3,800 ಇದ್ದ ಆಟಗಾರರ ದಿನದ ಭತ್ಯೆಯನ್ನ 5 ಸಾವಿರ ರೂಪಾಯಿಗೆ ಹೆಚ್ಚಿಸಿದೆ. ಅಲ್ಲದೆ ಇಷ್ಟುದಿನ ಹಣವನ್ನು ಕೈಯಲ್ಲೇ ನೀಡಲಾಗುತ್ತಿತ್ತು. ಆದರೆ ಇದೀಗ ನೇರವಾಗಿ ಖಾತೆಗೆ ಹಣ ಜಾಮಾಯಿಸಲು ತೀರ್ಮಾನಿಸಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ನಗದು ನೀಡಲು ಬಿಸಿಸಿಐ ನಿರ್ಧರಿಸಿದೆ.
ಪಂಚತಾರಾ ಹೋಟೆಲ್ಗಳಲ್ಲಿ ಒಂದು ಊಟಕ್ಕೆ 2500 ರೂ.ಇದೆ. ಆದ್ರಿಂದ 3,800 ರೂ. ಸಾಕಾಗುತ್ತಿಲ್ಲ ಎಂದು ಆಟಗಾರರು ದೂರಿದ್ದರು. ಇದ್ರಿಂದ ಬಿಸಿಸಿಐ ದಿನದ ಭತ್ಯೆ ಹೆಚ್ಚಿಸಿದೆ.ಈ ಹಿಂದೆ ಸೌತ್ ಆಫ್ರಿಕಾದಲ್ಲಿ ನಡೆದಿದ್ದ ಐಪಿಎಲ್ ವೇಳೆ ಪ್ರತಿ ಆಟಗಾರರಿಗೆ 100 ಡಾಲರ್ ದಿನದ ಭತ್ಯೆ ನೀಡಲಾಗುತ್ತಿತ್ತು.