ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಬಾರಿ ಪೈಪೋಟಿ ಇದೆ. ಅವರಾಗಬಹುದು ಇವರಾಗಬಹುದು ಎಂಬ ಊಹಾಪೋಹದ ಮಾತುಗಳೂ ಕೇಳಿಬರುತ್ತಲಿವೆ. ಅದಷ್ಟೇ ಅಲ್ಲದೇ ಜನರ ಲಾಬಿಯೂ ಮುಂದುವರಿದಿದೆ ಎನ್ನಲಾಗಿದೆ.

ಇವೆಲ್ಲದರ ನಡುವೆ ಮತ್ತೊಂದು ಮಹತ್ತರ ಬೆಳವಣಿಗೆಯೊಂದು ಜನ ಮಾನಸದಲ್ಲಿ ಬಂದಂತಿದ್ದು, ಕುಮಟಾ-ಹೊನ್ನಾವರ ಕ್ಷೇತ್ರಕ್ಕೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆಯೆನ್ನಲಾಗಿದೆ. ಟಿಕೆಟ್ ಬಗ್ಗೆ ಗೊಂದಲಗಳೇ ಪರಿಹಾರವಾಗದ ಕಾಲದಲ್ಲಿ ಈ ನಿರ್ಣಯಕ್ಕೆ ಬರಬಹುದೇ ಎಂಬ ಮಾತು ಜನತೆಯ ಕುತೂಹಲ ಕೆರಳಿಸಿದೆ. ಅದೆಷ್ಟರ ಮಟ್ಟಿಗೆ ಸಾಕಾರವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಅಂತಿದ್ದಾರೆ ಸಾರ್ವಜನಿಕರು.

RELATED ARTICLES  ಉಮೇಶ ಮುಂಡಳ್ಳಿಯವರಿಗೆ ಭಟ್ಕಳ ದಲ್ಲಿ ನಾಗರಿಕ ವೇದಿಕೆ ಸನ್ಮಾನ

ಈ ಮೂಲಕ ಮಹಿಳಾ ಅಭ್ಯರ್ಥಿ ಟಿಕೇಟ್ ಆಕಾಂಕ್ಷಿಯಾಗಿ ಶ್ರೀಕಲಾ ಶಾಸ್ತ್ರೀ ಮುಂಚೂಣಿಯಲ್ಲಿದ್ದಾರೆ ಎಂಬ ಮಾಹಿತಿ ಕೂಡಾ ಬಿಜೆಪಿ ವಲಯದಿಂದ ಲಭ್ಯವಾಗಿದೆ.

ಮೊದಲಿನಿಂದಲೂ ಶಾಸ್ತ್ರೀ ಅವರ ಬಗ್ಗೆ ಕುಮಟಾ ಹೊನ್ನಾವರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಪ್ರತಿಬಾರಿಯೂ ಕುಮಟಾದವರೇ ಜನಪ್ರತಿನಿದಿಗಳಾಗುತ್ತಿದ್ದು, ಈ ಬಾರಿ ಹೊನ್ನಾವರದವರಿಗೆ ಅವಕಾಶ ಕೊಡುವ ಬಗ್ಗೆ ಯೋಚಿಸುತ್ತಿದ್ದರೆನ್ನಲಾಗಿದೆ. ಹೀಗಾಗಿ ಬಿಜೆಪಿಯ ಹೈಕಮಾಂಡ ಕುಮಟಾ-ಹೊನ್ನಾವರ ಕ್ಷೇತ್ರಕ್ಕೆ ಶ್ರೀಕಲಾ ಶಾಸ್ತ್ರೀಯವರನ್ನು ಕಣಕ್ಕಿಳಿಸಿದರೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಅವರ ಆಪ್ತವಲಯ ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದೆ.

RELATED ARTICLES  ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಾಗ ಮಂಜೂರು.

ಅವಕಾಶ ಸಿಕ್ಕರೆ ಸದ್ಬಳಕೆ ಮಾಡಿಕೊಳ್ಳುವ ಇಂಗಿತವನ್ನು ಶ್ರೀಕಲಾ‌ಶಾಸ್ತ್ರಿಯವರೂ ಹೊಂದಿದ್ದಾರೆ ಎನ್ನಲಾಗಿದ್ದು ಮುಂದಿನ ನಡೆಯನ್ನು ಕಾದು ನೋಡಬೇಕಾಗಿದೆ. ಜನತೆಯು ಯಾರೆಡೆಗೆ ಮನ ಮಾಡುವರು ಎಂಬುದರ ಜೊತೆ ಜೊತೆಗೆ ಹೊಸ ಹೊಸ ಬದಲಾವಣೆಗಳು ಕಾಣುತ್ತಿರುವುದು ಮಾತ್ರ ಈ ಬಾರಿಯ ಚುನಾವಣೆಗೆ ಹೊಸ ರಂಗು ನೀಡಿದೆ.