ನವದೆಹಲಿ: 2015–16 ಮತ್ತು 2016–17ರ ನಡುವಣ ಅವಧಿಯಲ್ಲಿ ಬಿಜೆಪಿಯ ಆದಾಯ ಶೇಕಡ 81.18ರಷ್ಟು ಏರಿಕೆಯಾಗಿದೆ ಎಂದು ಪ್ರಜಾಪ್ರಭುತ್ವ ಸುಧಾರಣೆ ಸಂಘಟನೆಯ (ಎಡಿಆರ್‌) ವರದಿ ತಿಳಿಸಿದೆ.

2015–16 ಮತ್ತು 2016–17ರ ನಡುವಣ ಅವಧಿಯಲ್ಲಿ ಬಿಜೆಪಿಯ ಆದಾಯ ₹1,034.27 ಕೋಟಿ ತಲುಪಿತ್ತು. ಇದೇ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಆದಾಯದಲ್ಲಿ ಶೇಕಡ 14ರಷ್ಟು ಇಳಿಕೆಯಾಗಿದ್ದು, ₹225.36 ಕೋಟಿ ತಲುಪಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

RELATED ARTICLES  ರೈತರು ಆರ್ಥಿಕವಾಗಿ ಸದೃಢವಾಗಬೇಕು : ರಾಘವೇಶ್ವರಶ್ರೀ

ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನ ಆಧಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಒಟ್ಟು ಆದಾಯ, ವೆಚ್ಚ ಹಾಗೂ ಆದಾಯದ ಮೂಲದ ಬಗ್ಗೆ ತುಲನೆ ಮಾಡಲಾಗಿದೆ.

ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ(ಎಂ), ಸಿಪಿಐ, ಟಿಎಂಸಿ ಪಕ್ಷಗಳು ಘೋಷಿಸಿರುವ ಒಟ್ಟು ಆದಾಯದ ಮೊತ್ತ ₹1,559.17 ಕೋಟಿ ಆಗಿದೆ. ಈ ಪಕ್ಷಗಳು ಮಾಡಿರುವ ಖರ್ಚಿನ ಒಟ್ಟು ಮೊತ್ತ ₹1,228.26 ಕೋಟಿ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತೇ? 20/04/2019 ರ ದಿನ‌ ಭವಿಷ್ಯ ಇಲ್ಲಿದೆ.

2016–17ರ ಅವಧಿಯಲ್ಲಿ ₹710.057 ಕೋಟಿ ಖರ್ಚು ಮಾಡಿರುವುದಾಗಿ ಬಿಜೆಪಿ ಘೋಷಿಸಿದ್ದರೆ, ₹321.66 ಕೋಟಿ ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್‌ ಖರ್ಚು ಮಾಡಿದ ಮೊತ್ತ ಅದರ ಆದಾಯದಕ್ಕಿಂತಲೂ ₹96.30 ಕೋಟಿ ಹೆಚ್ಚಾಗಿದೆ.