ಶಿರಸಿ: ಶಿರಸಿ ವಿಧಾನ ಸಭೆ ಎಂದರೆ ಇಡೀ ಸಿದ್ದಾಪುರ ತಾಲೂಕು ಹಾಗೂ ಶಿರಸಿಯ ಪಶ್ಚಿಮ ಭಾಗದ ಹದಿಮೂರು ಪಂಚಾಯ್ತಿ ಮತದಾರರು ಇದ್ದಾರೆ. ವಿದ್ಯಾವಂತ ಮತದಾರರು ಹೆಚ್ಚಿರುವುದು ಕ್ಷೇತ್ರದ ಮಹಿಮೆ. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದ ರಾಮಕೃಷ್ಣ ಹೆಗಡೆ, ಈಗಿನ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮಾಜಿ ಸಚಿವ ಪಿ.ಎಸ್‌. ಜಯವಂತ, ವಿಶ್ವೇಶ್ವರ ಹೆಗಡೆ ಕಾಗೇರಿ ಊರು. ಒಂದು ಕಾಲಕ್ಕೆ ದೇವರಾಯ ನಾಯ್ಕರು ಕಾಂಗ್ರೆಸ್‌ ಪ್ರತಿನಿಧಿ ಸಿದ್ದರು. ನಂತರ ಬಿಜೆಪಿ ತೆಕ್ಕೆಗೆ ಸಿಕ್ಕಿದ್ದು, ಮರಳಿ ಕಾಂಗ್ರೆಸ್‌ ಶಿರಸಿ ಕ್ಷೇತ್ರವನ್ನೂ, ಸಂಸತ್ತನ್ನೂ ಉಳಿಸಿಕೊಳ್ಳಲು ಆಗಲಿಲ್ಲ. ಕ್ಷೇತ್ರದಲ್ಲಿ ಅಡಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆಯುವ ಊರು. ಒಂದು ಕಾಲಕ್ಕೆ ಏಲಕ್ಕಿ ಅಧಿಕ ಬೆಳೆಯುತ್ತಿದ್ದ ತೋಟಗಾರಿಕಾ ಕ್ಷೇತ್ರದಲ್ಲಿ ಇಂದು ವಿರಳವಾಗಿದೆ. ಕಾಳುಮೆಣಸು ಕೃಷಿ ಜೋರಾಗಿ ನಡೆಯುತ್ತಿದೆ. ಭತ್ತದ ಕ್ಷೇತ್ರವೂ ಇದೆ. ಇಲ್ಲಿ ಕೃಷಿ ಕ್ಷೇತ್ರ ಬಹುತೇಕ ಕಂದಾಯ ಭೂಮಿಯಲ್ಲಿದೆ. ವಸತಿ ಬೆಟ್ಟದಲ್ಲಿ ಕಟ್ಟಿಕೊಂಡಿದ್ದಾರೆ. ಅರಣ್ಯ ಅತಿಕ್ರಮಣದಾರರು ಬೆಟ್ಟದಲ್ಲಿ ಮನೆ ಕಟ್ಟಿಕೊಂಡವರು ಇದ್ದಾರೆ. ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಸಿಕ್ಕಿಲ್ಲ. ಕುಡಿಯುವ ನೀರಿನ ಸಮಸ್ಯೆ ಈಚೆಗೆ ಅಧಿಕವಾಗಿದೆ. ಅಘನಾಶಿನಿ, ಶಾಲ್ಮಲಾ ನದಿಗಳೂ ಹರಿದಿವೆ. ಬೇಸಿಗೆಯಲ್ಲಿ ಬತ್ತದ ಅಘನಾಶಿನಿಯಲ್ಲಿ ನೀರಿನ ಹರಿವು ಕುಸಿದಿದೆ. ಕೃಷಿಕರಿಗೆ ಮಂಗ, ಗಮಯಗಳ ಹಾವಳಿ ಜೋರಾಗಿದೆ.

RELATED ARTICLES  ಕಾಂಗ್ರೇಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ನಾಳೆ ಹೊನ್ನಾವರಕ್ಕೆ

ಕೃಷಿಗೆ ಕೂಲಿಕಾರರ ಸಮಸ್ಯೆ ಎದುರಿಸುತ್ತಿದೆ. ಮಧ್ಯಮ ವರ್ಗ, ಕೆಳ ವರ್ಗದವರು ನಿರ್ಣಾಯಕ ಮತದಾರರರು. ಮೊದಲು ಮೀಸಲು ಕ್ಷೇತ್ರವಾಗಿದ್ದ ಶಿರಸಿ ಕ್ಷೇತ್ರವಾದಾಗ ವಿವೇಕಾನಂದ ವೈದ್ಯ ಬಿಜೆಪಿ ಶಾಸಕರಾದರು. ಕ್ಷೇತ್ರ ಪುನರ್‌ವಿಂಗಡನೆ ಆದಾಗ ಅಲ್ಲಿನ ಶಾಸಕ ವಿಶ್ವೇಶ್ವರ ಹೆಗಡೆ ಸಾಮಾನ್ಯ ಕ್ಷೇತ್ರವಾದ ಶಿರಸಿಗೆ ಜಂಪ್‌ ಆದರು. ಪ್ರಥಮ ಬಾರಿಗೆ 32 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಕಳೆದ 2013ರಲ್ಲಿ ನಡೆದ ಚುನಾವಣೆಯಲ್ಲಿ ಮೂರು ಸಾವಿರ ಮತಗಳಷ್ಟೇ ಅಂತರವಿತ್ತು. ಕಮಲ ಕೋಟೆ ಜಯಿಸಲು ಕಾಂಗ್ರೆಸ್‌, ಜೆಡಿಎಸ್‌ ಸಜ್ಜಾಗುತ್ತಿದೆ. ಇಷ್ಟಕ್ಕೂ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಬಿಜೆಪಿ, ಜೆಡಿಎಸ್‌ ಸೋಲು ಗೆಲುವು ನಿಂತಿದೆ! ಜೊತೆಗೆ ಹವ್ಯಕರು, ನಾಮಧಾರಿಗಳೇ ನಿರ್ಣಾಯಕ ಮತದಾರರು. ಒಮ್ಮೆ ಬಿಜೆಪಿ ಶಿರಸಿ ಕ್ಷೇತ್ರದಲ್ಲಿ ಸೋತರೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೂ ಮುಖಂಭಂಗ ಎಂಬ ವಿಶ್ಲೇಷಣೆ ಸುಳ್ಳಲ್ಲ.

ಕ್ಷೇತ್ರದ ಬೆಸ್ಟ್‌ ಏನು?

ಸಜ್ಜನ ಮತದಾರರು. ಅಡಕೆಗೆ ದರ ಇದ್ದರೆ ಸಮಸ್ಯೆಗಳಿಲ್ಲ. ಸಹಕಾರಿ ಕ್ಷೇತ್ರ ಪ್ರಬಲವಾಗಿರೋದು.ತೀರಾ ಕೆಳ ಮಟ್ಟದ ರಾಜಕಾರಣವಿಲ್ಲ, ಸ್ವತ್ಛ ನೈರ್ಮಲ್ಯ ಪರಿಸರ. ಇರೋದರಲ್ಲಿ ಸಾರಿಗೆ ಸೌಲಭ್ಯ ಉತ್ತಮ. ಆಮಿಷಗಳಿಗೆ ಜಗ್ಗದ ಮತದಾರರು. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷದ ಜಿಲ್ಲಾ ಕಚೇರಿ ಇದೆ. ಬಹುತೇಕ ತಳಮಟ್ಟದ ಕಾರ್ಯಕರ್ತರೂ ಇರೋದು. ಮುಖ್ಯವಾಗಿ ಸಾಂಸ್ಕೃತಿಕ ಮನೋಭಾವದ ಮತದಾರರು.

RELATED ARTICLES  ಹೆಲಿಕ್ಯಾಪ್ಟರ್ ಪತನ : ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಹಲವು ಮಂದಿ ಸಾವು

ಕ್ಷೇತ್ರದ ದೊಡ್ಡ  ಸಮಸ್ಯೆ?

ಕ್ಷೇತ್ರದಲ್ಲಿ ದೊಡ್ಡ ಸಮಸ್ಯೆ ಕೂಲಿ ಕಾರ್ಮಿಕರದ್ದು, ಖಾತೆ ಸಾಲದ್ದು. ದೇಗುಲಗಳ,ಸಹಕಾರಿ ಕ್ಷೇತ್ರದ ಮೇಲಿನ ಸರಕಾರೀಕರಣಕ್ಕೆ, ಅರಣ್ಯ ನಾಶಿ ಯೋಜನೆಗಳಿಗೆ ವಿರೋಧ. ಬೆಟ್ಟದ ಪೂರ್ಣ ಪ್ರಮಾಣದ ಹಕ್ಕು ಸಿಕ್ಕಿಲ್ಲ. ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ಸಿಕ್ಕಿಲ್ಲ. ಹಳ್ಳಿಯಲ್ಲಿ ಯುವಕರ ಸಂಖ್ಯೆ ಇಳಿಮುಖ ಆಗುತ್ತಿರುವುದು. ಇದಕ್ಕಿಂತ ಮುಖ್ಯವಾದದ್ದು ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿರುವುದು. ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುವದು, ಅಡಕೆ ತೋಟಗಳು ಬಿಸಿಲಿನ ಝಳಕ್ಕೆ ಹಾಳಾಗುತ್ತಿರುವುದು ಕಾಡುವ ಸಮಸ್ಯೆ ಆಗಿದೆ. ಕೃಷಿ ಪಂಪ್‌ಸೆಟ್ಟುಗಳಿಗೆ ಕೂಡ ಸೀಮೆ ಎಣ್ಣೆ ಕೂಡ ಸಿಗದ ಕುರಿತು ಸಮಾಧಾನವಿದೆ. ಇನ್ನೂ ಮೊಬೈಲ್‌ ನೆಟ್‌ವರ್ಕ್‌ ಕೂಡ ಸರಿಯಾಗಿ ಬಾರದ ಊರುಗಳಿವೆ.

ಹಿಂದಿನ ಫ‌ಲಿತಾಂಶ

ಕಾಗೇರಿ ಅನಂತ ವಿಶ್ವೇಶ್ವರ ಹೆಗಡೆ(ಬಿಜೆಪಿ)42, 854 

ದೀಪಕ್‌ ರಾಮದಾಸ್‌ ಹೊನ್ನಾವರ 39,795(ಕಾಂಗ್ರೆಸ್‌)

ಶಶಿಭೂಷಣ ಹೆಗಡೆ (ಜೆಡಿಎಸ್‌)39761

ಈ ಬಾರಿಯ ಟಿಕೆಟ್‌ ವಿಷಯ

ಬಿಜೆಪಿ:  ವಿಶ್ವೇಶ್ವರ ಹೆಗಡೆ ಕಾಗೇರಿ ಹಾಲಿ ಶಾಸಕ , ಟಿಕೆಟ್ ಪಕ್ಕಾ ಆಗಿದೆ.

ಕಾಂಗ್ರೆಸ್‌: ಭೀಮಣ್ಣ ನಾಯ್ಕ (ಜಿಲ್ಲಾಧ್ಯಕ್ಷ),ನಿವೇದಿತ್‌ ಆಳ್ವಾ (ನಿಕಟಪೂರ್ವ ಅಧ್ಯಕ್ಷ ಕರಾವಳಿ ಅಭಿವೃದ್ಧಿ ಪ್ರಾಧಿಕಾರ)

ಜೆಡಿಎಸ್‌: ಶಶಿಭೂಷಣ ಹೆಗಡೆ (ಘೋಷಿತ)