ಕುಮಟಾ : ತಾಲೂಕಿನ ಸ್ವರಾತ್ಮಿಕಾ ಸಂಗೀತ ಶಾಲೆಯಲ್ಲಿ “ಹಾಗೆ ಸುಮ್ಮನೆ ಹಾಡೋಣ” ಕಾರ್ಯಕ್ರಮ ವಿಜ್ರಂಬಣೆಯಿಂದ ನಡೆಯಿತು.

ಸಭಾ ಕಾರ್ಯಕ್ರಮವು ಪುಟ್ಟ ಕಲಾವಿದೆ ಕುಮಾರಿ ಆರ್ಯ ಬಾಳೇರಿ ದೀಪ ಬೇಳಗಿಸಿ ಶುಭಾಶಯ ಕೋರಿದಳು.ಅಧ್ಯಕ್ಷತೆ ವಹಿಸಿದ ಡಾ,ಶ್ರೀಧರ ಗೌಡ ( ಅಧ್ಯಕ್ಷರು,ಕ.ಸಾ.ಪ ಕುಮಟಾ ತಾಲೂಕು.) ಈ ಪುಟ್ಟ ಸ್ವರಾತ್ಮಿಕಾ ತಂಡ ರಾಜ್ಯ ರಾಷ್ರ್ಟಮಟ್ಟದಲ್ಲಿ ಪ್ರತಿಭೆ ಗುರುತಿಸುವಲ್ಲಿ ಸಹಕಾರಿಯಾಗಿರುವುದು ಉತ್ತರ ಕನ್ನಡ ಜಿಲ್ಲೆಗೆ ಸಂತಸದ ವಿಷಯವಾಗಿದೆ.ಶಿಬಿರಾರ್ಥಿಯರಿಗೆ ನೀವು ಗಾಳಿ ಪಟ ಇದ್ದಂತೆ, ನೀವು ಎಷ್ಟು ಲಾಗಾ ಹಾಕಿದರೂ (ಎಡವಿದರೂ) ಸೂತ್ರಧಾರಿ ಶಿಕ್ಷಕ ನಿಮ್ಮನ್ನು ಮತ್ತೆ ಎತ್ತಿ ಸರಿದಾರಿಗೆ ತರಿಸುವ ಪ್ರಯತ್ನ ಮಾಡುತ್ತಾರೆ.ಹೀಗಾಗಿ ವಿದ್ಯಾರ್ಥಿಗಳು ಗುರುಗಳನ್ನ ಯಾವತ್ತು ಮರೆಯಬೇಡಿ. ತಂಡದ ಮುಖ್ಯಸ್ಥನ ಆಗುಹೋಗುವ ಕಷ್ಟಸಾಧ್ಯ ಪಾಲಕರು ಅರಿತು ಸಹಕರಿಸಬೇಕು ಎಂದು ನುಡಿದರು.

RELATED ARTICLES  ಜಿ.ಸಿ ಕಾಲೇಜಿನಲ್ಲಿ ಗ್ರಂಥಾಲಯದಿನ ಶ್ಲಾಘನೀಯ ಹೊಸತಲೆಮಾರಿನ ಓದನ್ನು ಹಿಗ್ಗಿಸಿದ ಪುಸ್ತಕದ ಸುಗ್ಗಿ!

ಮುಖ್ಯಾಥಿತಿ ಮಂಜುನಾಥ ಶೇಟ ( ಲಹರಿ ಮೆಲೋಡಿಯಸ್ ಹೋನ್ನಾವರ)ರವರು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಆರ್ಕೇಸ್ಟ್ರಾ ಕುಮಟಾದ ಅಂತೋನಿ ಡಯಾಸ ರವರದ್ದು..ಈಗ ಅನೇಕ ಕಡೆಯಲ್ಲಿ ಹುಟ್ಟುಕೊಂಡಿದೆ.ಅದರಲ್ಲೂ ಆಸಕ್ತ ಪ್ರತಿಭೆಗೆ ಸೂಕ್ತ ತರಭೇತಿ ನೀಡಿ ಅವರಿಗೆ ವೇದಿಕೆ ನೀಡಿ ಸುಲಭವಲ್ಲದ ಕಾರ್ಯ “ಸ್ವರಾತ್ಮಿಕಾ ಗ್ರೇಟ್ “ಎಂದರು.

RELATED ARTICLES  ಲಾಡ್ಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ತೆಗೆ ಶರಣಾದ ವ್ಯಕ್ತಿ

ಚಂದ್ರಶೇಖರ ನಾಯ್ಕ ಗಂಗಾವಳಿ ಇವರು ಸಂಗೀತ ಕಲಾವಿದರಿಗೆ ಶುಭ ಕೋರಿದರು. ಸ್ವರಾತ್ಮಿಕಾ ಲಕ್ಷ್ಮೀಶ ಗೌಡ ಸ್ವಾಗತ ಕೋರಿದನು.ಉನ್ನತಿ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದಳು.