ಅಂಕೋಲಾ: ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ ಉತ್ತರ ಕನ್ನಡ ಕಾರವಾರ, ತಾಲ್ಲೂಕ ಪಂಚಾಯತ ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಅಂಕೋಲಾ ಹಾಗೂ ಸ್ವೀಡ್ ಸಮಿತಿ ಅಂಕೋಲಾ ಇವರ ಸಂಯುಕ್ತಾಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕದ ವಿದ್ಯಾರ್ಥಿಗಳು ಹಾಗೂ ಸರಕಾರಿ ಪ್ರೌಢಶಾಲೆ ಅಂಕೋಲಾ ನಗರದ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಾನಂದ ಮಲ್ಲಾಡ ಅವರು ವಿದ್ಯಾರ್ಥಿಗಳಿಗೆ ಮತದಾನ ಖಾತ್ರಿಯಂತ್ರದ ಕುರಿತು ಅರಿವು ಮೂಡಿಸಿದರು.

RELATED ARTICLES  ಕಾಗೆಗಳಿಗಾಗಿಯೇ ಚಹಾ ತಿಂಡಿ ತಯಾರಿಸಿ ಅಂಗಡಿ ಪ್ರಾರಂಭಿಸುವ ವ್ಯಕ್ತಿ: ಕುಮಟಾದಲ್ಲೊಬ್ಬ ವಿಶಿಷ್ಟ ಅಂಗಡಿಕಾರ..!!

ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರಿ ರವಿ ಗೌಡ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಭಾಸ್ಕರ ಗಾಂವಕಾರ, ದೈಹಿಕ ಶಿಕ್ಷಣ ಪರೀವಿಕ್ಷಕರಾದ ಎನ್.ವಿ. ನಾಯಕ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉಪನ್ಯಾಸಕರಾದ ಶ್ರೀ ಮಹೇಶ ನಾಯಕ ಕಾರ್ಯಕ್ರಮಕ್ಕೆ ಆಗಮಿಸಿರುವರೆಲ್ಲರನ್ನು ಸ್ವಾಗತಿದರು. ಶ್ರೀ ಪ್ರಮೋದ ಆಚಾರಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀ ಅರುಣ ಗಾಂವಕಾರ ವಂದಿಸಿದರು.

RELATED ARTICLES  ಹಾಲಕ್ಕಿಗಳಜೊತೆ ಸುಗ್ಗಿಗೆ ಹೆಜ್ಜೆ ಹಾಕಿದ ಅನಂತ್ ಕುಮಾರ್ ಹಾಗೂ ಕಾರವಾರದ ನಾಗರಾಜ ನಾಯಕ

ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಶ್ರೀ ದೇವರಾಯ ಗೋಳಿಕಟ್ಟೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ತುಕರಾಮ ಬಂಟ ಹಾಗೂ ಸಮುದಾಯ ದತ್ತಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿ ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.

ವರದಿ ಎನ್.ರಾಮು ಹಿರೇಗುತ್ತಿ
ಸ್ಪಂದನ ಪೌಂಡೇಶನ್