`ಪೀಪಲ್ ಟ್ರೀ’ ಎಂದೇ ಜನಪ್ರಿಯವಾಗಿರುವ ಅಶ್ವತ್ಥ ಮರ ಅಥವಾ ಅರಳಿ ಮರದ ಬಗ್ಗೆ ನಮ್ಮಲ್ಲಿ ಪೂಜ್ಯಭಾವನೆ ಇದೆ. ಮಾತ್ರವಲ್ಲದೆ, ಔಷಧಿಯುಕ್ತ ಮರವೆಂದೂ ಪರಿಗಣಿಸಲಾಗಿದೆ. ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರವೆಂದು ಜನಜನಿತವಾಗಿದೆ.

ಈ ಮರದ ಪ್ರತಿ ಭಾಗದಲ್ಲೂ ಒಂದಲ್ಲಾ ಒಂದು ರೀತಿಯ ಔಷಧೀಯ ಗುಣಗಳು ಇವೆ. ಎಲೆ, ತೊಗಟೆ, ಬೇರು, ಬೀಜ, ಹಣ್ಣು ಹೀಗೆ ಎಲ್ಲವೂ ಔಷಧಿ ರೂಪದಲ್ಲಿ ಬಳಸಲ್ಪಡುತ್ತಿದೆ.

ಅರಳಿ ಮರದ ಕೆಲವು ಎಳೆಯ ಎಲೆಗಳನ್ನು ಹಾಲಿನಲ್ಲಿ ಬೇಯಿಸಿ, ಸ್ವಲ್ಪ ಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ, ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ.

ಅಸ್ತಮಾದಿಂದ ಬಳಲುತ್ತಿರುವವರೂ ಎಳೆಯ ಎಲೆಗಳನ್ನು ಅಥವಾ ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ಅದನ್ನು ಹಾಲಿನಲ್ಲಿ ಬೇಯಿಸಿ ಮಿತವಾಗಿ ಬಳಸಿದರೆ ಪರಿಹಾರ ದೊರೆಯಲಿದೆ.

RELATED ARTICLES  ಜನರಲ್ಲಿ ಕಾಣಿಸಿಕೊಂಡ ಉಸಿರಾಟದ ಸಮಸ್ಯೆ ಈ ದೇಶದಲ್ಲಿ 5 ದಿನ ಲಾಕ್ ಡೌನ್..!

ಕಣ್ಣುಗಳು ಕೆಂಪಾಗಿ, ನೋವುಂಟು ಮಾಡಿದರೆ ಅಶ್ವತ್ಥ ಎಲೆ ಇದಕ್ಕೆ ಶಮನ ನೀಡಬಲ್ಲದು. ಕೆಲವು ಎಲೆಗಳನ್ನು ಅರೆದು, ಹಿಂಡಿ ತೆಗೆದ ರಸದ ತೊಟ್ಟುಗಳನ್ನು ಕಣ್ಣಿಗೆ ಬಿಟ್ಟುಕೊಳ್ಳುವುದರಿಂದ ಕಣ್ಣುನೋವು ಕಡಿಮೆಯಾಗಲಿದೆ.

ಮರದ ಬೇರಿನ ಚಿಕ್ಕ ಭಾಗದ ತುದಿಯನ್ನು ಜಜ್ಜಿ ಹಲ್ಲುಜ್ಜಲು ಬಳಸುವ ಬ್ರಷ್‌ನಂತೆಯೂ ಬಳಸಬಹುದು. ಇದರಿಂದ ಹಲ್ಲುಗಳಲ್ಲಿರುವ ಕಲೆಗಳು ನಿವಾರಣೆಯಾಗುತ್ತವೆ. ಹಲ್ಲು ಮತ್ತು ಒಸಡುಗಳ ಸಂದಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

ಮೂಗಿನಿಂದ ರಕ್ತ ಸೋರುತ್ತಿದ್ದರೆ, ಈ ಮರದ ಎಲೆಗಳನ್ನು ಅರೆದು, ರಸ ಹಿಂಡಿ ಅದನ್ನು ಮೂಗಿನೊಳಗೆ ಬಿಟ್ಟುಕೊಳ್ಳುವ ಮೂಲಕ ರಕ್ತ ಸೊರುವಿಕೆಯನ್ನು ತಡೆಗಟ್ಟಬಹುದು.

ಕಾಮಾಲೆ ರೋಗಕ್ಕೂ ಎಲೆಗಳು ಪರಿಹಾರ ನೀಡಲಿವೆ. ಎಲೆಗಳನ್ನು ಅರೆದು ರಸ ಹಿಂಡಿ ಸ್ವಲ್ಪ ನೀರು ಮತ್ತು ಸಕ್ಕರೆ ಬೆರಸಿ ದಿನಕ್ಕೆರಡು ಬಾರಿ ಕುಡಿದರೆ ರೋಗ ನಿಯಂತ್ರಣಕ್ಕೆ ಬರಲಿದೆ.

RELATED ARTICLES  ನಿಂತು ಯಾಕೆ ನೀರು ಕುಡಿಯಬಾರದು ಗೊತ್ತಾ ? ಇಲ್ಲಿದೆ ಓದಿ

ಮಲಬದ್ಧತೆ ತೊಂದರೆ ನಿವಾರಣೆ ಮಾಡುವ ಸಾಮರ್ಥ್ಯ ಈ ಮರದ ಎಲೆಗಳಲ್ಲಿದೆ. ಒಣ ಎಲೆಗಳ ಪುಡಿ ಹಾಗೂ ದೊಡ್ಡ ಜೀರಿಗೆ ಪುಡಿ ಜೊತೆಗೆ ಕೊಂಚ ಬೆಲ್ಲ ಸೇರಿಸಿ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ಕುಡಿದರೆ ಸಮಸ್ಯೆ ದೂರವಾಗಲಿದೆ.

ಅಶ್ವತ್ಥ ಎಲೆಗಳ ಜೊತೆಗೆ ಕೆಲವು ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಅಗತ್ಯ ಪ್ರಮಾಣದಲ್ಲಿ ಸಕ್ಕರೆ ಬೆರೆಸಿ ನಿಧಾನವಾಗಿ ಜಗಿದು ನುಂಗಿದರೆ ಅತಿಸಾರವು ಕಡಿಮೆಯಾಗಲಿದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ಮಾಡುವಲ್ಲಿಯೂ ಅರಳಿ ಮರದ ಎಲೆಗಳು ನೆರವಾಗಲಿವೆ.