ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ `ಕುರುಕ್ಷೇತ್ರ’ ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿದೆ.

ಬಹು ತಾರಾಗಣದಲ್ಲಿ ನಿರ್ಮಾಣವಾಗಿರುವ ‘ಕುರುಕ್ಷೇತ್ರ’ ದರ್ಶನ್ ಅಭಿನಯದ 50 ನೇ ಚಿತ್ರವಾಗಿದೆ. ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ವಿಶೇಷವಾದ ಸೆಟ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರಕ್ಕೆ ಮುನಿರತ್ನ ಅವರ ಬಂಡವಾಳ ಹಾಕಿದ್ದು, ಅವರ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ.

RELATED ARTICLES  ಜಮ್ಮು-ಕಾಶ್ಮೀರ : ಲಡಾಕ್​ನಲ್ಲಿ ಹಿಮಪಾತಕ್ಕೆ ಮೂವರು ಬಲಿ, ಏಳು ಮಂದಿ ನಾಪತ್ತೆ, ಮುಂದುವರಿದ ಶೋಧ ಕಾರ್ಯ.

ಈಗಾಗಲೇ `ಕುರುಕ್ಷೇತ್ರ’ ಚಿತ್ರದ ಆಡಿಯೋ ದುಬಾರಿ ಬೆಲೆಗೆ ಮಾರಾಟವಾಗಿದ್ದು, ಇದೇ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವ ಚಿತ್ರತಂಡ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಏಪ್ರಿಲ್ ಅಂತ್ಯಕ್ಕೆ `ಕುರುಕ್ಷೇತ್ರ’ ಹಾಡುಗಳು ನಿಮ್ಮ ಮುಂದೆ ಬರಬಹುದು.

RELATED ARTICLES  ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್‏ಪಿಎಫ್ ಬಸ್ ಸ್ಫೋಟ, ಹುತಾತ್ಮ ಯೋಧರ ಸಂಖ್ಯೆ 42 ಕ್ಕೆ ಏರಿಕೆ

ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. `ಕುರುಕ್ಷೇತ್ರ’ ಸಿನಿಮಾವನ್ನು ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಸಿನಿರಸಿಕರು ಕಾತರರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವೇಳೆಗಾಗಲೇ `ಕುರುಕ್ಷೇತ್ರ’ ತೆರೆಗೆ ಬರಬೇಕಿತ್ತು.