ಶ್ರೀಹರಿಕೋಟಾ, (ಏ.12): ಭಾರತದ ದಿಕ್ಸೂಚಿ ಸ್ಯಾಟಲೈಟ್​ ಐಆರ್​ಎನ್​ಎಸ್​ಎಸ್​-1ಐ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಈ ಹಿಂದೆ ರೂಪಿಸಿದ್ದ ಸ್ವದೇಶಿ ಪ್ರಾದೇಶಿಕ ದಿಕ್ಸೂಚಿ ಸ್ಯಾಟಲೈಟ್ ಉಪಗ್ರಹದ ಭಾಗ ಈ ನಾವಿಕ್​ ಉಪಗ್ರಹವಾಗಿದೆ. 1,425ಕೆಜಿ ತೂಕದ ಪಿಎಸ್​ಎಲ್​ವಿ -41 ರಾಕೆಟನ್ನು ಇಂದು ಮುಂಜಾನೆ ಉಡಾವಣೆ ಮಾಡಲಾಯಿತು.

RELATED ARTICLES  ದಿನಾಂಕ 15/06/2019 ರ ರಾಶಿ ಭವಿಷ್ಯ ಇಲ್ಲಿದೆ.

ಉಪಗ್ರಹ ಉಡಾವಣೆ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ. ಶಿವನ್​ ಉಪಗ್ರಹ ಯಶಸ್ವಿಗೊಂಡು ನಿರ್ಧಿಷ್ಟ ಕಕ್ಷೆಗೆ ಸೇರಿದೆ ಎಂದು ಹೇಳಲು ಇಚ್ಛಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಇಸ್ರೋ ಮುಂದಿನ ಏಂಟು ತಿಂಗಳಲ್ಲಿ 9 ಮಿಷನ್​ ಉಡಾವಣೆ ಮಾಡುವ ಉದ್ದೇಶವನ್ನು ಹೊಂದಿದ್ದು, ಈ ವರ್ಷದ ಅಂತ್ಯದಲ್ಲಿ ಚಂದ್ರಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದರು.

RELATED ARTICLES  ಅಂಕೋಲಾ, ಕುಮಟಾ, ಯಲ್ಲಾಪುರದಲ್ಲಿ ನಡೆದ ಅಪಘಾತಗಳು.

ನಾಲ್ಕು ಹಂತದ ಇಂಜಿನ್​ ಒಳಗೊಂಡ ಪಿಎಸ್​ಎಲ್​ವಿ ಗುರುವಾರ ಮುಂಜಾನೆ 4.04 ನಿಮಿಷ್ಕೆ ಇಡಾವಣೆ ಮಾಡಲಾಯಿತು.

ಇದಕ್ಕೆ ಮುಂಚೆ ಉಡಾವಣೆ ಗೊಂಡಿದ್ದ ಐಆರ್​ಎನ್​ಎಸ್​ಎಸ್ -1ಎ ಹಾಗೂ ಆಗಸ್ಟ್​ನಲ್ಲಿ ಉಡಾವಣೆಗೊಂಡಿದ್ದ ಐಆರ್​ಎನ್​ಎಸ್​ಎಸ್- 1ಎಚ್ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದ್ದವು.