ಹೊನ್ನಾವರ : ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮನುಷ್ಯನ ಜೀವನಕ್ಕೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು ಮನೆಯಲ್ಲಿ ಸಿಗುವ ಸಂಸ್ಕಾರವು ಶಾಲೆ ಮತ್ತು ಸಮಾಜದಿಂದ ಸಿಗುವ ಸಂಸ್ಕಾರಕ್ಕಿಂತ ಭಿನ್ನವಾಗಿರುತ್ತದೆ. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಗುರುಗಳ ಮಾರ್ಗದರ್ಶನ, ಕುಟುಂಬದಿಂದ ಸಿಗುವ ಸಂಸ್ಕಾರಗಳು ಅತೀ ಅವಶ್ಯಕವಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಮಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡಿದರು.

ಅವರು ಉ.ಕ ಜಿಲ್ಲಾ ರಾಮಕ್ಷತ್ರೀಯ ಸೀಮಾ ಪರಿಷತ್ ಹಾಗೂ ರಾಮಕ್ಷತ್ರೀಯ ಸಂಘ ಮಂಕಿ ಇದರ ಆಶ್ರಯದಲ್ಲಿ ನಡೆದ ಸಾಮೂಹಿಕ ಉಪನಯನ ಹಾಗೂ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಂಕಿ ಕೊಕ್ಕೇಶ್ವರದಲ್ಲಿ ಆಶೀರ್ವಚನ ನೀಡಿದರು. ಆಧುನಿಕ ಸಮಾಜದಲ್ಲಿ ವ್ಯಕ್ತಿಗೆ ಸಂಪತ್ತಿನ ಬರ ಕಂಡುಬರುವುದಿಲ್ಲ. ಆದರೆ ಸಮಾಜದಲ್ಲಿ ಸಂಸ್ಕಾರದ ಕೊರತೆಯಿಂದ ಸಮಾಜಘಾತುಕ ಶಕ್ತಿಗಳನ್ನು ಅಲ್ಲಲ್ಲಿ ಕಾಣುತ್ತೇವೆ. ರೈತರು ಭತ್ತ ಮತ್ತು ರಾಗಿಯನ್ನ ಹೊಲದಲ್ಲಿ ಬಿತ್ತಿದಾಗ ಕಾಲಕಾಲಕ್ಕೆ ನೀರು ಗೊಬ್ಬರ ನೀಡಿದರೆ ಮಾತ್ರ ಉತ್ತಮ ಬೆಳೆಯನ್ನ ಬೆಳೆಯುತ್ತಾನೆ. ಹಾಗೆಯೇ ಸಂಸ್ಕಾರಯುತ ವ್ಯಕ್ತಿ ಸಮಾಜಕ್ಕೆ ಬರಬೇಕಾದರೆ ಅವನಿಗೆ ಕುಟುಂಬ ಮತ್ತು ಗುರುಗಳಿಂದ ಒಳ್ಳೆಯ ಸಂಸ್ಕಾರಗಳು ಸಿಗಬೇಕು. ಹಿಂದೂ ಧರ್ಮದ ಪ್ರಕಾರ ಬ್ಮಹ್ಮೋಪದೇಶ ನೀಡುವುದು ಉತ್ತಮ ಕಾರ್ಯ ಅದರಲ್ಲೂ ಸಾಮೂಹಿಕ ಬ್ಮಹ್ಮೋಪದೇಶದಿಂದ ಸಮಾಜದಲ್ಲಿ ಸಮಾನತೆ ಪ್ರತಿಬಿಂಬವಾಗುತ್ತದೆ ಎಂದು ನುಡಿದರು.

RELATED ARTICLES  ಮುರ್ಡೇಶ್ವರ ಸಮೀಪ ಅಪಘಾತ : ಬೊಲೆರೋ ಕಾರ್ ನಡುವೆ ಅಪಘಾತ: ವ್ಯಕ್ತಿಯ ದಾರುಣ ಸಾವು.

ರಾಮಕ್ಷತ್ರೀಯ ಸೀಮಾ ಪರಿಷತ್ ಕಳೆದ 14 ವರ್ಷಗಳಿಂದ ವಿವಿಧ ಕಾರ್ಯಕ್ರಗಳನ್ನ ಸಂಘಟಿಸುತ್ತಾ ಬಂದಿದೆ. ಅದರಲ್ಲಿ ಸಾಮೂಹಿಕ ಉಪನಯನವು ಒಂದಾಗಿದೆ. ಮಂಕಿ ಕೊಕ್ಕೇಶ್ವರದಲ್ಲಿ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಸಮಾಜದ 55 ವಟುಗಳಿಗೆ ಶ್ರೀಗಳ ಸಾನಿಧ್ಯದಲ್ಲಿ ಬ್ಮಹ್ಮೋಪದೇಶ ನೀಡಲಾಯಿತು.

ವೇದಿಕೆಯಲ್ಲಿ ಸೀಮಾ ಪರಿಷತ್ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಸಾಲೇಹಿತ್ತಲ್ ವರದಿವಾಚಿಸಿದರು. ವೇದಿಕೆಯಲ್ಲಿ ಮಂಕಿ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಎಚ್.ಆರ್.ನಾಯ್ಕ, ಸ್ವರ್ಣವಲ್ಲಿ ಆಡಳಿತ ಮಂಡಳಿಯ ಸದಸ್ಯ ರಾಮಕೃಷ್ಣ ಶೇರೆಗಾರ ಮತ್ತು ಸೀತಾರಾಮ ನಾಯ್ಕ ಹಾಗೂ ಕೊಕ್ಕೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಹನುಮಂತ ನಾಯ್ಕ ಉಪಸ್ಥಿತರಿದ್ದರು. ರಾಮಕ್ಷತ್ರೀಯ ಸೀಮಾ ಪರಿಷತ್, ರಾಮಕ್ಷತ್ರೀಯ ಸಂಘ, ಕೊಕ್ಕೇಶ್ವರ ಸೇವಾ ಸಮಿತಿ ಹಾಗೂ ರಾಮಕ್ಷತ್ರೀಯ ಸಭಾಭವನ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಹಕರಿಸಿದರು. ಕುಮಾರಿ ದಿವ್ಯಾ ಪ್ರಾರ್ಥಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಸರೋಜಾ ನಾಯ್ಕ ಮತ್ತು ಮಂಗಲಾ ನಾಯ್ಕ ಗುರು ಗೌರವಾರ್ಪಣೆ ಗೀತೆ ಹಾಡಿದರು. ಶಿಕ್ಷಕ ಉದಯ್ ಆರ್. ನಾಯ್ಕ ಮತ್ತು ಅಣ್ಣಪ್ಪ ಎಚ್ ನಾಯ್ಕ ನಿರೂಪಿಸಿದರು. ಸೀಮಾ ಪರಿಷತ್ ಸದಸ್ಯ ಅಣ್ಣಪ್ಪ ಹನುಮಂತ ನಾಯ್ಕ ವಂದಿಸಿದರು.

RELATED ARTICLES  ಚಳುವಳಿಯಿಂದಷ್ಟೇ ಬೋಧಕರ ಹಿತರಕ್ಷಣೆ ಸಾಧ್ಯ: ಕುಬೇರಪ್ಪ