ಹೊನ್ನಾವರ: ತಾಲೂಕಿನ ಕರ್ಕಿಯಲ್ಲಿ ಕಳೆದ ಮಾರ್ಚ 28ರಂದು ರವಿ ರೋಕಡೆ ಎನ್ನುವವರ ಮನೆ ಬಾಗಿಲನ್ನು ಮುರಿದು ದರೋಡೆ ಮಾಡಿ ಪರಾರಿಯಾಗಿ ಬೆಳಗಾವಿಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಸೋಮವಾರ ಹೊನ್ನಾವರಕ್ಕೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳಾದ ಶಿವಾಜಿ, ಸಂತೋಷ ಭಗವಾನ್ ಕಾಳೆ, ಗೋವಿಂದ ಕಾಳೆ, ಗೋಪಾಲ ಸಂಜು ಕಾಳೆ, ಸತೀಶ ಕಲ್ಲಪ್ಪ ಚೌಹಾಣ, ಅನಿಲ್ ಸೋನು ಮಸಳೆ, ಭಾವ ಸಾಹೇಬ, ವಿರುಪಾಕ್ಷ ಗಂಗಾದರ ಪಾಟೀಲ್ ತಂಡ ಮನಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿ 61 ಗ್ರಾಂ ಚಿನ್ನಾಭರಣ, 25 ಸಾವಿರ ನಗದು ಹಾಗೂ ಎರಡು ಮೊಬೈಲ್ ಕದ್ದು ಪರಾರಿಯಾಗಿದ್ದರು. ಈ ತಂಡವನ್ನು ಬೆಳಗಾವಿಯ ಪೊಲೀಸರು ಹಿರೇ ಬಾಗೆವಾಡಿಯಲ್ಲಿ ಬಂಧಿಸಿದ್ದರು. ಆರೋಪಿಗಳನ್ನು ಹೊನ್ನಾವರ ಸಿಪಿಐ ಚಲುವರಾಜು, ಕ್ರೈಂ ಎಸೈ ಹರೀಶ್ ಮತ್ತು ತಂಡದವರು ಹೊನ್ನಾವರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ..

RELATED ARTICLES  ವನಸ್ತ್ರೀ ಮಹಿಳಾ ಸಂಘಕ್ಕೆ ನಾರೀ ಶಕ್ತಿ ಪುರಸ್ಕಾರ.