ಕುಮಟಾ: ತಾಲೂಕಿನಲ್ಲಿ ದುಡಿಯುವ ಕೈಗಳಿಗೆ ಹೊಸ ಆಶಾಕಿರಣವಾಗುವ ದೃಷ್ಟಿಯಿಂದ ಯಶೋಧರ ಕೋ-ಆಪರೇಟಿವ್ ಸೊಸೈಟಿಯನ್ನು ವಿದ್ಯುಕ್ತವಾಗಿ ಇಂದು ಉದ್ಘಾಟನೆ ಮಾಡಲಾಯಿತು.
ದೀಪ ಬೆಳಗುವುದರ ಮೂಲಕ ಯಶೋಧರಾ ನಾಯ್ಕ ಟ್ರಸ್ಟ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಯಶೋಧರ ನಾಯ್ಕರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯಶೋಧರ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಶ್ರೀ ಯಶೋಧರ ನಾಯ್ಕರವರು ಮಾತನಾಡಿ ನಮ್ಮ ಕುಮಟಾ ಮತ್ತು ಹೊನ್ನಾವರದ ಸಮಸ್ತ ಜನರಿಗೆ ಸಹಕಾರಿ ಯಾಗಬೇಕೆಂಬ ಉದ್ದೇಶದಿಂದ ಇಂದು ಕೋ-ಆಪ್ ಸೊಸೈಟಿಯನ್ನು ವಿದ್ಯುಕ್ತವಾಗಿ ಚಾಲನೆಗೊಳಿಸಿದ್ದೇವೆ ದುಡಿಯುವ ಕೈಗಳಿಗೆ ಬಲನಿಡುವ ಉದ್ದೇಶ ನಮ್ಮದಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಕಾರ್ಯನಿರ್ವಾಹಕರಾದ ರೋಮ್ಸನ ಫರ್ನಾಂಡಿಸ್ ಮಾತನಾಡಿ ನಮಗೆ ಕೋ-ಆಪ್ ಡಿಪಾರ್ಟಮೆಂಟನವರ ಆದೇಶದಂತೆ 700 ಶೇರ್ ಹಾಗೂ 15 ಲಕ್ಷ ಶೇರ್ ಬಂಡವಾಳ ಸಂಗ್ರಹಿಸಬೇಕಾಗಿತ್ತು ಆದರೆ ನಮ್ಮ ಟ್ರಸ್ಟನಲ್ಲಿ ದುಡಿಯುವ ಮಹಿಳೆಯರು 60 ಲಕ್ಷ ಶೇರ್ ಬಂಡವಾಳ ಮತ್ತು 6 ಸಾವಿರ ಶೇರ್ ಸಂಗ್ರಹಿಸುವ ಮುಲಕ ಶ್ರೀ ಯಶೋಧರ ನಾಯ್ಕರವರ ಮೇಲಿನ ಪ್ರೀತಿಯನ್ನು ತೊರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿನಾಯಕ ನಾಯಕ, ಸತ್ಯಾ ಜಾವಗಲ್, ವಸಂತ ಗೌಡ, ಸುಧಾಕರ ತಾರಿ, ವಿಷ್ಣು ಪಟಗಾರ, ಅರುಣ ನಾಯ್ಕ ಹಾಗೂ ಟ್ರಸ್ಟನ ಮತ್ತು ಬ್ಯಾಂಕನ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.