ಭಟ್ಕಳ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ತಾಲೂಕಿನಲ್ಲಿ ಕಟ್ಟೆಚ್ಚರ ಹಾಕಲಾಗಿದ್ದು, ಚುನಾವಣೆಯ ಹಿನ್ನೆಲೆ ಯಾವುದೇ ರಾಜಕೀಯ ಪಕ್ಷಗಳು ಸಭೆ, ಸಮಾರಂಭ, ರ್ಯಾಲಿ ನಡೆಸುವ ಪೂರ್ವದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಮರ್ಪಕವಾದ ಮಾಹಿತಿಯೊಂದಿಗೆ ಪೂರ್ವದಲ್ಲಿ ಅನುಮತಿಯನ್ನು ಪಡೆದು ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು ಒಂದು ವೇಳೆ ನೀತಿ ಸಂಹಿತೆಯ ಉಲ್ಲಂಘನೆಯಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭಟ್ಕಳ ಸಹಾಯಕ ಆಯುಕ್ತ ಸಿದ್ದೇಶ್ವರ ಎನ್. ಹೇಳಿದರು.
ಅವರು ಸೋಮವಾರದಂದು ಇಲ್ಲಿನ ಸಹಾಯಕ ಆಯುಕ್ತರ ಕಛೇರಿಯಲ್ಲಿ ಚುನಾವಣಾ ಪೂರ್ವ ನೀತಿ ಸಂಹಿತೆಯ ಬಗೆಗಿನ ಮಾಹಿತಿ ಹಾಗೂ ಕಾನೂನು ಕ್ರಮದ ಕುರಿತಾಗಿ ಇಲ್ಲಿನ ವಿವಿಧ ರಾಜಕೀಯ ಪಕ್ಷದ ಅಧ್ಯಕ್ಷರು, ಮುಖಂಡರನ್ನೊಳಗೊಂಡ ಸಭೆಯಲ್ಲಿ ಮಾತನಾಡುತ್ತಿದ್ದರು.

‘ಕಳೆದ ಮಾರ್ಚ 27ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮುಂದಿನ ತಿಂಗಳು ಮೇ 12 ರಂದು ಚುನಾವಣೆಯನ್ನು ನಿಗದಿಯಾಗಿದೆ. ಚುನಾವಣಾ ನಿಮಿತ್ತ ತಾಲೂಕಿನಾದ್ಯಂತ ಕಾನೂನಿನ ಕಟ್ಟೆಚ್ಚರವನ್ನು ವಹಿಸಿಲಾಗಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್ : ಚಾಲಕ ಸ್ಥಳದಲ್ಲಿಯೇ ಸಾವು.

ಇನ್ನು ಚುನಾವಣೆಯಲ್ಲಿ ವಿವಿಧ ಮತಗಟ್ಟೆಗಳನ್ನು ವಿವಿಧ ಸೆಕ್ಟರಗಳನ್ನಾಗಿ ಮಾಡಲಾಗಿದ್ದು, ಪ್ರತಿ ಸೆಕ್ಟರ್‍ಗೆ ಓರ್ವ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಹಾಗು ಸುರಕ್ಷತೆಯಿಂದ ತಾಲೂಕಿನ ಆಯಾ ಕಡೆಗಳಲ್ಲಿ ವಿವಿಧ ಸ್ಕ್ವಾಡಗಳನ್ನು ನೇಮಿಸಲಾಗಿದೆ. ಹಾಗೂ ಚುನಾವಣಾ ಪ್ರಚಾರದ ನಿಮಿತ್ತ ರಾಜಕೀಯ ಪಕ್ಷಗಳು, ತಮ್ಮ ಸಭೆ ಸಮಾರಂಭ, ಬೈಕ್ ರ್ಯಾಲಿಗಳಿಗಾಗಿ ಹಾಗು ಮೈಕ್‍ಗಳ ಬಳಕೆ, ಚುನಾವಣಾ ಪ್ರಚಾರಕ್ಕಾಗಿ ಷರತ್ತುಬದ್ದ ಅನುಮತಿಯನ್ನು ಮೊದಲು ಪಡೆದುಕೊಳ್ಳಬೇಕಾಗುತ್ತದೆ.
ಅದೇ ರೀತಿ ಪ್ರಚಾರಕ್ಕಾಗಿ ವಾಹನವನ್ನು ಬಳಸುವ ಪೂರ್ವದಲ್ಲಿ ಆ ವಾಹನದ ಮಾಹಿತಿಯನ್ನು ಹಾಗು ರ್ಯಾಲಿಗಳನ್ನು ನಡೆಸುವಾಗ ರ್ಯಾಲಿಯ ಸಂಪೂರ್ಣ ವಿವರದ ಜೊತೆಗೆ ನೀಡಬೇಕಾದ ಎಲ್ಲಾ ಪರವಾನಿಗೆ ಮೊದಲೇ ಸಂಬಂದಿಸಿದ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆಯತಕ್ಕದ್ದು. ಮತ್ತು ಚುನಾವಣಾ ಪ್ರಚಾರಕ್ಕಾಗಿ ಸರಕಾರಿ ವಾಹನ ಹಾಗು ಸರಕಾರಿ ಕಛೇರಿಗಳನ್ನು ನಿಷೇಧಿಸಲಾಗಿದೆ.

ಸುವಿದಾ ಹಾಗು ಪ್ರಮಾದ ಎನ್ನುವ ಆಪ್‍ಗಳಿದ್ದು, ಇಲ್ಲಿ 7 ರಿಂದ 8 ಅಪ್ಲಿಕೇಶನಗಳನ್ನು ಸಲ್ಲಿಸಬಹುದಾಗಿದೆ. ಸುವಿದಾ ಆಪ್‍ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಪ್ರಮಾದ ಆಪ್‍ನಲ್ಲಿ ದೂರನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದ ಅವರು ಪಕ್ಷಗಳು ಚುನಾವಣಾ ನೀತಿ ಸಂಹಿತೆಯನ್ನು ಖಡಾ ಖಂಡಿತವಾಗಿ ಪಾಲಿಸಲೇಬೇಕು. ನೀತಿ ಸಂಹಿತೆಯನ್ನು ಪಾಲಿಸದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳವಾಗುವುದು ಎಂದು ಹೇಳಿದರು.

RELATED ARTICLES  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಹೊನ್ನಾವರ, ಕುಮಟಾ ಶಿರಸಿ ಕಾರವಾರದಲ್ಲಿ ಯಾವುದೇ ಮಾಹಿತಿಗಳನ್ನು ನೀಡದೇ ಪರವಾನಿಗೆಯನ್ನು ಪಡೆಯದೇ ಸಭೆ ಸಮಾರಂಭವನ್ನು ನಡೆಸಲಾಗುತ್ತದೆ. ಅದು ನೀತಿ ಸಂಹಿತೆ ಉಲ್ಲಂಘನೆಯಲ್ಲವೇ? ಉಲ್ಲಂಘನೆ ಆದರು ಕೂಡ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಭೆಯಲ್ಲಿ ಭÀಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ ದೂರಿದರು.

ಸಭೆಗೆ ಬಿಜೆಪಿ ಪಕ್ಷದಿಂದ ಯಾವೊಬ್ಬ ಮುಖಂಡರು ಹಾಜರಿಲ್ಲವಾಗಿದ್ದು, ಸಭೆಗೆ ಮಹತ್ವ ನೀಡದೇ ಇರುವುದು ಕಂಡು ಬಂದಿದೆ.
ಈ ಸಂದರ್ಬದಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಜೆಡಿಎಸ್ ಮುಖಂಡ ಕೃಷ್ಣಾನಂದ ಪೈ, ಅಮ್‍ಜಾದ್ ಸೇರಿದಂತೆ ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.