ಇದೇ ಏಪ್ರಿಲ್ 15 ರವಿವಾರದಂದು ಸಾಯಂಕಾಲ 5 ಗಂಟೆಗೆ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಖ್ಯಾತ ಗಾಯಕ ಪದ್ಮಶ್ರೀ ಪುರಸ್ಕೃತ ಪಂ. ವೆಂಕಟೇಶಕುಮಾರ್ ರವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ಕಿಯ ಬುರ್ಡೆಭಟ್ಟರ ಮನೆಯವರು ಹಾಗೂ ಪಂ. ಭೀಮಸೇನ ಜೋಶಿ ಪ್ರತಿಷ್ಠಾನದ ಪ್ರಧಾನ ಸಂಚಾಲಕರೂ ಆಗಿ ವಿವಿಧ ಸಾಮಾಜಿಕ- ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು, ಗದುಗಿನ ಎಲ್.ಐ.ಸಿ ಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಮ್.ಟಿ.ಭಟ್ ರವರು ತಮ್ಮೂರಾದ ಕರ್ಕಿಯಲ್ಲಿ ಕಟ್ಟಿಸಿದ ಮನೆ- ‘ಕಲಾಶ್ರೀ’ ಯ ಗೃಹಪ್ರವೇಶದ ಸವಿನೆನಪಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಂಗೀತಪ್ರೇಮಿಗಳೆಲ್ಲರೂ ಆಗಮಿಸಬೇಕಾಗಿ ಕರ್ಕಿಯ ಬುರ್ಡೆಭಟ್ಟರ ಕುಟುಂಬದವರು ವಿನಂತಿಸಿಕೊಂಡಿದ್ದಾರೆ.

RELATED ARTICLES  ಅಂಕೋಲಾದಲ್ಲಿ ಇಟ್ಟಿಗೆ ತುಂಬಿದ ಲಾರಿ ಅಪಘಾತ

ಎಮ್.ಟಿ. ಭಟ್ಟರ ಸುಪುತ್ರ ಸಂಕೇತ್ ಭಟ್ ಕೂಡ ಕಂಪ್ಯೂಟರ್ ಸಾಯನ್ಸ್ ಇಂಜಿನಿಯರಿಂಗ್ ನಲ್ಲಿ ಯುನಿವರ್ಸಿಟಿಯ ಶ್ರೇಷ್ಠ ವಿದ್ಯಾರ್ಥಿಯಾಗಿ ಹೊರಹೊಮ್ಮಿ ಅಮೇರಿಕಾದ ಖ್ಯಾತ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಲ್ಲದೇ, ಭಾರತ ರತ್ನ ಪಂ. ಭೀಮಸೇನ ಜೋಶಿಯವರ ಪ್ರಶಿಷ್ಯನಾಗಿ ವಿವಿಧೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಮನ್ನಣೆ ಪಡೆದಿರುವವನು.

RELATED ARTICLES  ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ.