ಕುಮಟಾ: ಚುನಾವಣೆ ಸನ್ನಿಹಿತವಾಗುತ್ತಿದೆ. ಚುನಾವಣಾ ಪ್ರಕ್ರಿಯೆಗಳು ಚುರುಕುಗೊಳ್ಳುತ್ತವೆ. ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಶಾಸಕರಾಗಿ ತಮ್ಮದೇ ಛಾಪು ಮೂಡಿಸಿದ್ದ ಶಾರದಾ ಶೆಟ್ಟಿ ಅವರು ಚುನಾವಣಾ ಅಖಾಡಕ್ಕೆ ಸಿದ್ಧತೆ ನಡೆಸಿದ್ದಾರೆ. ಎಲ್ಲೆಡೆ ಭರದ ಪ್ರಚಾರದಲ್ಲಿ ತೊಡಗಿರುವ ಇವರು ಮುಂಬರುವ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಮುನ್ನಡೆದಿದ್ದಾರೆ ಎಂಬುದು ಅವರ ಆಪ್ತರ ಅನಿಸಿಕೆ.

IMG 20180413 WA0013

ಹೌದು ಪ್ರತಿನಿತ್ಯ ಬೆಳಗ್ಗಿನಿಂದ ಸಾಯಂಕಾಲದವರೆಗೆ ವಿವಿಧ ಬ್ಲಾಕ್ ಕೇಂದ್ರಗಳಲ್ಲಿ ಸಂಚಾರಮಾಡಿ ಈವರೆಗಿನ ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ತಮ್ಮ ಕನಸುಗಳನ್ನು ಜನತೆಯ ಜೊತೆ ಹಂಚಿಕೊಳ್ಳುತ್ತಿದ್ದಾರೆ ಇವರು. ಇದಕ್ಕೆ ಜನತೆಯ ಸ್ಪಂದನೆಯೂ ಉತ್ತಮ ರೀತಿಯಲ್ಲಿದೆಯಂತೆ.

RELATED ARTICLES  ಜನರಿಗೆ ನಂಬಿಸಿ ಪಂಗನಾಮ ಹಾಕುತ್ತಿದ್ದವ ಪೊಲೀಸ್ ಬಲೆಗೆ : ಜನರೇ ಹುಷಾರ್

ಇಂದೂ ಕೂಡಾ ಮಿರ್ಜಾನ ಜಿಲ್ಲಾಪಂಚಾಯತ್ ವ್ಯಾಪ್ತಿಯ ಖಂಡಗಾರ ,ನಾಗೂರು ಹಾಗೂ ಇನ್ನು ಹಲವೆಡೆ ಶಾರದಾ ಶೆಟ್ಟಿಯವರೇ ಖುದ್ದು ಭೇಟಿ ನೀಡಿ ಜನತೆಯ ಜೊತೆಗೆ ಮಾತುಕತೆ ನಡೆಸಿದರು.

IMG 20180413 WA0014

ಶಾಸಕರಾಗಿ ಕ್ಷೇತ್ರದ ಕುಂದು ಕೊರತೆಗಳನ್ನು ಸ್ವಯಂ ನಿಭಾಯಿಸಿ ತಮ್ಮ ಅವಧಿ ಪೂರೈಸಿರುವ ಶಾಸಕರು ಕುಮಟಾ ಹಾಗೂ ಹೊನ್ನಾವರ ಅನೇಕ ಸಮಸ್ಯೆಗಳ ಬಗ್ಗೆ ಹಾಗೂ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಬಗ್ಗೆ ಜನತೆಯ ಜೊತೆಗೆ ಮಾತುಕತೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಕನಕದಾಸ ಜಯಂತಿ ಅರ್ಥಪೂರ್ಣ ಆಚರಣೆ.

ಕೇವಲ ಶಾಸಕಿ ಶಾರದಾ ಶೆಟ್ಟಿ ಅಷ್ಟೇ ಅಲ್ಲ ಅವರ ಜೊತೆಗೆ ಕಾಂಗ್ರೆಸ್ ಹಿರಿ ಕಿರಿಯ ಮುಖಂಡರು ಅವರಿಗೆ ಸಾಥ್ ನೀಡುತ್ತಿದ್ದಾರೆ .ಜನತೆಯ ಮನ ಓಲೈಕೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ .

ಒಟ್ಟಿನಲ್ಲಿ ಚುನಾವಣಾ ಕಣ ರಂಗೇರುತ್ತಿದೆ ಜೊತೆಗೆ ಕಾಂಗ್ರೆಸ್ ಕಾರ್ಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿದೆ.ಶ್ರೀಮತಿ ಶಾರದಾ ಶೆಟ್ಟಿ ಅವರೇ ನಮ್ಮ ನೆಚ್ಚಿನ ನಾಯಕಿ ಎಂಬುದಾಗಿ ಜನತೆ ಅವರತ್ತ ಮತ್ತೆ ಮುಖ ಮಾಡುತ್ತಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ .