ಶಿರಸಿ: ಇಂದು ಇಲ್ಲಿನ ನಗರದ ಹಲವು ವಾರ್ಡಗಳಲ್ಲಿ ಪ್ರಚಾರ ನಡೆಸಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಕರೆ ನೀಡಿದರು.
ಅವರು ಇಂದು ಶಿರಸಿ ನಗರದ ಮರಾಠಿಕೊಪ್ಪ , ಶೃದ್ಧಾನಂದಗಲ್ಲಿ, ಬಾಪೂಜಿನಗರ, ಬಚಗಾಂವ ವ್ಯಾಪ್ತಿಯ ಘಟಕ ಹಾಗೂ ಬೂತ್ ಅಧ್ಯಕ್ಷರು ಮತ್ತು ಸದಸ್ಯರುಗಳ ಪ್ರತ್ಯೇಕ ಸಭೆ ನಡೆಸಿ ತಮ್ಮ ಘಟಕ ಹಾಗೂ ಬೂತ್ ಮಟ್ಟದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಇದು ನನಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ಕ್ಣೇತ್ರದಾದ್ಯಂತ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಕಾರ್ಯಕರ್ತರು ಮತ್ತಷ್ಟು ಉತ್ಸಾಹ ತೋರಬೇಕಿದೆ. ಕಾರ್ಯಕರ್ತರು ಮನೆ ಮನೆಗೆ ಭೇಟಿ ಮಾಡಿ ಪಕ್ಷದ ಪರ ಪ್ರಚಾರ ಮಾಡಬೇಕಿದೆ.
ರಾಜ್ಯ ಸರ್ಕಾರದ ಅಭಿವೃದ್ಧಿ ಹಾಗೂ ಸಾಧನೆಯನ್ನು ಪ್ರತಿಯೊಂದು ಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ. ಚುನಾವಣೆಗೆ ನಗರದ ಮತದಾರರೇ ನಿರ್ಣಾಯಕರಾಗಿರುತ್ತಾರೆ. ಅದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮ ಅತ್ಯವಶ್ಯಕ, ಕಾರ್ಯಕರ್ತರು ತಮ್ಮ ಶಕ್ತಿಮೀರಿ ಅವರವರ ಬೂತ್ ಗಳಲ್ಲಿ ಪಕ್ಷದ ಪರ ಪ್ರಚಾರ ಮಾಡುವಂತೆ ತಿಳಿಸಿದರು.
ಈ ಸಂಧರ್ಭದಲ್ಲಿ ಪಕ್ಷದ ಮುಖಂಡ ರಮೇಶ್ ದುಭಾಶಿ ಮಾತನಾಡಿ, ತಾಲೂಕಿನಾದ್ಯಂತ ಪಕ್ಷ ಸಂಘಟನೆಯಲ್ಲಿ ಸದೃಢ ವಾಗಿದೆ. ನಿಮಗೆ ಹತ್ತಿರವಿರುವ ವ್ಯಕ್ತಿಗೆ ಪಕ್ಷದ ಟಿಕೇಟ್ ನೀಡಲಿದೆ. ನಮ್ಮ ಪಕ್ಷದ ಅಭ್ಯರ್ಥಿಯೊಂದಿಗೆ ಪ್ರತಿ ಕ್ಷೇತ್ರದಲ್ಲೂ ಪಾದಯಾತ್ರೆ ಮಾಡಲಿದ್ದೇವೆ. ಸರ್ಕಾರ ಎಲ್ಲಾ ಸಮಾಜದ ಜನರಿಗೆ ಮುಟ್ಟುವಂತಹ ಯೋಜನೆಗಳನ್ನು ನೀಡಿದೆ. ಯೋಜನೆಗಳಿಂದ ಅನೇಕ ಬಡವರಿಗೆ ಅನುಕೂಲವಾಗಿದೆ ಎಂದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ ಹೊನ್ನಾವರ ಮಾತನಾಡಿ, ಈ ಹಿಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ನೀವು ಆಶೀರ್ವಾದ ಮಾಡಿದ್ದೀರಿ. ಈ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗೆ ಮತ ನೀಡಿ, 25 ವರ್ಷದ ಆಸೆಯಂತೆ ಪಕ್ಷ ಗೆಲ್ಲುವಲ್ಲಿ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಕೆ. ಭಾಗ್ವತ್ , ಸೂರ್ಯಪ್ರಕಾಶ್ ಹೊನ್ನಾವರ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪೇಂದ್ರ ಪೈ, ನಗರಸಭಾ ಅಧ್ಯಕ್ಷ ಪ್ರದೀಪ ಶೆಟ್ಟಿ, ಮುಖಂಡರಾದ ರಮೇಶ ದುಭಾಶಿ, ನಗರ ಸಭಾ ಉಪಾಧ್ಯಕ್ಷೆ ಅರುಣಾ ವೇರ್ಣೆಕರ್, ಶೈಲೇಶ್ ಜೋಗಲೇಕರ್, ಪ್ರಸನ್ನ ಶೇಟ್ಟಿ , ಗಣೇಶ್ ದಾವಣಗೆರೆ, ಪ್ರವೀಣ ಹೆಗಡೆ , ಘಟಕ ಅಧ್ಯಕ್ಷರಾದ ಆರ್. ಜಿ. ನಾಯ್ಕ, ಗುರು ಶೇಟ್ಟಿ ಸೇರಿದಂತೆ ಘಟಕ ಅಧ್ಯಕ್ಷರು ,ಬೂತ್ ಕಾರ್ಯಕರ್ತರು ಉಪಸ್ಥಿತರಿದ್ದರು.