ಮೂಡಲಗಿ: ಮಗುವಿನ ಸರ್ವತೋಮುಖ ಬೆಳವಣಗೆಯಲ್ಲಿ ಸ್ಪರ್ಧಾತ್ಮಕತೆ ಎನ್ನುವದು ಅತೀ ಅವಶ್ಯಕ, ನಿರಂತರ ಮಾರ್ಗದರ್ಶನದಿಂದ ಕಲಿಕೆಯಲ್ಲಿ ಯಶಸ್ವಿಯಾಗಿ ದೇಶದ ಉತ್ತಮ ಪ್ರಜೆಯಾಗುವ ಮೂಲಕ ಕುಟುಂಬದ ಘನತೆಯನ್ನು ಎತ್ತಿ ತೊರುವಲ್ಲಿ ಮಹತ್ತರ ಪಾತ್ರ ವಹಿಸುತ್ತಾನೆ ಎಂದು ಬೆಳಗಾವಿ ಜಿ.ಪಂ ಮುಖ್ಯ ಕಾರ್ಯನಿರ್ವಹನಾಧಿಕಾರಿ ರಾಮಚಂದ್ರನ್ ಆರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶುಕ್ರವಾರ ಜರುಗಿದ ಮೂಡಲಗಿ ವಲಯ ವ್ಯಾಪ್ತಿಯ ನಲ್ಲಾನಟ್ಟಿ ಕಲ್ಲೋಳ್ಳಿಯಲ್ಲಿ ಮುರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಅಣಕು ಪರೀಕ್ಷೆಗಳ ಮೇಲ್ವಿಚಾರಣೆ ನಡೆಸಿ ಮಾತನಾಡಿದರು. ಐಎಎಸ್, ಐಪಿಎಸ್,ಕೆಎಎಸ್ ಮುಂತಾದ ಉನ್ನತ ಹುದ್ದೆಗಳನ್ನು ಪಡೆಯ ಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಯ ಸಾಧಿಸಬೇಕಾಗುವದು. ಮೂಡಲಗಿ ವಲಯ ವ್ಯಾಪ್ತಿಯಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಇಂತಹ ಅಣಕು ಪರೀಕ್ಷೆಗಳು ನಡೆಯುತ್ತಿದ್ದು, ಮಗುವಿಗೆ ಸ್ಪರ್ಧಾತ್ಮ ಮನೋಬಾವ ಇಗಿಂದಲೆ ಪ್ರಾರಂಭವಾಗುವದರಿಂದ ಭವಿಷ್ಯತ್ತಿನಲ್ಲಿ ಉನ್ನತ ಹುದ್ದೆ ಸ್ಥಾನಗಳು ದೊರೆಯುತ್ತವೆ. ತಂದೆ ತಾಯಿ ಕುಟುಂಬಕ್ಕೆ ಶಕ್ತಿಯಾಗಿ ಸಂಸ್ಕಾರಯುತ ಮೌಲ್ಯಗಳನ್ನು ರೂಡಿಸಿಕೋಳ್ಳ ಬೇಕೆಂದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು 43 ಜನರಲ್ಲಿ ಕೊರೋನಾ ಪಾಸಿಟೀವ್

ಮೂಡಲಗಿ ವಲಯ ವ್ಯಾಪ್ತಿಯಲ್ಲಿ ರಾಜ್ಯದಲ್ಲಿಯೇ ನೂತನವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೀಜಕ್ಕೂ ಮಾದರಿಯಾಗಿದೆ. ಜೂನ ಪ್ರಾರಂಭದಲ್ಲಿ ತರಗತಿ ಶಿಕ್ಷಕರನ್ನು ಸಿದ್ದ ಪಡಿಸಿ ಅವರಿಗೆ ಅಗತ್ಯ ಪರೀಕ್ಷಾ ಸಾಹಿತ್ಯ, ಕಾರ್ಯಾಗಾರ, ಅರ್ಜಿಸಲ್ಲಿಸಲು ಪ್ರೋತ್ಸಾಹ, ಅಣಕು ಪರೀಕ್ಷೆಗಳ ಆಯೋಜನೆ ಮಾಡಿದ್ದು ಪ್ರಶಂಸಾರ್ಯವಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಆಯೋಜಿಸದ ಅದು ಬೆಸಿಗೆ ರಜೆ ಇದ್ದರು ಸಹ ಅವಿರತ ಪ್ರಯತ್ನ ಪಡುತ್ತಿರುವದು ಶಿಕ್ಷಕ ಸಮುದಾಯ ಅಧಿಕಾರಿ ವೃಂದದ ಕಾರ್ಯ ಮೆಚ್ಚುವಂತಹದು. ಏಪ್ರೀಲ್ 13 ಮತ್ತು 14 ರಂದು ಅಣಕು ಪರೀಕ್ಷೆಗಳನ್ನು ಸ್ಥಳೀಯ ಮಟ್ಟದಲ್ಲಿ ಗ್ರಾಮಾಂತರ ಪ್ರದೇಶದ ಮಗುವಿಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವದು ಅಭಿನಂದನಾರ್ಯವಾಗಿದೆ ಎಂದು ಮಕ್ಕಳ ಅಣಕು ಪರೀಕ್ಷೆ ಹಾಗೂ ಅವರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣ ಕ ಜಿಲ್ಲೆಗಳಲ್ಲಿ ಒಟ್ಟು 85 ಪರೀಕ್ಷಾ ಕೇಂದ್ರಗಳಿದ್ದು 22736 ಮಕ್ಕಳು ಏ 15 ರಂದು ಜರುಗುವ ಮುರಾರ್ಜಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮೂಡಲಗಿ ವಲಯ ವ್ಯಾಪ್ತಿಯಲ್ಲಿ 21 ಪರೀಕ್ಷಾ ಕೇಂದ್ರಗಳಿದ್ದು 5120 ಮಕ್ಕಳು ಅರ್ಜಿ ಸಲ್ಲಿಸಿದ್ದು ಇದು ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಪ್ರವೇಶ ಪರೀಕ್ಷೆಗೆ ಹಾಜರಾಗುವ ಮೂಲಕ ಜಿಲ್ಲೆಯ ಸಿಂಹಪಾಲು ತಮ್ಮದಾಗಿಸಿಕೊಂಡಿದ್ದಾರೆ. ಪರೀಕ್ಷೆಗೆ ಖಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿದರು.

RELATED ARTICLES  ವಿಠ್ಠಲದಾಸ ಕಾಮತ್, ರಾಘವೇಂದ್ರ ಭಟ್‌ಗೆ ಭಟ್ಟಾಕಳಂಕ ಪ್ರಶಸ್ತಿ

ಈ ಸಂದರ್ಭದಲ್ಲಿ ಚಿಕ್ಕೋಡಿ ಉಪನಿರ್ಧೇಶಕರ ಕಾರ್ಯಾಲಯದ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಬಿ.ಆರ್.ಪಿಗಳಾದ ಕೆ.ಎಲ್ ಮೀಶಿ, ಪಿ.ಜಿ ಪಾಟೀಲ, ಎ.ಬಿ ಚವಡನ್ನವರ, ಸಿಆರ್.ಪಿ ಕೆ.ಆರ್ ಅಜ್ಜಪ್ಪನವರ, ಎಸ್.ಬಿ ಕುಂಬಾರ ಪ್ರಧಾನ ಗುರುಗಳಾದ ಸರಸ್ವತಿ ಕುಳ್ಳೂರ, ಸಿ.ಎಲ್ ಬಡಿಗೇರ, ಎಸ್.ಎಸ್ ನಾಯ್ಕೋಡಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.