ದಿನಾಂಕ 29-03-2018 ರಂದು ಬೆಳಿಗ್ಗೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರ ಗೋ ಶಾಲೆಯಲ್ಲಿ ಜರುಗಿದ ಗೋವಿನ ಕಳ್ಳತನಕ್ಕೆ ಸಂಬಂಧಿಸಿದ ಬಗ್ಗೆ ಶ್ರೀ ರಾಜಾರಾಂ ಭಟ್ ರವರು ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಕೊಣಾಜೆ ಠಾಣಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ ಈ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳಾದ

RELATED ARTICLES  ಉತ್ತರಕನ್ನಡದಲ್ಲಿ ಚಿಗುರಿದ ಎಮ್ಸ್ ಆಸ್ಪತ್ರೆ ಕನಸು

1) ಅಹಮ್ಮದ್ ಕಬೀರ್, ಎಂ.ಜೆ.ಎಂ.ಕಸಬಾ ಬೆಂಗ್ರೆ
2) ಅಬೂಬಕ್ಕರ್ ಸಿದ್ಧಿಕ್ @ ಕರ್ಪೆ ಸಿದ್ಧಿಕ್, ಪೈವಳಿಕೆ ಮಂಜೇಶ್ವರ
3) ಮಹಮ್ಮದ್ ಇಮ್ರಾನ್, ಮಿಲ್ಲತ್ ನಗರ, ಉಳ್ಳಾಲ ಎಂಬವರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಆರೋಪಿಗಳ ವಶದಿಂದ ಕೃತ್ಯಕ್ಕೆ ಬಳಸಿದ ಕೆಎ.01ಎಂ.ಬಿ.1253 ನೇ ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು ಈ ಆರೋಪಿಗಳು ಈ ಮೊದಲು ಉಳ್ಳಾಲ, ಕಂಕನಾಡಿ, , ವಿಟ್ಲ ಕೊಣಾಜೆ ಠಾಣಾ ಸರಹದ್ದಿನಲ್ಲಿ ಇದೇ ರೀತಿ ಹಟ್ಟಿಯಿಂದ ದನಗಳನ್ನು ಕದ್ದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 01-11-2018 ರ ರಾಶಿ ಭವಿಷ್ಯ ಇಲ್ಲಿದೆ.

ಈ ಕಾರ್ಯಾಚರಣೆಯನ್ನು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ಯವರಾದ ಶ್ರೀ ರಾಮ ರಾವ್‌‌ರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ಕೊಣಾಜೆ ಪೊಲೀಸ್ ನಿರೀಕ್ಷಕ ಪ್ರಕಾಶ್‌‌ ಬಿ.ಎಸ್‌, ಪಿ.ಎಸ್.ಐ ರವಿ ಪೀರು ಪವಾರ್, ಪಿಎಸ್ಐ ಶಂಕರ್ ನಾಯರಿ ಮತ್ತು ಸಿಬ್ಬಂದಿಯವರು ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.