ಕುಮಟಾ: ಕರ್ನಾಟಕ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ .ಎಲ್ಲ ಪಕ್ಷಗಳು ತಮ್ಮ ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ .ಇಷ್ಟು ದಿನದವರೆಗೆ ಟಿಕೆಟ್ ಗೊಂದಲದಲ್ಲಿದ್ದ ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಶಾರದಾ ಶೆಟ್ಟಿ ಅವರಿಗೆ ಸಿಗುವ ಎಲ್ಲ ಲಕ್ಷಣಗಳು ಕಾಣುತ್ತಿರುವಂತೆಯೇ ಪ್ರಚಾರ ಕಾರ್ಯವೂ ಚುರುಕುಗೊಳ್ಳುತ್ತಿದೆ. ಕಾರ್ಯಕರ್ತರನ್ನು ಸಿದ್ಧಗೊಳಿಸಿ ಪ್ರಚಾರ ಕಾರ್ಯಕ್ಕಿಳಿಸುವ ಎಲ್ಲ ಸಿದ್ಧತೆಯೂ ನಡೆದಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದಲೇ ಲಭ್ಯವಾಗಿದೆ.
ಹೌದು ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಛಾಪು ಮೂಡಿಸಲು ಪ್ರಯತ್ನ ನಡೆಸಿದೆ . ಕರ್ನಾಟಕದಲ್ಲಿ ತಮ್ಮದೇ ಆದ ಆಡಳಿತ ರೂಪಿಸಿ ಜನತೆಯ ಮನ ಗೆಲ್ಲುವಲ್ಲಿ ಪ್ರಯತ್ನ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಪ್ರತಿಯೊಂದು ಕ್ಷೇತ್ರವನ್ನು ಮಹತ್ವದ್ದೆಂದು ಪರಿಗಣಿಸಿದೆ ಎನ್ನಲಾಗಿದೆ .
ಕುಮಟಾ ಹೊನ್ನಾವರ ಕ್ಷೇತ್ರದ ಮಹಿಳಾ ಪ್ರತಿನಿಧಿಯಾಗಿ ಐದು ವರ್ಷಗಳ ಕಾಲ ಸಮರ್ಥ ಆಡಳಿತ ನಡೆಸಿದ ಶ್ರೀಮತಿ ಶಾರದಾ ಶೆಟ್ಟಿಯವರು ಜನ ಬೆಂಬಲಕ್ಕಾಗಿ ಮತ್ತೆ ಪ್ರಯತ್ನಗಳು ನಡೆದಿದೆ . ಒಂದೆಡೆ ಶಾರದಾ ಶೆಟ್ಟಿ ಅವರೇ ತಮ್ಮ ಪ್ರಯತ್ನವನ್ನು ನಡೆಸಿ ಜನತೆಯ ಮನ ಗೆಲ್ಲಲು ಹಾಗೂ ಜನತೆಯ ಆಶೋತ್ತರಕ್ಕೆ ಸ್ಪಂದಿಸಲು ಪ್ರಯತ್ನಿಸುತ್ತಿದ್ದರೆ .ಇನ್ನೊಂದೆಡೆ ಪುತ್ರ ರವಿಕುಮಾರ್ ಶೆಟ್ಟಿ ತಮ್ಮ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ .
ಶಾರದಾ ಶೆಟ್ಟಿ ಒಂದೆಡೆ ಜನತೆಯ ಮನ ಗೆದ್ದು ಪ್ರಚಾರ ಕಾರ್ಯ ಪ್ರಾರಂಭಿಸಿದರೆ .ಇನ್ನೊಂದೆಡೆ ರವಿಕುಮಾರ್ ಶೆಟ್ಟಿ ತಮ್ಮ ತಂಡದೊಂದಿಗೆ ಪ್ರತಿ ಬ್ಲಾಕ್ ಹಾಗೂ ಪ್ರತಿ ವ್ಯಕ್ತಿಯ ಮನೆಯನ್ನು ತಲುಪುವಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹೊನ್ನಾವರ ತಾಲೂಕಿನ ಹಳದಿಪುರ ಮತ್ತು ಸಾಲ್ಕೋಡ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಘಟಕಗಳ ಸಭೆ ನಡೆಸಿ ಚುನಾವಣಾ ಗೆಲುವಿನ ತಂತ್ರದ ಬಗ್ಗೆ ರವಿ ಕುಮಾರ್ ಶೆಟ್ಟಿ ಚರ್ಚಿಸಿದರು .ಎಲ್ಲ ಪ್ರದೇಶಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಅವರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದರು .
ಮನೆ ಮನೆ ಪ್ರಚಾರ ಹಾಗೂ ಜನತೆಯ ಮನ ಮುಟ್ಟಿಸುವಂತೆ ಪ್ರಯತ್ನ ನಡೆಸಲು ಅವರು ಕಾರ್ಯ ನೀಡಿದ್ದಾರೆ ಎಂದು ತಿಳಿದು ಬಂದಿದೆ .ಶ್ರೀಮತಿ ಶಾರದಾ ಶೆಟ್ಟಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರಯತ್ನ ಪ್ರಾರಂಭಿಸಿದ್ದಾರೆ .