ಶಿರಸಿ: ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುವುದರ ಜೊತೆಯಲ್ಲಿ ಧರ್ಮ – ಸಂಸ್ಕತಿಯನ್ನು ಉಳಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡುವುದು ಜನ ಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ತಾಲೂಕಿನ ವಾನಳ್ಳಿಯ ಮುಸ್ಕಿ, ಶಿರಗುಣಿ ಹಾಗೂ ಧೋರಣಗಿರಿ ಭಾಗದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದರು.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ’ ಆಧ್ಯತೆ ನೀಡದೇ ನಿರ್ಲಕ್ಷ ಮನೋಭಾವನೆ ಹೊಂದಿರುವುದರಿಂದ, ಗ್ರಾಮೀಣ ಭಾಗದ ರಸ್ತೆಗಳ ದುಃಸ್ಥಿತಿಗೆ ಮೂಲ ಕಾರಣವಾಗಿದೆ. ಎಂದ ಅವರು ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ, ಜನರಿಗೆ ಕಾಂಗ್ರೆಸ್ ಸರಕಾರ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.

RELATED ARTICLES  ಎನ್. ಎಸ್. ಹೆಗಡೆ ಕುಂದರಗಿ ಇನ್ನಿಲ್ಲ : ಅಂತಿಮ ದರ್ಶನ ಪಡೆದ ಹೆಬ್ಬಾರ್.

ಇದೇ ಸಂದರ್ಭದಲ್ಲಿ ಶಿರಗುಣಿ ಭಾಗದ ಶ್ರೀಮತಿ ಗೌಡ, ಭಾಗೀರಥಿ ಗೌಡ, ಹಾಗೂ ನೀಲಕಂಠ ಗೌಡ ಅವರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ಬಿ.ಜೆ.ಪಿ.ಗೆ, ಸೇರ್ಪಡೆಗೊಂಡರು.
ಪ್ರಮುಖರಾದ ದತ್ತಾತ್ರೇಯ ವೈದ್ಯ, ಕಕ್ಕಳ್ಳಿ, ಸುಬ್ರಾಯ ಹೆಗಡೆ ಹೊಂಡೆತೋಟ, ಗ್ರಾ.ಪಂ. ಸದಸ್ಯ ಹರ್ಷ ಭಟ್ಟ ವಾನಳಿ,್ಳ ಉಮಾಮಹೇಶ್ವರಿ ಭಟ್ಟ, ಶಿರಗುಣಿ ಕಮಲಾ ಸಿದ್ಧಿ, ಎಡಳ್ಳಿಗದ್ದೆ, ರಮೇಶ ಭಟ್ಟ ಮುಸ್ಕಿ, ಸುಬ್ರಾಯ ಹೆಗಡೆ ಗದ್ದೇಮನೆ, ಎ.ವಿ.ಭಟ್ಟ ಮುಸ್ಕಿ, ವೆಂಕಟ್ರಮಣ ಭಟ್ಟ, ಗಣಪತಿ ಭಟ್ಟ, ಬಡಗೂಮನೆ, ತಿರುಮಲೇಶ್ವರ ಹೆಗಡೆ ಹೊಂಡೆತೋಟ, ಮಂಜುನಾಥ ಹೆಗಡೆ ಬೈಲಗದ್ದೆ, ಆರ್.ಎಸ್.ಎಸ್.ನ ಸುರೇಶ ಭಟ್ಟ, ಮುಸ್ಕಿ ಹಾಗೂ ಶ್ರೀನಾಥ ಗೌಡ ಮತ್ತಿತರು ಜೊತೆಗಿದ್ದರು.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಾಧನೆಗೆ ಅಭಿನಂದಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ