ಮುಂಬೈ: ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಕಿಡ್ನಿ ವೈಫಲ್ಯವೂ ಪ್ರಮುಖ ಕಾರಣವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯ, ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಕಿಡ್ನಿ ವೈಫಲ್ಯ ಎಂಬುದು ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಪ್ರಮುಖವಾದ 5 ಕಾರಣಗಳಲ್ಲಿ ಒಂದಾಗಿದೆ. ಕಳೆದ 5-6 ವರ್ಷಗಳಿಗೆ ಹೋಲಿಕೆ ಮಾಡಿದರೆ 25-30 ವರ್ಷದ ಯುವ ಜನರು ಹೆಚ್ಚು ಕಿಡ್ನಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಡಾ. ಅರುಣ್ ಪಿ ದೊಶಿ ಹೇಳಿದ್ದಾರೆ.
ಮೂತ್ರಪಿಂಡದ ವೈಫಲ್ಯಕ್ಕೆ ಹೈಪರ್ ಟೆನ್ಷನ್ ಸಹ ಕಾರಣವಾಗಿದ್ದು, ಹೆಚ್ಚು ಉಪ್ಪು ಸೇವಿಸುವುದೂ ಸಹ ಹೈಪರ್ ಟೆನ್ಷನ್ ಗೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಿಡ್ನಿ ರೋಗಗಳನ್ನು ತಡೆಗಟ್ಟಲು ಉಪ್ಪು ಕಡಿಮೆ ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.