ಹೊನ್ನಾವರ : ತಾಲೂಕಿನ ಮಾಡಗೇರಿಯ ರಾಮನಾಥ ದೇವಸ್ಥಾನ ಸಭಾಭವನದಲ್ಲಿ ಅನಿಕೇತನ ಸಂಸ್ಕøತಿ ಅಧ್ಯಯನ ಕೇಂದ್ರ ಆಯೋಜಿಸಿದ 8ನೇ ವರ್ಷದ ಮಕ್ಕಳ ಹಬ್ಬ ಬೇಸಿಗೆ ಶಿಬಿರ ಉದ್ಘಾಟನೆಗೊಂಡಿತು. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ನಮ್ಮ ಕಾಲಕ್ಕೆ ದುರ್ಲಭವಾಗಿದ್ದ ಇಂತಹ ಅವಕಾಶಗಳನ್ನು ಗ್ರಾಮೀಣ ಭಾಗದಲ್ಲಿ ತೆರೆದುಕೊಟ್ಟಿದ್ದಾರೆ. ನಿಮ್ಮ ಬೇಸಿಗೆ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯಲು ಶ್ರಮವಹಿಸಿ ಕಟ್ಟಿರುವ ಶಿಬಿರ ಇದು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

RELATED ARTICLES  ಸಮಾಜಸೇವೆ ಹಾಗೂ ಹೋರಾಟಗಳಿಂದ ಗುರ್ತಿಸಿಕೊಂಡಿರುವ ಮಾಧವ ನಾಯಕ ಚುನಾವಣಾ ಕಣಕ್ಕೆ ಎಂಟ್ರಿ?

ಸುವರ್ಣ ರಂಗ ಸಾಧಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹಿರಿಯ ಕಲಾವಿದ ಅನಂತ ನಾಯ್ಕ ಮಾತನಾಡಿ ಈ ರಜೆಯನ್ನು ಅನಗತ್ಯವಾಗಿ ಕಾಲಹರಣ ಮಾಡದಂತೆ ನಿಮ್ಮನ್ನು ಇಲ್ಲಿ ಬರುವಂತೆ ಮಾಡಿದ ಪಾಲಕರು ಖಂಡಿತ ಈ ಶಿಬಿರದ ಮಹತ್ವ ಅರಿತಿದ್ದಾರೆ ಅವರದ್ದು ಸುಸಂಸ್ಕøತ ಮನಸ್ಸು ಎಂದರು.

ಮಾನವ ಸಂಪನ್ಮೂಲ ಅಭಿವ್ರದ್ಧಿಗಾಗಿ, ಈ ಪೀಳಿಗೆಯನ್ನು ಮುಂದಿನ ಸತ್ಪ್ರಜೆಗಳನ್ನಾಗಿಸುವಲ್ಲಿ ಇಂತಹ ಸಂಸ್ಕøತಿ ಅಧ್ಯಯನ ಕೇಂದ್ರದ ಅಗತ್ಯತೆ ಹೆಚ್ಚಿದೆ ಎಂಬುದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮನಾಥ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಲಂಬೋದರ ನಾಯ್ಕ ಅಭಿಪ್ರಾಯಪಟ್ಟರು.

RELATED ARTICLES  ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು ಗ್ರಾಮ ಪಂಚಾಯತ್ ಚುನಾವಣೆ

ಅನಿಕೇತನ ಸಂಸ್ಕøತಿ ಅಧ್ಯಯನ ಕೇಂಧ್ರದ ಅಧ್ಯಕ್ಷ ಪ್ರಮೋದ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀನಿವಾಸ ನಾಯ್ಕ ಸ್ವಾಗತಿಸಿದರೆ, ರಾಘವೇಂದ್ರ ಮೊಗಳ ವಂದಿಸಿದರು. ಕೃಷ್ಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಎಂಟು ದಿನಗಳ ಕಾಲ ಶಿಬಿರ ನಡೆಯುತ್ತಿದ್ದು ರಾಜ್ಯದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ನಾಟಕ, ನೃತ್ಯ, ಯಕ್ಷಗಾನದ ಹೆಜ್ಜೆ, ಸಂಗೀತ, ಕತೆ-ಕವಿತೆ ಕಟ್ಟುವುದು, ಮಣ್ಣಿನ ಮಾದರಿ, ಚಿತ್ರಕಲೆ, ಮುಖವಾಡ ತಯಾರಿಕೆಯ ತರಬೇತಿ ನಡೆಯಲಿದ್ದು ಐವತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.