ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ದಿನಾಂಕ 15-04-2018 ರವಿವಾರ (ಚೈತ್ರ ಅಮಾವಾಸ್ಯೆ ) ರೂಢಿಗತ ಪರಂಪರೆಯಂತೆ ಕ್ಷತ್ರಿಯ ಕೋಮಾರಪಂಥ ಸಮಾಜದ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅಮೃತಾನ್ನ ಪ್ರಸಾದ ಭೋಜನ ವಿತರಣೆ,ರಥೋತ್ಸವ ಸೇವೆ ಜರುಗಲಿದೆ. ಮಧ್ಯಾಹ್ನ 12.00 ಘಂಟೆಯಿಂದ ಶ್ರೀ ಮಹಾಬಲೇಶ್ವರ ದೇವಾಲಯದ ಎದುರಿನ ಮಹರ್ಷಿ ದೈವರಾತ ವೇದಿಕೆಯಲ್ಲಿ ‘ಧರ್ಮಸಭೆ’ ನಡೆಯಲಿದೆ . ಧರ್ಮಸಭೆಯಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 09.00 ಘಂಟೆಗೆ ಕೋಮಾರಪಂಥ ಸಮಾಜದ ವತಿಯಿಂದ, ಸಮಾಜದ ಸಮಸ್ತರ ಒಳಿತನ್ನು ಪ್ರಾರ್ಥಿಸಿ ರಥೋತ್ಸವ ಸೇವೆ ನಡೆಯಲಿದೆ.

RELATED ARTICLES  ಜುಲೈ 28 ಕ್ಕೆ ಕಾತ್ಯಾಯನಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಭೆ

ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀಮಠದ ಧರ್ಮಚಕ್ರ ಟ್ರಸ್ಟ್ – ಶ್ರೀರಾಮಚಂದ್ರಾಪುರಮಠ ಇವರ ವತಿಯಿಂದ ಗೋಕರ್ಣ, ತೊರ್ಕೆ , ಹನೇಹಳ್ಳಿ, ನಾಡುಮಾಸ್ಕೇರಿ , ಅಗ್ರಗೋಣ, ಸಗಡಗೇರಿ, ಹಿರೇಗುತ್ತಿ, ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಸಮುದಾಯದ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ‘ಸಾರ್ವಭೌಮ ವಿದ್ಯಾರ್ಥಿ ವೇತನ’ ವಿತರಿಸಲಾಗುತ್ತಿದೆ. 15-04-2018 ರವಿವಾರ ಮಹರ್ಷಿ ದೈವರಾತ ವೇದಿಕೆಯಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರ ಅಮೃತ ಹಸ್ತಗಳಿಂದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಲಿದೆ. ಅರ್ಹ ವಿದ್ಯಾರ್ಥಿಗಳಿಗೆ ಆಮಂತ್ರಣ ಕಳುಹಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಸಕಾಲದಲ್ಲಿ ಹಾಜರಿದ್ದು ವಿದ್ಯಾರ್ಥಿ ವೇತನ ಸ್ವೀಕರಿಸಬೇಕಾಗಿ ಸೂಚನೆ.

RELATED ARTICLES  ಕೈ ಕೊಟ್ಟ ಪ್ರೇಯಸಿ : ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಈ ಎಲ್ಲ ಕಾರ್ಯಕ್ರಮಗಳಿಗೆ ಸರ್ವರಿಗೂ ಆತ್ಮೀಯ ಆಮಂತ್ರಣವನ್ನು ದೇವಾಲಯದ ಆಡಳಿತ ಮಂಡಳಿ ನೀಡಿದೆ.