ಶಿರಸಿ: ಜನತಾದಳ ಜಾತ್ಯಾತೀತ ಪಕ್ಷದ ಸಿದ್ದಾಂತ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಯ ಅಂಗವಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 9 ತಿಂಗಳಿನಿಂದ ವೈಯಕ್ತಿಕವಾಗಿ ಕಾರ್ಯಕರ್ತರ ಸಹಯೋಗದೊಂದಿಗೆ ಹತ್ತು ಸಾವಿರ ಮನೆಗಳಿಗೆ ಭೇಟಿ ನೀಡಲಾಗಿದ್ದು ಕ್ಷೇತ್ರದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಜೆ.ಡಿ.ಎಸ್. ಅಭ್ಯರ್ಥಿ ಎ.ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ವಿಧಾಸಭಾ ಕ್ಷೇತ್ರದ ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ ಮತದಾರ ಮನೆ ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹೇಳಿದರು.
ಪ್ರವಾಸದ ಅವಧಿಯಲ್ಲಿ ಸ್ಥಳೀಕರ ಸಮಸ್ಯೆಗಳನ್ನು ಅಧ್ಯಯನ ಮಾಡುವ ಜೊತೆಯಲ್ಲಿ ಮತದಾರರೊಂದಿಗೆ ನೇರ ಸಂಪರ್ಕ ಹೊಂದುವ ಹಾಗೂ ಪಕ್ಷದ ಸಂಘಟನೆ ಬಲಗೊಳಿಸುವ ಉದ್ದೇಶ ಹೊಂದಿದ್ದು ಗ್ರಾಮೀಣ ಭಾಗದಲ್ಲಿನ ರಸ್ತೆ ಸಂಚಾರ, ಕುಡಿಯುವ ನೀರಿನ ಸೌಲತ್ತು, ಬೆಳೆ ಕುಸಿತ, ನೀರಾವರಿ, ಪ್ರವಾಸೋದ್ಯಮ ಪ್ರಗತಿಯಲ್ಲಿನ ಹಿನ್ನೆಡೆ, ನಿರುದ್ಯೋಗ, ಸರ್ಕಾರದ ಸೌಲಭ್ಯದಿಂದ ವಂಚಿತರಾಗಿರುವ, ಇನ್ನಿತರ ಸಮಸ್ಯೆಗಳಿಂದ ಭೌಗೋಳಿಕವಾಗಿ ಹೆಚ್ಚಿನ ವಿಸ್ತಾರ ಹೊಂದಿರುವ ಕ್ಷೇತ್ರದ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷತನ ಹಾಗೂ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ ಎಂದು ಹೇಳಿದರು.

RELATED ARTICLES  ಸಣ್ಣ ವಿಷಯಕ್ಕೂ ಮಹತ್ವಕೊಡುವ ದೊಡ್ಡ ರಾಜಕಾರಣಿ ಆರ್.ವಿ ದೇಶಪಾಂಡೆ.

ಮುಂಬರುವ ಚುನಾವಣೆ ಎದುರಿಸುವ ದಿಶೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು ಬೂತ ಗ್ರಾಮ ಪಂಚಾಯತ ಹಾಗೂ ತಾಲೂಕಾ ಮಟ್ಟದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಿದ್ದು ಕ್ಷೇತ್ರಾದ್ಯಂತ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ, ರೈತ ವಿರೋಧಿ ನೀತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಯನ್ನು ಜನರು ತಿರಸ್ಕರಿಸಲಿದ್ದಾರೆಂದು ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.

RELATED ARTICLES  ರಸ್ತೆಯ ಪಕ್ಕಕ್ಕೆ ಉರುಳಿದ ಟ್ಯಾಂಕರ್ : ಸುತ್ತಲ ಜನರಲ್ಲಿ ಆತಂಕ

ಕ್ಷೇತ್ರದ ಒಟ್ಟೂ ಮತದಾರರಲ್ಲಿ ಅರ್ಧದಷ್ಟು ಮತದಾರರು ಅರಣ್ಯ, ಕಂದಾಯ, ಗಾಂವಠಾಣಾ ಹಾಗೂ ಸರ್ಕಾರಿ ಸ್ವಾಮಿತ್ವದ ಇತರೇ ವರ್ಗಕ್ಕೆ ಸೇರಿದ ಭೂಮಿಯನ್ನು ವಾಸ್ತವ್ಯ, ಸಾಗುವಳಿಗೆ ಅವಲಂಬಿತರಾಗಿರುವ ಜನರೇ ಅನಾದಿಕಾಲದಿಂದಲೂ ಬದುಕಿದ್ದಾಗ್ಯೂ ಸದರಿ ಅತಿಕ್ರಮಣದಾರರಿಗೆ ನ್ಯಾಯ ಕೊಡುವಲ್ಲಿ ಜನಪ್ರತಿನಿಧಿಗಳೂ ತಾತ್ಸಾರ ಮನೋಭಾವನೆ ತೋರಿಸುತ್ತಿರುವುದರಿಂದ ಅತಿಕ್ರಮಣದಾರರು ಅಸಮಾಧಾನವಿರುವುದಾಗಿ ರವೀಂದ್ರ ನಾಯ್ಕ ತಿಳಿಸಿದ್ದಾರೆ.