ನವದೆಹಲಿ: ಭಾರತದಲ್ಲಿ 30ರಿಂದ 70 ವರ್ಷದೊಳಗಿನ ಶೇಕಡಾ 61 ಮಂದಿ ಹೃದಯ ಅಸ್ವಸ್ಥತೆಗಳು, ಮಧುಮೇಹ ಮತ್ತು ಕ್ಯಾನ್ಸರ್ ಮೊದಲಾದ ರೋಗಗಳಿಂದ ಸಾಯುತ್ತಿದ್ದಾರೆ ಎಂದು 2017ರ ಸೆಪ್ಟೆಂಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ಇವುಗಳಲ್ಲಿ ಬಹುಪಾಲು ತಡೆಗಟ್ಟುವಿಕೆಯ ರೋಗಗಳಾಗಿದ್ದು ವ್ಯಕ್ತಿಯ ಜೀವನಶೈಲಿಯ ಆಯ್ಕೆಯನ್ನು ಅವಲಂಬಿಸಿಕೊಂಡಿರುತ್ತದೆ.ಆಧುನಿಕ ಜೀವನಶೈಲಿಯಲ್ಲಿ ಒತ್ತಡದ ಬದುಕಿನಿಂದಾಗಿ ಯುವ ಭಾರತೀಯರು ಇಂದು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂದು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಶಿಕ್ಷಣದಲ್ಲಿ ನಂತರ ದೊಡ್ಡವರಾದ ನಂತರ ಉದ್ಯೋಗ, ಮನೆ ಖರೀದಿ, ನಗರದಲ್ಲಿ ಸಂಚರಿಸುವಾಗ ಹೀಗೆ ಪ್ರತಿ ಹಂತದಲ್ಲಿಯೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

ಇಂದು ಯುವಜನಾಂಗ ಪ್ರತಿನಿತ್ಯ ಸ್ಪರ್ಧೆ ಹಾಗೂ ಒತ್ತಡದಲ್ಲಿಯೇ ಜೀವನ ಸಾಗಿಸಬೇಕಾಗಿ ಬಂದಿದೆ. ಈ ಬದುಕಿನ ನಡುವೆ ಜನರು ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸುವುದನ್ನು ಮರೆಯುತ್ತಾರೆ. ಇದರಿಂದ ಸಣ್ಣ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಇದು ಆದಾಯ ಗಳಿಕೆ ಮೇಲೆ ಕೂಡ ಪರಿಮಾಮ ಬೀರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಜಿಮ್, ಯೋಗ, ಸ್ಪೋರ್ಟ್ಸ್ ಕ್ಲಬ್ ಗಳಿಂದ ಶಾರೀರಿಕ ಮತ್ತು ಮಾನಸಿಕ ಚಟುವಟಿಕೆಗಳು ಸಿಕ್ಕಿ ಆರೋಗ್ಯವನ್ನು ಉತ್ತಮಪಡಿಸಬಹುದು ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಗ್ರಂಥಿ ವಿಜ್ಞಾನ ಸಂಸ್ಥೆಯ ಲ್ಯಾಪರೊಸ್ಕೋಪಿಕ್ ಜಿಐ ವಿಭಾಗದ ವೈದ್ಯ ಡಾ.ಪ್ರದೀಪ್ ಜೈನ್.

RELATED ARTICLES  we are able to create beautifull and amazing things

ಆದರೆ ಕೇವಲ ಒಂದು ಚಟುವಟಿಕೆಯಿಂದ ಉತ್ತಮ ಆರೋಗ್ಯ ನಿರ್ವಹಿಸಲು ಸಾಧ್ಯವಿಲ್ಲ. ನಿರಂತರವಾಗಿ ಯೋಗ, ಧ್ಯಾನ, ಶರೀರದ ಮೂಳೆಗಳ ವ್ಯಾಯಾಮ, ಉತ್ತಮ ಮಾನಸಿಕ ಚಟುವಟಿಕೆಗಳಿಂದ ಪ್ರಸ್ತುತ ಜೀವನಶೈಲಿಯಲ್ಲಿ ಆರೋಗ್ಯವನ್ನು ಕಾಪಾಡಬಹುದು. ಕಳೆದೆರಡು ದಶಕಗಳಿಂದ ಯೋಗ ಒಂದು ಔದ್ಯೋಗಿಕ ಸೇವೆಯಾಗಿದ್ದು, ಸೇವಾ ತೆರಿಗೆಯಿಂದ ವಿನಾಯ್ತಿಯಿದೆ. 2015ರಲ್ಲಿ ವಿಶ್ವಸಂಸ್ಥೆಯಿಂದ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಣೆ ಕೂಡ ಸಿಕ್ಕಿದೆ.

RELATED ARTICLES  ಹಸುವಿನ ತುಪ್ಪವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ನಿಮಗೆ ಗೊತ್ತೆ??

ಇತ್ತೀಚಿನ ದಿನಗಳಲ್ಲಿ ಆಯುಷ್ ಉತ್ಪನ್ನಗಳಲ್ಲಿ ದೇಶ, ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಸುಮಾರು 500 ಕೋಟಿಯಲ್ಲಿ ಉತ್ಪನ್ನಗಳ ಮಾರುಕಟ್ಟೆಯಿದ್ದು ವಿದೇಶಗಳಿಗೆ ಸುಮಾರು 200 ಕೋಟಿಯಷ್ಟು ರಫ್ತಾಗುತ್ತದೆ ಎನ್ನುತ್ತಾರೆ ಸಚಿವ ಸುರೇಶ್ ಪ್ರಭು. ಈ ವಲಯ 2020ರ ವೇಳೆಗೆ ಸುಮಾರು 10 ಲಕ್ಷ ಜನರಿಗೆ ನೇರವಾಗಿ ಮತ್ತು 25 ಲಕ್ಷ ಜನರಿಗೆ ಪರೋಕ್ಷವಾಗಿ ಉದ್ಯೋಗ ಒದಗಿಸಲಿದೆ. ಉದ್ಯೋಗ ಸೃಷ್ಟಿಗೆ ಇದು ಉತ್ತಮ ಕೊಡುಗೆ ಎನ್ನುತ್ತಾರೆ ಸುರೇಶ್ ಪ್ರಭು.

ಯೋಗ, ಆಯುರ್ವೇದಗಳು ಇತ್ತೀಚಿನ ದಿನಗಳಲ್ಲಿ ನಮಗೆ ಆರೋಗ್ಯವನ್ನು ಮಾತ್ರ ನೀಡುವುದಲ್ಲದೆ ಕ್ಷೇತ್ರ ಬೆಳವಣಿಗೆಯಾಗಿ ಅನೇಕ ಯುವಜನತೆಗೆ ಉದ್ಯೋಗವನ್ನು ಕೂಡ ಒದಗಿಸುತ್ತದೆ.