ಬಿಜೆಪಿ ಈ ಭಾರಿ ಕಾರವಾರ ಅಂಕೋಲಾ ಕ್ಷೇತ್ರದಿಂದ ಶ್ರೀಮತಿ ರೂಪಾಲಿ ನಾಯ್ಕರಿಗೆ ಟಿಕೇಟನ್ನ ನೀಡಿದೆ. ನಾನು ಕೂಡ ಒರ್ವ ಟಿಕೇಟ್ ಆಕಾಂಕ್ಷಿಯಾಗಿದ್ದೆ. ಟಿಕೇಟ್ ಪಡೆಯಲು ಕಳೆದ ಕೆಲ ವರ್ಷದಿಂದ ಪಕ್ಷ ಸಂಘಟನೆಗಾಗಿ ಸಾಕಷ್ಟು ದುಡಿದಿದ್ದೆ. ಪಕ್ಷ ನನಗೆ ಟಿಕೇಟ್ ನೀಡದೆ ಇದ್ದಾಗ ಯೋಚಿಸಿದಾಗ ನೆನಪಾಗಿದ್ದು ತಾಯಿತನ ಎಂದು ಕಾರವಾರದ ನಾಗರಾಜ ನಾಯಕ ತಿಳಿಸಿದರು. ಅವರು ರೂಪಾಲಿ ನಾಯ್ಕ ಪರ ಮ್ರಚಾರದಲ್ಲಿ ತೊಡಗಿ ಜನತೆಯ ಜೊತೆ ಸಮಾಲೋವನೆ ನಡೆಸಿದರು.

RELATED ARTICLES  ಕೂಜಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ.

ಪಕ್ಷ ಈ ಭಾರಿ ಶ್ರೀಮತಿ ರೂಪಾಲಿ ನಾಯ್ಕರಿಗೆ ತಾಯಿತನವನ್ನ ಗುರುತಿಸಿ ಟಿಕೇಟ್ ನೀಡಿದೆ. ನಾನು ಎಲ್ಲಾ ಪ್ರಯತ್ನ ಮಾಡಬಹುದು. ಆದರೆ ನನ್ನಿಂದ ತಾಯಿತನವನ್ನ ಮಾತ್ರ ಕೊಡಲು ಸಾದ್ಯವಿಲ್ಲ. ಅಂತಹ ತಾಯಿತನ ಗುರುತಿಸಿ ಟಿಕೇಟ್ ನೀಡಿರುವ ರೂಪಾಲಿ ನಾಯ್ಕರ ಗೆಲುವಿಗೆ ಈ ಭಾರಿ ಶ್ರಮಿಸುತ್ತಿದ್ದೇನೆ. ಪಕ್ಷದ ಅಭ್ಯರ್ಥಿ ಗೆದ್ದರೆ ನಾನೇ ಗೆದ್ದಂತೆ. ನೀವು ನನ್ನೊಂದಿಗೆ ಸಹಕರಿಸಿ ಎಂದು ಅವರು ಜನತೆಗೆ ಮನವಿ ಮಾಡಿದರೆಂದು ತಿಳಿದುಬಂದಿದೆ.

RELATED ARTICLES  ಅಕ್ಟೊಬರ್ 2ಕ್ಕೆ ಶಿರಸಿಯಲ್ಲಿ 'ಮತ್ತೊಮ್ಮೆ ದಿಗ್ವಿಜಯ' ರಥಯಾತ್ರೆ, ಚಕ್ರವರ್ತಿ ಸೂಲಿಬೆಲೆ ಉಪಸ್ಥಿತಿ

ನಾಗರಾಜ ನಾಯಕರ ಈ ಪ್ರತಿಕ್ರಿಯೆ‌ ಜನರಿಗೆ ಹರ್ಷ ತಂದಿದೆ. ರೂಪಾಲಿ ನಾಯ್ಕರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಅವರು ಪ್ರಯತ್ನಿಸುತ್ತಿದ್ದು ಪಕ್ಷ ಹಾಗೂ ಜನತೆಗೆಹೆಮ್ಮೆಯ ವಿಚಾರ ಎಂಬಂತೆ ಬಿಜೆಪಿ ವಲಯದಲ್ಲಿ ಮಾತುಗಳು ಕೇಳಿಬಂದವು.