ಕುಮಟಾ: ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಚುನಾವಣಾ ಪ್ರಚಾರಕ್ಕೆ ಧುಮಿಕಿದಂತೆ ಕಂಡು ಬರುವ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ, ಶ್ರೀ ರವಿಕುಮಾರ್ ಮೋಹನ ಶೆಟ್ಟಿ ಹಾಗೂ ಅವರ ತಂಡಕ್ಕೆ ಉತ್ತಮ ಸ್ಪಂದನೆ ದೊರಕುತ್ತಿದೆ.

ಅದರಂತೆ ಇಂದು ನಾಡುಮಾಸ್ಕೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಗೆ ಕಾರ್ಯಕರ್ತರು ಹಾಗೂ ಹಿತೈಸಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು ಕೊರೋನಾ ಆರ್ಭಟ

ಚುನಾವಣಾ ತಂತ್ರಗಾರಿಕೆ ಹಾಗು ಜನತೆಯ ಮನ ಗೆಲ್ಲುವಲ್ಲಿ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಕುಮಟಾ ಹೊನ್ನಾವರದಲ್ಲಿ ತಮ್ಮದೇ ಛಾಪು ಮುಂದುವರಿಸುವ ಪ್ರಯತ್ನಕ್ಕೆ ಇಳಿದಿದೆ .ಇದಕ್ಕೆ ಜನತೆಯಿಂದಲೂ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ ಎನ್ನಲಾಗಿದೆ.

RELATED ARTICLES  ಸೇವೆಯಿಂದ ದಿವ್ಯತೆ, ಪವಿತ್ರತೆ ಪ್ರಾಪ್ತಿ: ರಾಘವೇಶ್ವರ ಸ್ವಾಮೀಜಿ

ಈ ಸಂಧರ್ಭದಲ್ಲಿ ಶ್ರೀ ವಿ ಎಲ್ ನಾಯ್ಕ, ಶ್ರೀಮತಿ ತಾರಾ ಗೌಡ, ಶ್ರೀಮತಿ ಸುರೇಖಾ ವಾರೇಕರ್, ಶ್ರೀಮತಿ ಅನಿತಾ ಮಾಫಾರಿ, ಶ್ರೀ ಜಗದೀಶ ಹರಿಕಂತ್ರ ಹಾಗೂ ಸ್ಥಳೀಯ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.