ಕುಮಟಾ : ಕೆನರಾ ವೆಲ್‍ಫೆರ್ ಟ್ರಸ್ಟ ಅಂಕೋಲಾ ಮತ್ತು ಸಿಸ್ಕೋ ಸಂಭ್ರಮ ಇವರ ಸಂಯುಕ್ತ ಆಶ್ರಯದಲ್ಲಿ ಡಾ|| ಎ. ವಿ. ಬಾಳಿಗಾ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ 5 ದಿನಗಳ ಉನ್ನತಿ ಶಿಬಿರಕ್ಕೆ ಪದವೀಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಜಿ.ಹೆಗಡೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಹಿಂದೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಯಾವುದೇ ಮಾರ್ಗದರ್ಶಕರಿರಲಿಲ್ಲ. ಸಂಘ-ಸಂಸ್ಥೆಗಳ ಸಹಕಾರ ಕೂಡ ಇರಲಿಲ್ಲ. ಆದರೆ ಇಂದು ಸಿಸ್ಕೋ, ಕೆನರಾ ವೆಲ್‍ಫೆರ್ ಟ್ರಸ್ಟ ಅಂಕೋಲಾದಂತಹ ಸಂಘ-ಸಂಸ್ಥೆಗಳು ನಿಮ್ಮ ಬೆಂಬಲಕ್ಕಿದ್ದು ಅಧ್ಯಯನಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಡಾ|| ಎ. ವಿ. ಬಾಳಿಗಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ|| ಜಯರಾಮ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಾಪಕರನ್ನು ಮೀರಿ ಸಾಧನೆಮಾಡಿದಾಗ ಮೊದಲು ಸಂತೋಷವಾಗುವುದು ಆ ಅಧ್ಯಾಪಕರಿಗೆ ಮಾತ್ರ. ಶಿಬಿರಾರ್ಥಿಗಳಾದ ತಮ್ಮಿಂದ ಮುಂದೆ ಅಂತಹ ಸಾಧನೆ ಆಗಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಜಿ. ಎಸ್. ಹೆಗಡೆ ಮಾತನಾಡಿ, ಮಾತೃಭಾಷೆಯಲ್ಲಿ ಯಾರು ಚೆನ್ನಾಗಿ ಪ್ರಾವಿಣ್ಯತೆ ಪಡೆದಿರುತ್ತಾರೋ ಅವರು ಆಂಗ್ಲ ಭಾಷೆಯನ್ನು ಸುಲಭವಾಗಿ ಅರಿಯಬಲ್ಲರು ಎಂದರು.

RELATED ARTICLES  ಸೋಲಾರ್ ಕೀಟನಾಶಕ ಯಂತ್ರ ಸಂಶೋಧನೆ ಮಾಡಿದ ರೈತ

ಕಾರ್ಯಕ್ರಮ ಸಂಘಟಕ ಜನತಾ ವಿದ್ಯಾಲಯ ಕಡತೋಕಾದ ಶಿಕ್ಷಕ ಎಂ. ಜಿ. ಶಾಸ್ತ್ರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಿಸ್ಕೋ ಸಂಸ್ಥೆಯ ನೇತೃತ್ವದಲ್ಲಿ ಈ ಶಿಬಿರ ನಡೆಯುತ್ತಿದ್ದು, ಮಾರ್ಗದರ್ಶಕ ಮಂಜು ಶಂಕರ ಮೈಸೂರ ರವರ ಸಹಕಾರವನ್ನು ಸ್ಮರಿಸಿದ್ದಲ್ಲದೆ ಕುಮಟಾ ಮತ್ತು ಹೊನ್ನಾವರ ತಾಲೂಕಿನ 45 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಎಸ್. ಎ. ಭಟ್ಟ. ವಿ. ಪಿ. ಶಾನಭಾಗ, ಎಸ್. ಎಸ್. ಪೈ, ಉಷಾ ಭಟ್ಟ, ಜಿ. ಎಸ್. ಹೆಗಡೆ, ಶುಭಾ ಭಟ್ಟ, ವಿಜಯ ಕುಮಾರ, ಎಂ. ಜಿ. ಶಾಸ್ತ್ರಿ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಕೆನರಾ ವೆಲ್‍ಫೆರ್ ಟ್ರಸ್ಟ ಅಂಕೋಲಾದ ಆಡಳಿತಾಧಿಕಾರಿ ಕೆ. ವಿ. ಶೆಟ್ಟಿಯವರು ಶಿಬಿರಾರ್ಥಿಗಳಿಗೆ ಉಟೋಪಚಾರವ್ಯವಸ್ಥೆ ಕಲ್ಪಿಸಿ ಉಪಕರಿಸಿದ್ದಾರೆ ಎಂದು ತಿಳಿಸಿದರು.

RELATED ARTICLES  ಕುಮಟಾದಲ್ಲಿ ನಡೆಯಿತು ವನವಾಸಿಗರ ಸಮಸ್ಯೆ ಆಧಾರಿತ ಜಿಲ್ಲಾ ಸಮ್ಮೇಳನ

ವೈಷ್ಣವಿ ಭಟ್ಟ ಪ್ರಾರ್ಥಿಸಿದರು. ಜನತಾ ವಿದ್ಯಾಲಯ ಕಡತೋಕಾದ ಮುಖ್ಯಾಧ್ಯಾಪಕಿ ಉಷಾ ಭಟ್ಟ ಸ್ವಾಗತಿಸಿದರು. ಶಿಕ್ಷಕ ಡಿ. ಎನ್. ವೈದ್ಯ ವಂದಿಸಿದರು. ಜನತಾ ವಿದ್ಯಾಲಯ ಕಾಸರಕೋಡಿನ ಶಿಕ್ಷಕ ಜಿ. ಎಸ್. ಭಟ್ಟ ಕಾರ್ಯಕ್ರಮ ನಿರೂಪಿಸಿದರು.