ಶಿರಸಿ: ರಾಜ್ಯ ವಿಧಾನಸಭಾ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು, ಬಹು ನಿರೀಕ್ಷಿತ ಶಿರಸಿ – ಸಿದ್ದಾಪುರ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ಲಭಿಸಿದೆ.ಈಗಾಗಲೇ ಭೀಮಣ್ಣ ನಾಯ್ಕ ಭರದ ಪ್ರಚಾರದಲ್ಲಿ ತೊಡಗಿದ್ದರು. ಅವರಿಗೀಗ ಭೀಮ ಬಲ ಬಂದಂತಾಗಿದೆ.

RELATED ARTICLES  ಅಂಕೋಲಾ ಲಯನ್ಸ ಕ್ಲಬ್ ಕರಾವಳಿಯಿಂದ ‘ವಿಶ್ವ ಮಧುಮೇಹ ದಿನಾಚರಣೆ’ : ಮಧುಮೇಹ ಹೆದರಿಕೆ ಬೇಡಾ, ಕಾಳಜಿ ಇರಲಿ ಎಂದ ವೈದ್ಯರು.

ಅದರಂತೆ ಹಳಿಯಾಳಕ್ಕೆ ಆರ್ ವಿ ದೇಶಪಾಂಡೆ, ಯಲ್ಲಾಪುರಕ್ಕೆ ಶಿವರಾಮ್ ಹೆಬ್ಬಾರ್, ಕುಮಟ – ಶಾರದಾ ಶೆಟ್ಟಿ, ಕಾರವಾರ – ಸತೀಶ್ ಸೈಲ್, ಭಟ್ಕಳ – ಮಂಕಾಳು ವೈದ್ಯ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ. ಶಿರಸಿ – ಸಿದ್ದಾಪುರ ಕ್ಷೇತ್ರಕ್ಕೆ ನಿವೇದಿತ್ ಆಳ್ವಾ ಹಾಗು ಭೀಮಣ್ಣ ನಾಯ್ಕ ನಡುವೆ ಬಾರೀ ಪೈಪೋಟಿ ನಡೆದಿತ್ತು, ಕೊನೆಗೂ ಭೀಮಣ್ಣ ನಾಯ್ಕ ಟಿಕೆಟ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES  ಅಕ್ರಮ‌ವಾಗಿ ಜಾನುವಾರು ಸಾಗಾಟ : ಆರೋಪಿಗಳು ಅರೆಸ್ಟ್

ಇನ್ನು ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಬಿಜೆಪಿಯ ಅಭ್ಯರ್ಥಿಯ ಆಯ್ಕೆ ನಡೆಯಬೇಕಿದ್ದು, ಜೆಡಿಎಸ್ ನಿಂದ ಈಗಾಗಲೇ ಆರೂ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆಯಾಗಿದೆ.