ಕುಮಟಾ: ಮಿತಿಮೀರಿದ ಮೊಬೈಲ್ ಹಾಗೂ ಅಂತರ್ಜಾಲದ ಬಳಕೆಯಿಂದ ಇಂದು ವಿದ್ಯಾರ್ಥಿಗಳು ಓದಿನ ಆನಂದದಿಂದ ವಂಚಿತರಾಗಿದ್ದಾರೆಂದು ಉದ್ಯಮಿ ಹಾಗೂ ಶಿಕ್ಷಣಾಭಿಮಾನಿ ಎಂ.ಎಂ.ಹೆಗಡೆ ಅಭಿಪ್ರಾಯಪಟ್ಟರು. ಅವರು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ನೂತನ ಮಂತ್ರಿಮಂಡಳ ಮತ್ತು ವಿವಿದ್ದೋದ್ದೇಶದ ಚಟುವಟಿಕೆಗಳ ಕ್ಲಬ್‍ಗಳನ್ನು ಉದ್ಘಾಟಿಸಿ, ಶಿಕ್ಷಕರಾದವರು ತಮ್ಮಲ್ಲಿಯ ಎಲ್ಲವನ್ನೂ ಧಾರೆಯೆರೆಯಲು ಸಾಧ್ಯವಿಲ್ಲ ಬದಲು ಮಕ್ಕಳ ಪ್ರತಿಭಾ ಕ್ಷೇತ್ರವನ್ನು ಮಾತ್ರ ಜಾಗೃತಗೊಳಿಸಬಲ್ಲರು ಎಂದು ನುಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ ಸಾಹಿತ್ಯ ಒದಗಿಸಲು ಧನಸಹಾಯ ನೀಡಿದ ಎಂ.ಎಂ.ಹೆಗಡೆ ಅವರನ್ನು ಅಭಿನಂದಿಸಿದರು. ಪ್ರಾರಂಭದಲ್ಲಿ ಶ್ರೀಲಕ್ಷ್ಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿಷ್ಣು ಭಟ್ಟ ಇಲಾಖಾ ನಿಯಮದಂತೆ ಸ್ಥಾಪಿತಗೊಂಡ ಕ್ಲಬ್‍ಗಳಾದ ವಿಜ್ಞಾನ ಸಂಘ, ಕಸ್ತೂರಬಾ ಇಕೋ ಕ್ಲಬ್, ಗಣಿತ ಸಂಘ, ಇತಿಹಾಸ ಮತ್ತು ಕಾನೂನು ಸಾಕ್ಷರತಾ ಸಂಘ, ಸಾಂಸ್ಕøತಿಕ ಸಂಘ, ಕ್ರೀಡಾ ಸಂಘ, ಬಿ.ಎ.ಸನದಿ ಸಾಹಿತ್ಯ ಸಂಘ, ಶಿಸ್ತು ಮತ್ತು ಅಭಿವೃದ್ಧಿ ಸಂಘ, ಕನ್ನಡ, ಹಿಂದಿ, ಇಂಗ್ಲೀಷ್ ಭಾಷಾ ಸಂಘಗಳು ಸಕ್ರಿಯವಾಗಿದ್ದು ಪುನಃ ಶೈಕ್ಷಣಿಕ ವರ್ಷದಾರಂಭದಲ್ಲಿ ಚಟುವಟಿಕೆ ಆರಂಭಿಸಿವೆ ಎಂದು ವಿವರ ನೀಡಿದರು. ಕುಮಾರಿ ಐಶ್ವರ್ಯ ಶಾನಭಾಗ ಮತ್ತು ಕುಮಾರ ಸುಮನ್ ಮಡಿವಾಳ ಶಾಲಾ ಮುಖ್ಯಮಂತ್ರಿಗಳಾಗಿ ಸರ್ವಾನುಮತದಿಂದ ಆಯ್ಕೆಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಂಸತ್ತಿನ ಪ್ರಧಾನ ಸಂಚಾಲಕ ಶಿಕ್ಷಕ ಎಸ್.ಪಿ.ಪೈ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ನುಸೈಬಾ ಸಾಬ್ ವಂದಿಸಿದರು.

RELATED ARTICLES  ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಸ್ವಾತಿ ಉತ್ಸವ‌ ಸಂಪನ್ನ.