ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನ (ರಿ) ಕಾರವಾರ ಹಾಗೂ ಅದ್ವೈತ ಸ್ಪೋಟ್ರ್ಸ ಕ್ಲಬ್(ರಿ) ಹೊನ್ನಾವರ ಇವರೆಲ್ಲರ ಸಹಯೋಗದಲ್ಲಿ ವಾಲಿಬಾಲ್ ತರಬೇತಿ ಶಿಬಿರ ನಡೆದು ತರಬೇತಿ ಶಿಬಿರದ ಮುಕ್ತಾಯ ಸಮಾರಂಭವು ನಗರದ ಸೇಂಟ್ ಅಂತೋನಿ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಿತು.

ಈ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ತಾಲೂಕಿನ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ:ಪ್ರಕಾಶ ನಾಯ್ಕರವರು ಪಾಲ್ಗೊಂಡು ಇಂತಹ ತರಬೇತಿ ಶಿಬಿರಗಳು ಹೊನ್ನಾವರದಲ್ಲಿ ನಡೆಯುತ್ತಿರುವುದು ಸಂತೋಷದ ವಿಚಾರ ಇದನ್ನು ಆಯೋಜಿಸಿದ ಅದ್ವೈತ ಸ್ಪೋಟ್ರ್ಸ ಕ್ಲಬ್‍ನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು . ಇನ್ನೋರ್ವ ಅತಿಥಿಗಳಾದ ಖ್ಯಾತ ವರದಿಗಾರರಾದ ಜಿ.ಯು.ಭಟ್‍ರವರು ಮಕ್ಕಳ ರಜಾದಿನದ ಸಮಯವನ್ನು ಅರ್ಥಪೂರ್ಣವಾಗಿ ಸಂತೋಷದಿಂದ ಕಾಲ ಕಳೆಯುವಂತೆ ಈ ತರಬೇತಿ ಶಿಬಿರ ಅತ್ಯುತ್ತಮ ಕೆಲಸವನ್ನು ನಿರ್ವಹಸಿದೆ. ಇಂತಹ ಶಿಬಿರಗಳಿಂದ ಮಗುವಿನ ಮನಸಿನ ಸಂತಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ನುಡಿದರು.

RELATED ARTICLES  ಭಂಡಾರಿ ಸಮಾಜದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಿವಾನಂದ ಹೆಗಡೆ ಕಡತೋಕಾ

ಇನ್ನೋರ್ವ ಅತಿಥಿಗಳಾದ ಮಕ್ಕಳ ತಜ್ಞರಾದ ಶ್ರಿ ಡಾ.ಪ್ರಮೋದ ಟಿ.ಫಾಯದೆ ಅವರು ಪಾಲ್ಗೊಂಡು ಅಧ್ವೈತ ಸ್ಪೋಟ್ರ್ಸ ಕ್ಲಬ್‍ನ ಈ ಶಿಬಿರ ಅತ್ಯಂತ ಯಶಸ್ವಿಯಾಗಿ ಸಾಗಿದೆ. ಮಕ್ಕಳು ಅತಿ ಖುಷಿಯಿಂದ ಸಡಗರದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದನ್ನು ನಾನು ಗಮನಿಸಿದ್ದೇನೆ. ಶಿಬಿರ ಅರ್ಥಪೂರ್ಣವಾಗಿ ಸಾಗಿದೆ ಎಂದು ಹಾರೈಸಿದರು.ಅದೇ ರೀತಿ ಮಹಾಂತೇಶ ಓಶಿಮಠ ಹಾಗೂ ಸುಧೀರ ಹುಲೇಕಲ್ ಶಿಬಿರದ ಕುರಿತು ನಾಲ್ಕು ಮಾತುಗಳನ್ನು ನುಡಿದರು. ವೇದಿಕೆಯಲ್ಲಿ ಅಶೋಕ ಪಿ ಹೆಗಡೆ, ಡಾ. ಪ್ರಮೋದ ಟಿ ಫಾಯ್ದೆ ಮತ್ತು ಸುಧೀರ ಹುಲೇಕಲ್ ಇವರನ್ನು ಸನ್ಮಾನಿಸಲಾಯಿತು. ತರಬೇತಿಯಲ್ಲಿ ಪಾಲ್ಗೊಂಡ ವಾಲಿಬಾಲ್ ಕ್ರೀಡಾಪಟುಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

RELATED ARTICLES  ಹೊನ್ನಾವರಕ್ಕೆ ಬಂದಿದ್ದ ಕುಮಟಾದ ಕಸ ತುಂಬಿದ ಗಾಡಿ ವಾಪಸ್…!

ವೇದಿಕೆಯಲ್ಲಿ ವಿ.ಎಮ್.ಭಟ್, ಸಾಧನಾ ಬರ್ಗಿ, ಸಂತೋಷ ಶ್ಯಾನಭಾಗ ಹಾಗೂ ನಿತ್ಯಾನಂದ ಪಾಲೇಕರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅದ್ವೈತ ಸ್ಪೋಟ್ರ್ಸ ಕ್ಲಬ್‍ನ ಅಧ್ಯಕ್ಷರಾದ ರಾಘವೇಂದ್ರ ಮೇಸ್ತ ಇವರು ನೆರವೇರಿಸಿದರು. ತರಬೇತಿದಾರರಾಗಿ (ಎನ್.ಐ.ಎಸ್ ತರಬೇತಿದಾರರಾದ )ಅನಿಲ್ ಲೊಕರೇ ಆಗಮಿಸಿದ್ದರು. ತರಬೇತಿಗೆ ಮಾರ್ಗದರ್ಶಕರಾಗಿ ತಾಲೂಕಿನ ಯುವಜನ ಸೇವಾ ಕ್ರೀಡಾಧಿಕಾರಿ ಸುದೇಶ ನಾಯ್ಕರವರು ಮಾರ್ಗದರ್ಶನ ನೀಡಿದರು.