ಕೊನೆಗೂ ಬಿಜೆಪಿ ಕರ್ನಾಟಕದ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಹಲವು ದಿನಗಳಿಂದ ನಡೆದಿದ್ದ ಸಾಲು ಸಾಲು ಕೋರ್ ಕಮಿಟಿ ಸಭೆಯ ಫಲಿತಾಂಶವಾಗಿ ಈ ನಿರ್ಧಾರ ಹೊರಬಿದ್ದಿದೆ. ಇಂದು ಬಿಡುಗಡೆಯಾಗಿರುವ ಭಾರತೀಯ ಜನತಾ ಪಕ್ಷದ ಎರಡನೇ ಪಟ್ಟಿಯಲ್ಲಿ ಒಟ್ಟು 82 ಜನರ ಹೆಸರಿದೆ. ಕಳೆದ ವಾರ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

RELATED ARTICLES  ಉತ್ತರ ಕನ್ನಡದ ಪ್ರಮುಖ ತಾಲೂಕಿನ ಕೊರೋನಾ ಅಪ್ಡೇಟ್

ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರವರು ನಡೆಸಿದಂತಹ ಹಲವು ಸಮೀಕ್ಷೆಗಳನ್ನು ಆಧರಿಸಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೊದಲ ಪಟ್ಟಿಯ ಬಿಡುಗಡೆಯ ನಂತರ ಹಲವು ಕ್ಷೇತ್ರಗಳಲ್ಲಿ ಭಿನ್ನಮತದ ಕಿಡಿ ಹೊತ್ತಿತ್ತು. ಈಗ ಅವೆಲ್ಲವೂ ತಕ್ಕ ಮಟ್ಟಿಗೆ ಶಮನವಾದಂತಿದ್ದು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ.

ಭಟ್ಕಳದ ಯುವ ಮುಖಂಡ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನಿಲ್‌ ನಾಯ್ಕ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES  ಎರಡು ಕೋಮಿನ ನಡುವೆ ನಡೆಯುತ್ತಿದ್ದ ವಿವಾದ ಜಿ.ಪಂ ಸದಸ್ಯ ಪ್ರದೀಪ ನಾಯಕರ ನೇತೃತ್ವದಲ್ಲಿ ಸುಖಾಂತ್ಯ

ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸುನಿಲ್ ನಾಯ್ಕ ಜನತೆಯ ನೆಚ್ಚಿನ ನಾಯಕ ಎಂದೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಟಿಕೆಟ್ ಊಹಾ ಪೋಹಗಳಿಂದ ಅವರ ಬೆಂಬಲಿಗರು ವಿಚಲಿತರಾದರಾದರೂ ಸುನಿಲ್ ನಾಯ್ಕ ಹೆಸರನ್ನು ಪ್ರಭಲವಾಗಿ ಎತ್ತಿದ್ದರು. ಇದೀಗ ಸುನಿಲ್ ‌ನಾಯ್ಕ ಅವರಿಗೆ ಟಿಕೆಟ್ ಘೋಷಣೆ ಆಗಿರುವುದು ಅಭಿಮಾನಿಗಳಿಗೆ ಅಪಾರ ಸಂತಸ ಉಂಟುಮಾಡಿದೆ.