ಕುಮಟಾ: ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಸೂರಜ್ ನಾಯ್ಕ ಸೋನಿಯವರಿಗೆ ಟಿಕೆಟ್ ಸಿಗಲೆಂದು ತಾಯಿ ಮಹಾಸತಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇಂದು ಕಾರ್ಯಕರ್ತರು ಹಾಗೂ ಸೂರಜ್ ಸೋನಿ ಅಭಿಮಾನಿಗಳು ಈ ಕಾರ್ಯಕ್ಕೆ ಮುಂದಾಗಿದ್ದರು.

ಎಲ್ಲೆಡೆ ಚುನಾವಣಾ ಕಾವು ರಂಗೇರುತ್ತಿದೆ. ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದರೆ ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಟಿಕೆಟ್ ಇನ್ನೂ ಯಾರಿಗೂ ಘೋಷಣೆಯಾಗದೇ ಇರುವುದು ಹಲವಾರು ಗೊಂದಲಗಳಿಗೆ ಕಾರಣವಾಗಿದೆ .

RELATED ARTICLES  ಜನಮನ ಗೆಲ್ಲುತ್ತಿರುವ "ಅಸ್ಮಿತಾಯ್" ಎಂಬ ಕೊಂಕಣಿ ಚಲನಚಿತ್ರ

ಅದೇ ರೀತಿ ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದಂಡೇ ಇತ್ತು .ಅದೆಲ್ಲದರ ನಡುವೆಯೂ ಹಿಂದೂ ಮುಖಂಡ ಹಾಗೂ ನಾಮಧಾರಿ ಸಮಾಜದ ಮುಖಂಡರಾದ ಸೂರಜ್ ನಾಯ್ಕ್ ಸೋನಿಯವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ .

ಸೂರಜ್ ನಾಯ್ಕ ಸೋನಿ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಬೇಕು ಎಂದು ಇಂದು ಮಾಸ್ತಕಟ್ಟೆಯ ಮಹಾಸತಿ ಸಭಾಭವನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು .

ಸೂರಜ್ ನಾಯ್ಕ ಸೋನಿ ನಮ್ಮ ನೆಚ್ಚಿನ ನಾಯಕ, ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಲಾಗಿದೆ. ನಮ್ಮೆಲ್ಲರ ಬೆಂಬಲ ಅವರಿಗಿದ್ದು ಅವರ ವ್ಯಕ್ತಿತ್ವ ಹಾಗೂ ಅವರ ಕಾರ್ಯಗಳನ್ನು ಮನಗಂಡು ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ವಿನಂತಿಸಿದರು ಎನ್ನಲಾಗಿದೆ.

RELATED ARTICLES  ತಾರೀಬಾಗಿಲಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ.

IMG 20180417 WA0004

ದೇವರ ಕೃಪೆ ಸೂರಜ್ ಸೋನಿಯವರ ಮೇಲೆ ಇರಲಿ, ಕುಮಟಾ ಹೊನ್ನಾವರದ ಬಿಜೆಪಿ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗಲಿ ಎಂಬುದಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ಕಾರ್ಯಕರ್ತರು ಹಾಗೂ ಸೂರಜ್ ನಾಯ್ಕ ಸೋನಿ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.