ಕುಮಟಾ: ಎಲ್ಲೆಡೆ‌ ಬಿಜೆಪಿ‌ ಟಿಕೆಟ್ ನಮ್ಮ ಬೆಂಬಲಿಗರಿಗೆ‌ಸಿಗಲೆಂದು ‌ಜನತೆ‌ ದೇವರ ಮೊರೆಹೋಗುತ್ತಿದ್ದಾರೆ. ಹೌದು ಇಂದು ಕುಮಟಾದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿಯವರಿಗೆ ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲೆಂದು ಅವರ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ.

RELATED ARTICLES  ಕಾರು ಗುದ್ದಿದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಸಾವು

ಕುಮಟಾ ಅಳ್ವೆಕೊಡಿ ದೇವರ್ಸು ನಾಯಕ ಮಹಾಮಾಯಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆಯ ಹಿತಕ್ಕಾಗಿ ದಿನಕರ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಉತ್ತಮ . ಬಿಜೆಪಿ ಹೈಕಮಾಂಡ್ ದಿನಕರ‌ ಶೆಟ್ಟಿಯವರ ಬಗ್ಗೆ ಕಳಕಳಿ ಹೊಂದಿ ಅವರಿಗೆ ಟಿಕೆಟ್ ನೀಡಲೆಂದು ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿದರು‌ ಎನ್ನಲಾಗಿದೆ.

RELATED ARTICLES  ಪ್ರಧಾನ ಮಂತ್ರಿ ಆವಾಸ್ ಯೋಜನೆ ಪರಿಶೋಧನೆ - ತರಬೇತಿ ಕಾರ್ಯಾಗಾರ

ಬಿಜೆಪಿ ೨ ಲಿಸ್ಟ ಗಳನ್ನು ಬಿಡುಗಡೆ ಗೊಳಿಸಿದರೂ ಇನ್ನೂ ಕುಮಟಾ ಹೊನ್ನಾವರ ಕ್ಷೇತ್ತದ ಟಿಕೆಟ್ ಘೋಷಣೆ ಆಗದಿರುವುದು ಜನರ ಕುತೂಹಲ ‌ಕೆರಳಿಸಿದೆ.
IMG 20180417 WA0009

ಈ ಸಂದರ್ಭದಲ್ಲಿ ಪ್ರಮುಖ ಕಾರ್ಯಕರ್ತರು, ನೂರಕ್ಕೂ ಹೆಚ್ಚಿನ ಜನರು ಹಾಗೂ ದಿನಕರ ಶೆಟ್ಟಿ ಅಭಿಮಾನಿಗಳು ಹಾಜರಿದ್ದರು.