ಹೊನ್ನಾವರ : ನನ್ನ ಶಾಸಕತ್ವದ ಐದು ವರ್ಷದ ಅವಧಿಯಲ್ಲಿ ಹೊನ್ನಾವರ ನಗರದಲ್ಲಿ ಸಮಸ್ಯೆಯಾಗಿ ಕಾಡುತ್ತಿರುವ ಕುಡಿಯುವ ನೀರು ಮತ್ತು ಅತಿಕ್ರಮಣ ಸಮಸ್ಯೆಯನ್ನು ಬಗೆಹರಿಸಲು ಸರಕಾರದ ಮಟ್ಟದಲ್ಲಿ ಸರ್ವ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕಿ ಶಾರದಾ ಎಂ. ಶೆಟ್ಟಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪಟ್ಟಣದ ಗಾಂಧಿನಗರದಲ್ಲಿ ಏರ್ಪಡಿಸಿದ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

RELATED ARTICLES  ಗೋಕರ್ಣ : ವಿವಿಧ ಕಾಮಗಾರಿಗೆ ಶಾಸಕರಿಂದ ಚಾಲನೆ

ನನ್ನ ಪ್ರಯತ್ನದ ಫಲವಾಗಿ ಹೊನ್ನಾವರ ನಗರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 122.70 ಕೋಟಿ ಹಣ ಮಂಜೂರಾಗಿದ್ದು ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುತ್ತದೆ. ಇದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಈ ಯೋಜನೆಗೆ ಶಂಕುಸ್ಥಾಪನೆ ನಡೆಸಲು ಸಾಧ್ಯವಾಗಲಿಲ್ಲ ಎಂದರು.

RELATED ARTICLES  ಸೂರಜ್ ನಾಯ್ಕ ಸೋನಿ ಬಿರುಸಿನ ಪ್ರಚಾರ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ,ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಪ ತೆಗೇರಿ,ಪ್ರಮುಖರಾದ ವಿನಾಯಕ ಶೇಟ್ ಹಾಗೂ ಇನ್ನಿತರರು ಹಾಜರಿದ್ದರು.