ಶಿರಸಿ : ಏ.19 ರಂದು ಗುರುವಾರ ಶಿರಸಿ-ಸಿದ್ದಾಪುರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ ಎಂದು ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಏ.೧೯ ರಂದು ಬೆಳಿಗ್ಗೆ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದು ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಅಭಿಮಾನಿಗಳ ಜೊತೆಯಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಲಾಗುತ್ತದೆ ಎಂದರು.
ಜನರಿಗೆ ಬಿಜೆಪಿಯ ಮೇಲೆ ನಂಬಿಕಯಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾದ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಕಳೆದ ೫ ಬಾರಿಯೂ ನಮ್ಮ ಆಡಳಿತ ವೈಖರಿಯನ್ನು ಗಮನಿಸಿದ್ದಾರೆ. ಆದ ಕಾರಣ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ. ಕಾಗೇರಿ ಅವರ ಗೆಲುವಿನಿಂದ ಕ್ಷೇತ್ರಕ್ಕೆ ಮತ್ತು ಮತದಾರರಿಗೆ ಒಳಿತು ಎಂದು ಜನರು ತಿಳಿದುಕೊಂಡಿದ್ದಾರೆ. ಇದರೊಂದಿಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಗಮನಿಸಿದ ಕಾರಣ ಬಿಜೆಪಿ ಅತೀ ಹೆಚ್ಚು ಮತದಲ್ಲಿ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES  ಗಜು ಪೈ ಅಭಿಮಾನಿಗಳ ಬಳಗದವರಿಂದ ಯಶಸ್ವಿಯಾಗಿ ಸಂಯೋಜನೆಗೊಂಡ ಪೈ ಬ್ರದರ್ಸ್ ಟ್ರೋಫಿ.

ಬಿಜೆಪಿ ಪಕ್ಷ ಸದೃಢವಾಗಿದೆ. ಕಾರ್ಯಕರ್ತರು ನಮ್ಮ‌ ಶಕ್ತಿಯಾಗಿದೆ. ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು, ಅವಿರತವಾಗಿ ಪಕ್ಷ ಬೆಳೆಸಲು ಶ್ರಮಿಸಿದ್ದಾರೆ. ರಾಜ್ಯದಲ್ಲಿನ ಸಾಮಾನ್ಯ ಜನರೂ ಸಹ ಬಿಜೆಪಿಯತ್ತ ಒಲುವನ್ನು ತೋರಿಸಿದ್ದಾರೆ. ಇನ್ನೊಮ್ಮೆ ಬಿಜೆಪಿ ಗೆಲ್ಲಲಿದೆ ಎಂದ ಅವರು, ಪಕ್ಷದಲ್ಲಿಯೂ ಒಟ್ಟಾಗಿ ಇದ್ದೇವೆ. ಯಾವುದೇ ಗೊಂದಲ ಇಲ್ಲ. ಎಲ್ಲರೂ‌‌ ಕೂಡಿಕೊಂಡು ವಿಜಯದ ಪತಾಕೆ ಹಾರಿಸಲಿದ್ದೇವೆ ಎಂದರು.

RELATED ARTICLES  ಗಿಡಗಳನ್ನು ನೆಟ್ಟು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ; ನ್ಯಾ. ಸುನೀತಾ

ಬಿಜೆಪಿ ನೂರಕ್ಕೆ ನೂರು ಗೆಲ್ಲಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನದ್ದು ಎರಡು ಮೂರನೇ ಸ್ಥಾನಕ್ಕಾಗಿ ಪೈಪೋಟಿ ಅಷ್ಟೆ. ಅಲ್ಲದೇ ಜೆಡಿಎಸ್ ಅಪ್ರಸ್ತುತ. ದಾಖಲೆ ಮತದಿಂದ ನಾವು ಗೆಲ್ಲುತ್ತೇವೆ ಎಂದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ರಾಜ್ಯ ಬಿಜೆಪಿಯ ಜವಾಬ್ದಾರಿಯಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಅಂತೆಯೇ ಅವರು ಜಿಲ್ಲೆಯಲ್ಲಿಯೂ, ಕ್ಷೇತ್ರದಲ್ಲಿಯೂ ಅಗತ್ಯವಿದ್ದಲ್ಲಿ ಪ್ರಚಾರ ಮಾಡುತ್ತಾರೆ ಎಂದ ಶಾಸಕ ಕಾಗೇರಿ, ನಮ್ಮ ಮುಖಂಡರು ಬಂದು ಪ್ರಚಾರ ವನ್ನು ನಡೆಸುತ್ತಾರೆ. ಇಲ್ಲಿ ಜಾತಿಯ ಮಾನಂದಡವಿಲ್ಲ. ಇಲ್ಲಿ ನಮ್ಮ ನಾಯಕರು ಎಂದು ಕರೆತರಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಡಿ.ಹೆಗಡೆ, ಆರ್.ವಿ.ಹೆಗಡೆ, ಗಣಪತಿ ನಾಯ್ಕ, ಶೋಭಾ ನಾಯ್ಕ, ನಂದನ್ ಸಾಗರ್, ಶ್ರೀಕಾಂತ್ ‌ನಾಯ್ಕ , ಶ್ರೀರಾಮ್‌ ನಾಯ್ಕ ಇದ್ದರು.