ಚುನಾವಣೆಯ ಕಾವು ರಂಗೇರುತ್ತಿದೆ. ಎಲ್ಲ ಪಕ್ಷಗಳೂ ಭರದಿಂದ ಪ್ರಚಾರ ಪ್ರಾರಂಭಿಸಿದೆ . ಬಿಜೆಪಿ ಹೈಕಮಾಂಡ್ ಕಾರವಾರ-ಅಂಕೋಲಾ ವಿಧಾನ ಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿ ರೂಪಾಲಿ ನಾಯ್ಕ ರವರಿಗೆ ಅಧಿಕೃತ ಟಿಕೆಟ್ ಘೋಷಣೆ ಮಾಡಿದೆ . ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ಘೋಷಣೆ ಮಾಡುವವರೆಗೂ ನ್ಯಾಯವಾದಿ ನಾಗರಾಜ ನಾಯಕ ಬಿಜೆಪಿಯ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದರು .ಇತ್ತೀಚೆಗಂತೂ ಬಿಜೆಪಿ ಯ ಎಲ್ಲ ಕಾರ್ಯಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದ ನಾಗರಾಜ ನಾಯಕ್ ,ಬಿಜೆಪಿ ಟಿಕೆಟ್ ರೂಪಾಲಿ ನಾಯ್ಕ ಅವರಿಗೆ ಘೋಷಣೆಯಾದ ನಂತರ ರೂಪಾಲಿ ನಾಯ್ಕ ವಿರುದ್ಧ ಗುಡುಗಬಹುದು ಅಥವಾ ಏನೂ ಬೇಡ ಎಂಬಂತೆ ಪ್ರಚಾರದಿಂದ ಹಿಂದೆ ಸರಿದು ಸುಮ್ಮನಿರಬಹುದು ಎಂದೂ ಊಹಿಸಲಾಗಿತ್ತು . ಆದರೆ ನಿಜವಾಗಿ ನಡೆದದ್ದೇ ಬೇರೆ .

ರೂಪಾಲಿ ನಾಯ್ಕರವರಿಗೆ ಟಿಕೆಟ್ ಘೋಷಣೆಯಾದ ಕೂಡಲೇ ಮಾತೃಹೃದಯಿ ರೂಪಾಲಿ ನಾಯ್ಕರವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ ಪಕ್ಷದ ನಿರ್ಣಯವನ್ನು ತಾನು ಗೌರವಿಸಿ ಬೆಂಬಲಿಸುವುದಾಗಿ ತಿಳಿಸಿದ ನಾಗರಾಜ ನಾಯಕ,ರೂಪಾಲಿಯವರ ಜೊತೆಗೆ ನಿಂತು ಪ್ರಧಾನ ಪ್ರಚಾರಕರಷ್ಟೇ ಅಲ್ಲ,ಸ್ಟಾರ್ ಪ್ರಚಾರಕರೆಂದೆನಿಸಿದ್ದಾರೆ. ಇದು ಕಾರ್ಯಕರ್ತರಿಗೆ ಹಾಗೂ ಬಿಜೆಪಿ ವಲಯದಲ್ಲಿ ಅತೀವ ಸಂತಸ ಉಂಟು ಮಾಡಿದೆಯಂತೆ . ಪಕ್ಷ ಸಂಘಟನೆ ಹಾಗೂ ಬಿಜೆಪಿಗಾಗಿ ಅವಿರತವಾಗಿ ದುಡಿಯುತ್ತಿರುವ ನ್ಯಾಯವಾದಿ ನಾಗರಾಜ ನಾಯಕ ಅವರು ಈಗ ರೂಪಾಲಿ ನಾಯ್ಕ ಅವರ ಗೆಲುವಿಗಾಗಿ ಶ್ರಮಿಸುತ್ತಿರುವುದು ಅಪಾರ ಮೆಚ್ಚುಗೆ ಪಡೆದಿದೆ .

RELATED ARTICLES  ಮಹಿಳೆಯ ಚಿನ್ನದ ಸರ ಕದ್ದವರು ಪೊಲೀಸ್ ಬಲೆಗೆ : ಇಬ್ಬರನ್ನು ಹೆಡೆಮುರಿ ಕಟ್ಟಿದ ಪೊಲೀಸರು.

ಕಾರವಾರ-ಅಂಕೋಲಾ ಕ್ಷೇತ್ರದ ಹಲವು ಬೂತ್ಗಳಲ್ಲಿ ಹಾಗೂ ಹಲವು ಕೇಂದ್ರಗಳಲ್ಲಿ ನಾಗರಾಜ ನಾಯಕ ಅವರ ಮಾತುಗಳನ್ನು ಕೇಳಲು ಜನರು ಉತ್ಸುಕತೆಯಿಂದ ಕಾಯುವಂತಾಗಿದೆ . ಅದಷ್ಟೇ ಅಲ್ಲದೆ ನಾಗರಾಜ ನಾಯಕರವರು ಬಿಜೆಪಿ ಪಕ್ಷದ ಕುರಿತಾಗಿ ಹಾಗೂ ರೂಪಾಲಿ ನಾಯ್ಕ ಅವರ ಪರವಾಗಿ ಅತ್ಯುತ್ತಮ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ .

RELATED ARTICLES  ಬೆಳ್ಳಂಬೆಳಗ್ಗೆ ಪೊಲೀಸ್ ದಾಳಿ : ಆರೋಪಿಗಳು ಅರೆಸ್ಟ್

ಒಬ್ಬ ನೈಜ ಕಾರ್ಯಕರ್ತ ಹೇಗಿರಬೇಕು ಎನ್ನುವುದನ್ನು ನ್ಯಾಯವಾದಿ ನಾಗರಾಜ ನಾಯಕ ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾರೆ ಎನ್ನುವುದು ಅವರ ಆಪ್ತ ವಲಯದ ಮಾತು . ಶ್ರೀಮತಿ ರೂಪಾಲಿ ನಾಯ್ಕ ಕೂಡ ನಾಗರಾಜ ನಾಯಕ ಅವರನ್ನು ಅಷ್ಟೇ ಪ್ರೀತಿ ಗೌರವದಿಂದ ಕಾಣುತ್ತಿದ್ದು ನಾಗರಾಜ ನಾಯಕರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಿದ್ದಾರೆ .

ಅದೇನೇ ಇರಲಿ, ಟಿಕೆಟ್ ಆಕಾಂಕ್ಷಿ ಯಾಗಿದ್ದರೂ ಈಗ ಪಕ್ಷ ಘೋಷಿಸಿದ ಅಧಿಕೃತ ಅಭ್ಯರ್ಥಿ ಜೊತೆಗೆ ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿಯನ್ನು ಬೆಂಬಲಿಸಿ ಪ್ರಚಾರಕ್ಕೆ ಇಳಿದಿರುವುದು ಅವರ ಘನತೆಯನ್ನು ಹೆಚ್ಚಿಸುವುದರ ಜೊತೆಗೆ ಬಿಜೆಪಿ ವಲಯದಲ್ಲಿಯೂ ಸಂತಸ ಮೂಡುವಂತೆ ಮಾಡಿದ್ದಂತೂ ಸತ್ಯ.

ಸಹಕಾರ: ಜಯದೇವ ಬಳಗಂಡಿ.
ವರದಿ: ಸತ್ವಾಧಾರಾ ನ್ಯೂಸ್.