ಕುಮಟಾ: ತಾಲೂಕಾ ಬ್ಲಾಕ್ ಕಾಂಗ್ರೆಸ್ ಇವರ ವತಿಯಿಂದ ತಾಲೂಕಿನ ಬರ್ಗಿ ಹಾಗೂ ಹಿರೇಗುತ್ತಿ ಪಂಚಾಯತ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿದರು.
ನನಗೆ ಇನ್ನೊಂದು ಅವಧಿಗೆ ಕೆಲಸ ಮಾಡಲು ತಾವು ನನ್ನ ಸಲುವಾಗಿ ಒಂದು ಸ್ವಲ್ಪ ದಿನ ದುಡಿದು,ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿದರೆ ನಾನು ನಿಮಗಾಗಿ 5 ವರ್ಷ ದುಡಿಯುತ್ತೇನೆ ಎಂದರು.
2013 ರಲ್ಲಿ ನಾನು ಶಾಸಕಿಯಾಗಿ ಆಯ್ಕೆಯಾದಾಗ ನನಗೆ ಸ್ವಲ್ಪ ಅಳುಕಿತ್ತು, ಕ್ರಮೇಣ 2014 ರಲ್ಲಿ ನಾನು ಕ್ಷೇತ್ರದಲ್ಲಿ ಮಾಡಬೇಕಾದ ಹಲವು ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿ, ಅದರಲ್ಲಿ ರಸ್ತೆ, ಸೇತುವೆ, ಜಮೀನಿಗೆ ಉಪ್ಪು ನೀರು ನುಗ್ಗದಂತೆ ತಡೆಯುವ ತಡಗೋಡೆ,ನೀರು ಸರಬರಾಜುವಿನಂತ ಯೋಜನೆ ಇರಬಹುದು ಇವಲ್ಲವನ್ನು ನನ್ನ ಶಾಸಕತ್ವದ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನ ಪಟ್ಟು ಅದರಂತೆ ಯಶಸ್ವಿಯಾಗಿದ್ದೇನೆ ಕೂಡ ಎಂದರು.
ಬ್ಲಾಕ್ ಅಧ್ಯಕರಾದ ವಿ ಎಲ್ ನಾಯ್ಕ ಮಾತನಾಡಿ ಸರ್ಕಾರದ ಯೋಜನೆ ಮತ್ತು ಶಾಸಕರ ಸಾಧನೆಗಳನ್ನು ಜನರಿಗೆ ಗೊತ್ತಾಗುವಂತೆ ತಿಳಿಸಿ ಹೇಳಿ ಶಾರದಾ ಶೆಟ್ಟಿಯವರು ಬಹುಮತದಿಂದ ಆಯ್ಕೆಯಾಗುವಂತೆ ನೋಡಿಕೊಳ್ಳಿ ಎಂದರು. ಹಿರೇಗುತ್ತಿ ಘಟಕಾಧ್ಯಕ್ಷರಾದ ಶ್ರೀ ಜಗದೀಶ ಹರಿಕಂತ್ರ ಮಾತನಾಡಿ ಶಾರದಾ ಶೆಟ್ಟಿಯವರ ಸಾಧನೆಗಳನ್ನು ಕೊಂಡಾಡಿದರು.
ಈ ಸಂಧರ್ಭದಲ್ಲಿ ಶ್ರೀಮತಿ ತಾರಾ ಗೌಡ, ಶ್ರೀಮತಿ ಸುರೇಖಾ ವಾರೇಕರ,ಶ್ರೀ ಶಿವರಾಮ ಹರಿಕಂತ್ರ, ಶ್ರೀ ಸಂತೋಷ ನಾಯ್ಕ, ಶ್ರೀ ಹುಸೇನ್ ಶೇಖ,ಶ್ರೀ ವೆಂಕಟೇಶ ನಾಯ್ಕ, ಶ್ರೀ ಗೋವಿಂದ ನಾಯ್ಕ, ಶ್ರೀ ರಮೇಶ ಹರಿಕಂತ್ರ, ಇಸ್ಮಾಯಿಲ್ ಶೇಖ್, ಅದಮ್ ಶೇಖ್, ಸುರೇಶ ಪಟಗಾರ, ನಾಗರಾಜ ನಾಯ್ಕ, ಗೋವಿಂದ ನಾಯ್ಕ, ಗಣಪತಿ ನಟಿಯರ, ದಾವೂದ್ ಸಾಬ್, ಚಂದ್ರಕಲಾ ಆಗೇರ ಹಾಗೂ ಸವಿತಾ ಪಟಗಾರ,ಆನಂದು ನಾಯ್ಕ, ಬೀರಣ್ಣ ನಾಯ್ಕ, ಭವಾನಿ ರೇವಣ್ಕರ್, ಚಂದ್ರಹಾಸ ನಾಯ್ಕ, ಬೊಮ್ಮಯ್ಯ ಹಳ್ಳೇರ,ಸುರೇಶ ರೇವಣಕರ್ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟ್ ಮುಂತಾದವರು ಉಪಸ್ಥಿತರಿದ್ದರು.